ಶ್ರೀಮಂಗಲ, ನ. ೨೨: ಅಂತಾರಾಷ್ಟಿçÃಯ ಸ್ಕೀಯಿಂಗ್ ಸ್ಪರ್ಧೆಗೆ ಅರ್ಹತೆ ಪಡೆದಿರುವ ಕೊಡಗಿನ ತೆಕ್ಕಡ ಭವಾನಿ ಅವರಿಗೆ ರಾಜ್ಯ ಮಾಜಿ ಅಡ್ವೋಕೇಟ್ ಜನರಲ್ ಮತ್ತು ಕಾಂಗ್ರೆಸ್ ಪಕ್ಷ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ನೆರವು ನೀಡಿದರು.
ಇಟಲಿಯಲ್ಲಿ ನಡೆಯುವ ತರಬೇತಿಗೆ ಭಾಗವಹಿಸಲು ಭವಾನಿ ಅವರು ಸದ್ಯದಲ್ಲಿಯೇ ತೆರಳಲಿದ್ದಾರೆ. ಪೋಷಕರ ಮನವಿ ಮೇರೆಗೆ ಪೊನ್ನಣ್ಣ ಅವರು ನೆರವು ನೀಡಿ,ಶುಭ ಹಾರೈಸಿದರು.
ಭವಾನಿ ಅವರ ಪೋಷಕರಾದ ನಾಪೋಕ್ಲುವಿನ ತೆಕ್ಕಡ ನಂಜುAಡ (ಶಂಭು)-ಪಾರ್ವತಿ (ದಿವ್ಯ)ಅವರು ನೆರವು ಸ್ವೀಕರಿಸಿದರು.ಭವಾನಿ ರಷ್ಯಾದ ಅತಿ ಎತ್ತರದ ಮೌಂಟ್ ಎಲ್ ಬ್ರಸ್‌ನಲ್ಲಿ ಭಾರತ ಧ್ವಜ ನೆಟ್ಟ ಕೊಡಗಿನ ಯುವತಿ ಆಗಿದ್ದಾಳೆ.