ವೀರಾಜಪೇಟೆ, ನ. ೨೧: ವಿದ್ಯಾರ್ಥಿಗಳು ದೇಶದ ಮುಂದಿನ ಪ್ರಜೆಗಳು, ಅವರು ನಾಯಕತ್ವವನ್ನು ಬೆಳೆಸಿಕೊಂಡು ಮುಂದೆ ದೇಶದ ಚುಕ್ಕಾಣಿಯನ್ನು ಹಿಡಿಯಬೇಕು ಎಂದು ಹಿರಿಯ ಸಾಹಿತಿ ಕಿಗ್ಗಾಲು ಎಸ್. ಗಿರೀಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಸಮೀಪದ ದೇವಣಗೇರಿ ಬಿ.ಸಿ. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟಕರಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಯಕನ ಲಕ್ಷಣಗಳ ಬಗ್ಗೆ ವಿವರಿಸಿದರು. ಇದೇ ಸಮಯದಲ್ಲಿ ಶಾಲೆಯ ಪುಸ್ತಕ ಭಂಡಾರಕ್ಕೆ ಹಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇಂದAಡ ಪೊನ್ನಪ್ಪ ಅವರು ವಹಿಸಿ, ವಿದ್ಯಾರ್ಥಿಗಳಿಗೆ ಹಿತವಚನವನ್ನು ಮಾಡಿದರು.

ಮುಖ್ಯಶಿಕ್ಷಕ ಹೆಚ್.ಡಿ. ಲೋಕೇಶ್ ಸ್ವಾಗತಿಸಿದರು. ಪ್ರಮೀಳ ಕುಮಾರಿ ನಿರೂಪಿಸಿದರು. ನಂದಿನಿ ಎಸ್. ವಂದನಾರ್ಪಣೆ ನೆರವೇರಿಸಿದರು.