ಸೋಮವಾರಪೇಟೆ, ನ. ೨೨ : ಮನೆ ಪಕ್ಕದ ತೋಟದಲ್ಲಿದ್ದ ಮರವೊಂದು ಆಕಸ್ಮಿಕವಾಗಿ ಮನೆ ಮೇಲೆ ಬಿದ್ದ ಪರಿಣಾಮ ವಾಸದ ಮನೆ ಜಖಂಗೊAಡ ಘಟನೆ ಸಮೀಪದ ಯಡವಾರೆ ಗ್ರಾಮದಲ್ಲಿ ನಡೆದಿದೆ.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಓ.ಆರ್. ಉಣ್ಣಿ ಎಂಬುವರ ಮನೆಯ ಮೇಲೆ ವಿಜಯ ಎಂಬವರಿಗೆ ಸೇರಿದ ತೋಟದಲ್ಲಿದ್ದ ಭಾರೀ ಗಾತ್ರದ ಮರ ಉರುಳಿದ ಪರಿಣಾಮ ಮನೆ ಭಾಗಶಃ ಜಖಂಗೊAಡಿದ್ದು, ಹಾನಿ ಸಂಭವಿಸಿದೆ.
ಮನೆಯಲ್ಲಿ ಉಣ್ಣಿ ಅವರ ಮಕ್ಕಳು, ಮೂವರು ಮೊಮ್ಮಕ್ಕಳು ಸೇರಿದಂತೆ ಆರು ಮಂದಿ ಇದ್ದ ಸಂದರ್ಭ ಮರ ಉರುಳಿಬಿದ್ದಿದ್ದು, ಮನೆಯ ಅಟ್ಟ ತಡೆದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಐಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮುತ್ತಕ್ಕ, ಸದಸ್ಯರುಗಳಾದ ಪ್ರಮೋದ್, ವಿನು, ಜುನೈದ್, ಪಿಡಿಒ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಮತ್ತು ತಾಲೂಕು ಕಚೇರಿಯಿಂದ ಪರಿಹಾರ ಕೊಡಿಸಬೇಕೆಂದು ಉಣ್ಣಿಯವರು ಮನವಿ ಮಾಡಿದ್ದಾರೆ.