ವೀರಾಜಪೇಟೆ, ನ. ೨೨: ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ವತಿಯಿಂದ ೧೧ನೇ ವಾರ್ಷಿಕೋತ್ಸವದ ಪ್ರಯುಕ್ತ ಡಿಸೆಂಬರ್ ೩ ಮತ್ತು ೪ ರಂದು ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಜಿಲ್ಲಾ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟವನ್ನು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಶಿಯೇಷನ್ ಮೂಲಕ ಆಯೋಜಿಸಲಾಗಿದೆ ಎಂದು ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ಅಧ್ಯಕ್ಷ ಇ.ಪಿ ನೆಲ್ಸನ್ ಹೇಳಿದರು.
ವೀರಾಜಪೇಟೆ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೧ ವರ್ಷಗಳಿಂದ ಸಂಘದ ವತಿಯಿಂದ ವಿವಿಧ ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ಸಂಘದಲ್ಲಿ ೪೦ ಸದಸ್ಯರಿದ್ದಾರೆ. ಪಂದ್ಯಾಟವನ್ನು ಮೇ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ವಿಪರೀತ ಮಳೆಯ ಕಾರಣದಿಂದಾಗಿ ಮುಂದೂಡಲಾಗಿತ್ತು. ಪ್ರಥಮ ಬಾರಿಗೆ ೭+೨ ಪಂದ್ಯಾಟವನ್ನು ಆಯೋಜಿಸಲಾಗಿದೆ. ಈ ಪಂದ್ಯಾಟವನ್ನು ಯಾವುದೇ ಜಾತಿ, ಮತ, ಧರ್ಮ, ಭೇದ, ಪಂಕ್ತಿ ಇಲ್ಲದೆ ನಡೆಸಲಾಗುವುದು. ವಿಜೇತರಿಗೆ ನಗದು ಹಾಗು ಆಕರ್ಷಕ ಟ್ರೋಫಿ ನೀಡಲಾಗುವುದು. ತಂಡದ ಹೆಸರು ನೋಂದಾವಣೆಗೆ ತಾ. ೨೭ ಕೊನೆಯ ದಿನವಾಗಿದ್ದು ಮೊದಲು ಬಂದ ೨೦ ತಂಡಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಬರ್ಟ್ ಲಾಝರ್, ಕಾರ್ಯದರ್ಶಿ ಕೆ.ಜ ವರ್ಗಿಸ್, ಕೋಶಾಧಿಕಾರಿ ಬ್ಲೇಸಿ ಸಿಕ್ವೇರಾ, ನಿರ್ದೇಶಕರುಗಳಾದ ರ‍್ವಿನ್ ಲೋಬೋ, ಜೂಡಿವಾಝ್ ಉಪಸ್ಥಿತರಿದ್ದರು.