*ಸಿದ್ದಾಪುರ, ನ. ೨೨ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ಭುವನೇಂದ್ರ, ನಾಲ್ವರು ಗ್ರಾ.ಪಂ ಸದಸ್ಯರು ಸೇರಿದಂತೆ ಐವತ್ತಕ್ಕೂ ಅಧಿಕ ಮಂದಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ವಾಲ್ನೂರು ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ನೇತೃತ್ವದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭುವನೇಂದ್ರ, ಸದಸ್ಯರಾದ ಜಲ, ಮಂಜುಳ, ಸುಧಾ ಪ್ರಮುಖರಾದ ಕೊಳಂಬೆ ವಿನು ಸೇರಿದಂತೆ ಹಲವರು ಬಿಜೆಪಿಗೆ ಸೇರಿದರು. ಈ ಸಂದರ್ಭ ಮಾತನಾಡಿದ ಶಾಸಕರು ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತವನ್ನು ಒಪ್ಪಿಕೊಂಡು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಆಡಳಿತವನ್ನು ಮೆಚ್ಚಿ ಯುವ ಸಮೂಹ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದು ಸ್ವಾಗತಾರ್ಹ ಎಂದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕಾಳಜಿ, ರಾಷ್ಟಿçÃಯ ಭದ್ರತೆ, ಅಭಿವೃದ್ಧಿ, ಯೋಜನೆಗಳ ಪ್ರಭಾವ ಇಂದು ಯುವ ಸಮುದಾಯ ವನ್ನು ಭಾರತೀಯ ಜನತಾ ಪಾರ್ಟಿಯತ್ತ ಸೆಳೆಯುವಂತೆ ಮಾಡಿದೆ. ಇಂದು ವಿಶ್ವಸಂಸ್ಥೆಯಲ್ಲಿ ಭಾರತದಿಂದ ಸಲಹೆ ಪಡೆಯುವ ಸನ್ನಿವೇಶ ಬಂದಿರುವುದು ನರೇಂದ್ರ ಮೋದಿಯವರಿಂದ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ವಾಲ್ನೂರು ಗ್ರಾ.ಪಂ ಅಧ್ಯಕ್ಷೆ ಅನಿತಾ, ತಾ.ಪಂ ಮಾಜಿ ಅಧ್ಯಕ್ಷ ರಘು ಆನಂದ, ಮಾಜಿ ಸದಸ್ಯ ಅಪ್ರು ರವೀಂದ್ರ, ವಾಲ್ನೂರು ಗ್ರಾ.ಪಂ ಉಪಾಧ್ಯಕ್ಷೆ ಸುಧಾ, ಸದಸ್ಯರಾದ ಗಣೇಶ್, ಮನು ಮಹೇಶ್, ಬಿಜೆಪಿ ಸೋಮವಾರಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ಗೌತಮ್, ಮೋಕ್ಷಿತ್, ಯುವ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶರಣ್, ಯುವ ಮೋರ್ಚಾ ಸೋಮವಾರಪೇಟೆ ಮಂಡಲ ಅಧ್ಯಕ್ಷ ಚಂದ್ರಶೇಖರ್, ವಾಲ್ನೂರು ಶಕ್ತಿ ಕೇಂದ್ರ ಸಹ ಪ್ರಮುಖ್ ರಾಜೇಶ್, ಪಕ್ಷದ ಪ್ರಮುಖರಾದ ಪ್ರದೀಪ್ ಉಪಸ್ಥಿತರಿದ್ದರು.