ಮಡಿಕೇರಿ, ನ. ೨೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬೋದಕ ಆಸ್ಪತ್ರೆ) ವತಿಯಿಂದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ನವಜಾತ ಶಿಶು ಆರೈಕೆ ಸಪ್ತಾಹ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಆರ್‌ಸಿಎಚ್ ಅಧಿಕಾರಿ ಡಾ. ಗೋಪಿನಾಥ್ ಅವರು ಮಾತನಾಡಿ, ಭಾರತದಲ್ಲಿ ಪ್ರತೀ ವರ್ಷ ನವೆಂಬರ್ ೧೫ ರಿಂದ ೨೧ ರವರೆಗೆ ನವಜಾತ ಶಿಶು ಆರೈಕೆ ಕುರಿತು ಸಾಪ್ತಾಹಿಕ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ನವಜಾತ ಶಿಶುಗಳ ಜೀವ ರಕ್ಷಣೆ ಮತ್ತು ಬೆಳವಣಿಗೆ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ನವೆಂಬರ್ ಮಾಹೆಯಿಂದ ಫೆಬ್ರವರಿ ೨೮ ರವರೆಗೆ ಸ್ಯಾನ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಶಾ ಕಾರ್ಯಕರ್ತೆ, ಆರೋಗ್ಯ ಸಿಬ್ಬಂದಿಗಳಿAದ ೫ ವರ್ಷದೊಳಗಿನ ಮಕ್ಕಳು, ಗರ್ಭಿಣಿಯರುಗಳಿಗೆ ಮಾಹಿತಿ ನೀಡಿ ಕಾರಣ ಹುಡುಕಿ ತ್ವರಿತ ಪತ್ತೆ ಚಿಕಿತ್ಸೆ ನಿರ್ವಹಣೆಯಿಂದ ಜನ್ಮ ದೋಷಗಳು ಹಾಗೂ ಗಂಡಾAತರಗಳ ನಿರ್ವಹಣೆ ಮತ್ತು ರಕ್ಷಣೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ರೈ ಅವರು ಮಾತನಾಡಿ, ನವಜಾತ ಶಿಶು ಆರೈಕೆ ಕಾರ್ಯಕ್ರಮ ಹಾಗೂ ಇತರೆ ಆರೋಗ್ಯ ಕಾರ್ಯಕ್ರಮಗಳಲ್ಲಿ ಮೊದಲ ಆದ್ಯತೆಯಾಗಿ ಯಾವುದೇ ತುರ್ತು ಸಂದರ್ಭಗಳಲ್ಲಿಯೂ ಸ್ಪಂದಿಸಲು ಸಂಸ್ಥೆ ಸಿದ್ದ ಹಾಗೂ ಮುಂದಿನ ದಿನಗಳಲ್ಲಿ ಎಲ್ಲಾ ಅಗತ್ಯ ಸೇವೆಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಕೊ.ವೈ.ವಿ. ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ರಾಮಚಂದ್ರ ಕಾಮತ್ ಅವರು ಮಾತನಾಡಿ, ಪ್ರತಿಯೊಂದು ಮನೆಗೂ ಮಗು ಬಂದರೆ ಸಂಭ್ರಮದ ದಿನ ಎಂದು ತಿಳಿಸುತ್ತಾ ತಾಯಿ ಮತ್ತು ಮಗುವಿನ ಬಾಂಧವ್ಯದ ಮಹತ್ವ, ಅನ್ಯೋನ್ಯತೆ ಅಸದಳ. ಮಗುವಿನ ಜನನದ ಪ್ರಾರಂಭದ ೨೮ ದಿನಗಳು ಅತೀ ಮುಖ್ಯ. ಈ ಸಮಯದಲ್ಲಿ ನವಜಾತ ಶಿಶುಗಳ ಆರೈಕೆ, ತಾಯಿಯ ಎದೆ ಹಾಲಿನ ಮಹತ್ವ, ಪೂರಕ ವಾತಾವರಣ, ಶಿಶುಗಳ ಬೆಳವಣಿಗೆಗೆ ತಕ್ಕಂತೆ ಪೌಷ್ಠಿಕ ಆಹಾರ, ಶುಚಿತ್ವ ಅತೀ ಮುಖ್ಯ. ಮಗುವನ್ನು ಬೆಚ್ಚಗಿಡುವುದು, ಮಗುವಿನ ಅಭಿವೃದ್ದಿ, ಚಟುವಟಿಕೆ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಅತ್ಯವಶ್ಯಕ. ಅಲ್ಲದೇ ಮಗು ಬಾಯಾರಿಕೆ ಆದಾಗ, ಹಸಿವಾದಾಗ ಅಳುತ್ತದೆ. ಶುಭ್ರವಾದ ಸ್ವಚ್ಚ ವಾತಾವರಣ ಇಲ್ಲದಿದ್ದರೆ ಅತಿಸಾರ ಬೇಧಿ, ಅಪೌಷ್ಠಿಕತೆ, ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.

ಶುಶ್ರೂಷಣಾಧಿಕಾರಿ ವೀಣಾ ಅವರು ಮಾತನಾಡಿ, ತಾಯಿ ಗರ್ಭಿಣಿಯಾದಾಗಿನಿಂದ ತಾಯಿಯೊಂದಿಗೆ ಮಗುವಿನ ಆರೈಕೆ ಪ್ರಾರಂಭವಾಗುತ್ತದೆ. ಯಾವುದೇ ರೀತಿಯ ತೊಂದರೆಗಳು ಕಂಡುಬAದರೆ ನಿರ್ಲಕ್ಷö್ಯ ಮಾಡದೇ ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳಲು ತಿಳಿಸಿದರು.

ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಮಂಜುಳಾ ಅವರು ಮಾತನಾಡಿ, ಭಾರತ ಸರ್ಕಾರವು ೨೦೩೦ನೇ ಇಸವಿ ಒಳಗೆ ನವಜಾತ ಶಿಶುಗಳ ಮರಣದ ದರವನ್ನು ಸಾವಿರ ಜೀವಂತ ಜನನಕ್ಕೆ ೧೦ ಕ್ಕಿಂತಲೂ ಕಡಿಮೆ ಮಾಡುವುದು ಶಿಶುಗಳಲ್ಲಿ ಲಿಂಗ ತಾರತಮ್ಯತೆ ತೋರದೆ ಎಲ್ಲಾ ಮಕ್ಕಳನ್ನು ಒಂದೇ ರೀತಿ ಕಾಣುವಂತೆ ತಿಳಿಸಿದರು.

ಕೊ.ವೈ.ವಿ.ಸಂ. ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಪುರುಷೋತ್ತಮ್ ಅವರು ಮಾತನಾಡಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಮೊದಲು ೧೦ ಹಾಸಿಗೆಯುಳ್ಳ ನವಜಾತ ಶಿಶು ಆರೈಕೆ ಕೇಂದ್ರ ಇದ್ದು, ಕೋವಿಡ್ ಸಮಯದಲ್ಲಿ ರಾಜ್ಯ ಸರ್ಕಾರ ೨೦ ಕೋಟಿಯಷ್ಟು ಬೆಲೆಬಾಳುವ ಉಪಕರಣಗಳ ನೆರವಿನೊಂದಿಗೆ ಈಗ ೧೭ ಹಾಸಿಗೆಯುಳ್ಳ ಎನ್.ಐ.ಸಿ.ಯು ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ನAತರ ಕಾರ್ಯಕ್ರಮದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ, ಕಿರುನಾಟಕ, ಕವನ, ಕೊಳಲುವಾದನ ಕಾರ್ಯಕ್ರಮ ಹಮ್ಮಿಕೊಂಡು ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವೈದ್ಯಕೀಯ ವಿದ್ಯಾರ್ಥಿಗಳು, ಮಕ್ಕಳ ತಜ್ಞರು, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕು.ಕ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು, ತಾಯಂದಿರು, ಪೋಷಕರು ಹಾಜರಿದ್ದರು.

ಮಕ್ಕಳ ತಜ್ಞರಾದ ಡಾ.ದಿವ್ಯರಾಣಿ ಅವರು ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟಿ.ಎನ್. ಪಾಲಾಕ್ಷ ನಿರೂಪಿಸಿದರು. ಕೊ.ವೈ.ವಿ.ಸಂ. ಮಕ್ಕಳ ತಜ್ಞರಾದ ಡಾ. ರವಿಚಂದ್ರ ಅವರು ವಂದಿಸಿದರು.