ಕೂಡಿಗೆ, ನ. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆ ಹೊಸೂರು ಸಮೀಪದ ಜೇನುಕಲ್ಲು ಬೆಟ್ಟದ ಗ್ರಾಮದಲ್ಲಿರುವ ಶ್ರೀ ಉದ್ಭವ ಕಾಡು ಬಸವಣ್ಣ ದೇವರ ವಾರ್ಷಿಕ ಪೂಜ್ಯೋತ್ಸವು ಹೋಮ ಹವನಗಳ ಮೂಲಕ ದೇವಾಲಯ ಆವರಣದಲ್ಲಿ ನಡೆಯಿತು.

ವಾರ್ಷಿಕ ಪೂಜೆಯ ಅಂಗವಾಗಿ ಬೆಳಿಗ್ಗಿನಿಂದ ವಿಶೇಷ ಪೂಜೆ, ರುದ್ರಹೋಮ ಅಭಿಷೇಕ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ ನಡೆದು ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಶ್ರೀ ಉದ್ಭವ ಕಾಡು ಬಸವಣ್ಣ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಸಿ. ನಂಜುAಡ ಸ್ವಾಮಿ, ಕಾರ್ಯದರ್ಶಿ ಬಸವರಾಜ್, ಸದಸ್ಯರಾದ ಅಪ್ಪಾಜಿಗೌಡ, ರವಿ, ಚಾಮಿ, ದೇವರಾಜ್ ಸೇರಿದಂತೆ ಸೀಗೆಹೊಸೂರು, ಜೇನುಕಲ್ಲುಬೆಟ್ಟ, ಭುವನಗಿರಿ ಗ್ರಾಮಗಳ ನೂರಾರು ಮಂದಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.