(ಅನಿಲ್ ಎಚ್.ಟಿ.)
ಮಡಿಕೇರಿ, ನ. ೨೨: ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಕಾಡಾನೆ ದಾಂಧಲೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಚಿಸಿರುವ ಆನೆ ಟಾಸ್ಕ್ ಫೋರ್ಸ್ ಮೇಲ್ನೋಟಕ್ಕೆ ಸೂಕ್ತ ಯೋಜನೆಯಾಗಿ ಕಂಡರೂ ಕೊಡಗಿನಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
ಕೊಡಗೂ ಸೇರಿದಂತೆ ರಾಜ್ಯದ ಹಾಸನ, ಚಿಕ್ಕಮಗಳೂರು, ಮೈಸೂರು, ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಳವಾಗಿ, ಜನ ರೊಚ್ಚಿಗೆದ್ದ ಹಿನ್ನಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ ಕಾಡಾನೆ ಧಾಳಿ ತಡೆಗಟ್ಟಲು ಪ್ರತಿ ಜಿಲ್ಲೆಗೊಂದರAತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲಿಫೆಂಟ್ ಟಾಸ್ಕ್ಫೋರ್ಸ್ ರಚಿಸಿ ಆದೇಶ ಹೊರಡಿಸಿದೆ.
ಈ ಟಾಸ್ಕ್ ಫೋರ್ಸ್ಗಳಿಗೆ ಆಯಾ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೇ ಮುಖ್ಯಸ್ಥರಾಗಿರುತ್ತಾರೆ. ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು, ಜನವಸತಿ, ಕೃಷಿ ಪ್ರದೇಶ ಹಾಗೂ ಕಾಫಿ ಎಸ್ಟೇಟ್ ಗಳಲ್ಲಿ ಆನೆಗಳ ಚಲನವಲನ ಗುರುತಿಸಿ ಅರಣ್ಯಕ್ಕೆ ಆನೆಗಳನ್ನು ಹಿಮ್ಮೆಟ್ಟಿಸುವುದು ಮುಂತಾದ ಕಾರ್ಯಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಕೈಗೊಳ್ಳಬೇಕಾಗಿದೆ. ಕಾಡಾನೆ ಹಾವಳಿ ಕಂಡುಬರುವ ಸ್ಥಳಗಳಲ್ಲಿ ಆನೆಗಳ ಚಲನವಲನ ಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಅರಣ್ಯ ಪ್ರದೇಶದೊಳಗೆ ಸಂಚರಿಸದAತೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು. ಕೂಡ ಟಾಸ್ಕ್ ಫೋರ್ಸ್ ಕಾರ್ಯವಾಗಿದೆ.
ವ್ಯವಸ್ಥೆಗಳು
ಪ್ರತಿ ಟಾಸ್ಕ್ ಫೋರ್ಸ್ ಕೇಂದ್ರಸ್ಥಾನದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು. ಅರಣ್ಯ ಪಡೆ ಮುಖ್ಯಸ್ಥರು ಜಿಲ್ಲಾ ಟಾಸ್ಕ್ಫೋರ್ಸ್ಗೆ ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕರನ್ನು ಸ್ಥಳಕ್ಕೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸುವಂತೆಯೂ ಸರ್ಕಾರದ ಆದೇಶ ತಿಳಿಸಿದೆ.
ಆನೆ ಹಾವಳಿ ಪ್ರದೇಶಗಳಿಗೆ ಕೂಡಲೇ ತಲುಪಲು ಅನುಕೂಲ ವಾಗುವಂತೆ ಪ್ರತಿ ಜಿಲ್ಲಾ ಟಾಸ್ಕ್ ಫೋರ್ಸ್ಗೆ ೩ ಬೊಲೆರೋ ಜೀಪ್‌ಗಳನ್ನು ಒದಗಿಸುವುದು ಹಾಗೂ ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನಿಯೋಜಿಸುವಂತೆಯೂ ಆದೇಶದಲ್ಲಿ ಹೇಳಲಾಗಿದೆ.
ಗೊಂದಲ ಸಾಧ್ಯತೆ
ಆದರೆ ಕೊಡಗು ಜಿಲ್ಲೆಯಲ್ಲಿ ಈ ವಿಚಾರಕ್ಕೆ ಸಂಬAಧಿಸಿದAತೆ ಕೆಲವೊಂದು (ಅನಿಲ್ ಎಚ್.ಟಿ.)

ಆದರೆ ಕೊಡಗು ಜಿಲ್ಲೆಯಲ್ಲಿ ಈ ವಿಚಾರಕ್ಕೆ ಸಂಬAಧಿಸಿದAತೆ ಕೆಲವೊಂದು ಸಾಧ್ಯವಾಗುತ್ತಿದೆ. ಆದರೆ ಸರ್ಕಾರದ ಹೊಸ ಕಾರ್ಯಪಡೆ ಯಿಂದಾಗಿ ೩ ವಾಹನಗಳನ್ನು ತಲಾ ೧ ರಂತೆ ಮೂರು ವಿಭಾಗಗಳಿಗೆ ನೀಡಿದರೂ ಮಲೆನಾಡು ಜಿಲ್ಲೆಯಾದ ಕೊಡಗಿನಲ್ಲಿ ದೂರದ ಅಂತರವನ್ನು ಕ್ಷಣಮಾತ್ರದಲ್ಲಿ ಕಾರ್ಯಪಡೆ ತಲುಪುವುದು ಕಷ್ಟಸಾಧ್ಯ. ಉದಾ: ಮಡಿಕೇರಿಯಿಂದ ಭಾಗಮಂಡಲ ವ್ಯಾಪ್ತಿಗೆ ಕನಿಷ್ಟ ೪೫ ನಿಮಿಷ ಬೇಕು. ಕಾಡಾನೆಗಳು ಅಷ್ಟು ಹೊತ್ತಿಗೆ ಮಾಡಬೇಕಾದ ಧಾಳಿಯನ್ನೆಲ್ಲಾ ಮಾಡಿ ಮುಗಿಸಿರುತ್ತದೆ.
ನಿಯೋಜನೆ ಸಮಸ್ಯೆ
ಪ್ರಸ್ತುತ ಕ್ಷಿಪ್ರಪಡೆಯ ೧೩೦ ಸಿಬ್ಬಂದಿಗಳು ಸ್ಥಳೀಯರೇ ಆಗಿದ್ದಾರೆ. ಇವರು ಕೆಲವು ವರ್ಷಗಳಿಂದ ತಮ್ಮ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಕಾಡಾನೆಗಳು ಧಾಳಿ ಮಾಡುತ್ತಿದೆ ಎಂದು ಚೆನ್ನಾಗಿ ಅರಿತಿದ್ದಾರೆ. ಸ್ಥಳೀಯರ ಮನಸ್ಥಿತಿಯೂ ಈ ಸಿಬ್ಬಂದಿಗಳಿಗೆ ತಿಳಿದಿದೆ. ತೋಟ, ಗಿರಿಕಂದರಗಳ ಪರಿಚಯ ಚೆನ್ನಾಗಿರುವ ಸ್ಥಳೀಯರು ಕೆಲವೇ ನಿಮಿಷಗಳಲ್ಲಿ ಕಾಡಾನೆ ದಾಂಧಲೆ ನಿರತ ಸ್ಥಳ ತಲುಪಿ ಕಾರ್ಯಾಚರಣೆಗೆ ಸನ್ನದ್ದರಾಗಿದ್ದಾರೆ. ಆದರೆ ೩೦ ಸಿಬ್ಬಂದಿಗಳನ್ನು ಕೊಡಗು ಜಿಲ್ಲೆಯಾದ್ಯಂತ ಕಾಡಾನೆ ಧಾಳಿ ನಿಯಂತ್ರಣಕ್ಕೆ ಎಲ್ಲೆಲ್ಲಿಗೆ ನಿಯೋಜಿಸಬೇಕು ಎಂಬುದೇ ಸಮಸ್ಯೆಯಾಗಿ ಪರಿಣಮಿಸಲಿದೆ.
ಹೆಚ್ಚಿನ ವಾಹನಗಳ ಅಗತ್ಯವಿದೆ ಎಂದು ಅರಣ್ಯ ಇಲಾಖೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರೂ ಇದೀಗ ೫ ತಾಲೂಕುಗಳ ಜಿಲ್ಲೆಗೆ ೩ ವಾಹನಗಳನ್ನು ಕಾಡಾನೆ ಟಾಸ್ಕ್ ಫೋರ್ಸ್ಗೆ ನೀಡಿದೆ. ೩ ವಾಹನಗಳು ಖಂಡಿತಾ ಸಾಲದು ಎಂಬುದು ಅಧಿಕಾರಿಗಳ ಅಭಿಪ್ರಾಯ.
ಸರ್ಕಾರ ಟಾಸ್ಕ್ ಫೋರ್ಸ್ಗೆ ನೀಡಿರುವ ವಾಕಿಟಾಕಿ, ಪಟಾಕಿ, ಬಂದೂಕು ಇತ್ಯಾದಿ ಈಗಾಗಲೇ ಇಲಾಖೆಯಲ್ಲಿದೆ. ಇವುಗಳಿಂದ ಪರಿಣಾಮಕಾರಿಯಾಗಿ ಕಾಡಾನೆ ನಿಯಂತ್ರಣ ಸಾಧ್ಯವಾಗಿಲ್ಲ. ಹೊಸ ತಂತ್ರಜ್ಞಾನದ ನೆರವು ನೀಡಿದ್ದರೆ ಸೂಕ್ತವಿತ್ತು ಎಂಬುದೂ ಅನೇಕ ತಜ್ಞರ ಅನಿಸಿಕೆ.
ಮೂಡಿಗೆರೆ ಶಾಸಕರ ಮೇಲೆ ಕಾಡಾನೆ ವಿಚಾರದಲ್ಲಿ ಸ್ಥಳೀಯರು ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ತ್ವರಿತಗತಿಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸಿದೆ. ಆದರೆ ಕಾಡಾನೆ ನಿಯಂತ್ರಣಕ್ಕೆ ಅತ್ಯಗತ್ಯವಾಗಿದ್ದ ಸೂಕ್ಷö್ಮ ವಿಚಾರಗಳನ್ನು ಚಿಂತಿಸದೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗದೇ ಹೆಸರಿಗೊಂದು ಟಾಸ್ಕ್ ಫೋರ್ಸ್ ಮಾಡಿದಂತಿದೆ.
ಕಾಡಾನೆ ಧಾಳಿಯಿರುವ ಜಿಲ್ಲೆಗಳ ಶಾಸಕರು, ಬೆಳೆಗಾರ ಸಂಘಟನೆಗಳ ನಾಯಕರು, ಸಂಘಸAಸ್ಥೆಗಳ ಪ್ರಮುಖರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಅವರ ಮಾಹಿತಿ ಆಧರಿಸಿ ಶಾಶ್ವತ ಕ್ರಮಕ್ಕೆ ಸರ್ಕಾರ ಮುಂದಾಗಿದ್ದರೆ ಸೂಕ್ತವಿತ್ತು. ಇದೀಗ ಎಲಿಫೆಂಟ್ ಟಾಸ್ಕ್ ಫೋರ್ಸ್ ಹೊಸ ಬಾಟಲಿಯಲ್ಲಿ ಹಳೇ ಮದ್ಯದಂತಿದೆ ಅಷ್ಟೇ.!