ಮಡಿಕೇರಿ, ನ. ೨೧: ತಮ್ಮ ಸೇವೆ ಖಾಯಂಗೊಳಿಸಬೇಕು, ರೂ. ೧೫ ಸಾವಿರ ಪ್ರೋತ್ಸಾಹಧನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ರಾಷ್ಟಿçÃಯ ಆರೋಗ್ಯ ಅಭಿಯಾನದಡಿಯಲ್ಲಿ ೨೦೧೬-೧೭ನೇ ಸಾಲಿನಿಂದ ಸಮು ದಾಯ ಆರೋಗ್ಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಪ್ರಾಥಮಿಕ ಸಮಗ್ರ ೧೨ ಆರೋಗ್ಯ ಸೇವೆಗಳನ್ನು ಹೊರತುಪಡಿಸಿ ಇಲಾಖೆಯ ಬೇರೆ ಬೇರೆ ಕೆಲಸಗಳಲ್ಲಿ ದುಡಿಸಿ ಕೊಳ್ಳಲಾಗುತ್ತಿದೆ.
ಆರೋಗ್ಯ ಕೇಂದ್ರದ ಸ್ವಚ್ಛತೆಯನ್ನು ಅಧಿಕಾರಿಗಳೇ ತಮ್ಮ ಸ್ವಂತ ಹಣ ಹಾಕಿ ಮಾಡಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ. ಬೇರೆ ರಾಜ್ಯಗಳಲ್ಲಿ ರೂ. ೧೫ ಸಾವಿರ ಪ್ರೋತ್ಸಾಹಧನ ಇದ್ದರೂ ಕರ್ನಾಟಕದಲ್ಲಿ ಕೇವಲ ರೂ. ೮ ಸಾವಿರ ಮಾತ್ರ ಕೊಡಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ಡಿಹೆಚ್ಓ ಡಾ. ವೆಂಕಟೇಶ್ ಗಮನಕ್ಕೆ ತಂದರು.
ಈ ಸಂದರ್ಭ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ್ ಕೆ.ಸಿ., ತಮ್ಮ ಕೆಲಸಕ್ಕೆ ಅಡ್ಡಿ ಆಗುವ ಕಿರುಕುಳಗಳನ್ನು ನಿಲ್ಲಿಸಬೇಕು.
ಉದ್ದೇಶಪೂರ್ವಕವಾಗಿ ಗ್ರಾಮೀಣ ಸೇವೆಯಿಂದ ವಿಭಜನೆ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸರಕಾರದ ಮಹತ್ವದ ಯೋಜನೆಯಲ್ಲಿ ದುಡಿಯುತ್ತಿರುವ ಪದವೀಧರ ಮತ್ತು ಪರಿಣಿತ ಆರೋಗ್ಯ ಅಧಿಕಾರಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳ ಬೇಕು ಎಂದು ತಿಳಿಸಿದರು.
ತಮ್ಮ ಬೇಡಿಕೆಗಳು ಇರುವ ಮನವಿಯನ್ನು ಸಮುದಾಯ ಆರೋಗ್ಯ ಅಧಿಕಾರಿಗಳು ಡಿಹೆಚ್ಓ ಮುಖಾಂತರ ರಾಷ್ಟಿçÃಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರಿಗೆ ಕಳುಹಿಸಿಕೊಟ್ಟರು. ಆರ್ಸಿಹೆಚ್ಓ ಡಾ. ಗೋಪಿನಾಥ್, ಡಿಪಿಸಿ ಡಾ. ಶಾಂಭವಿ ಈ ವೇಳೆ ಇದ್ದರು.
ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಉಪಾಧ್ಯಕ್ಷೆ ರಮ್ಯಾ ವಿ., ಪ್ರಧಾನ ಕಾರ್ಯದರ್ಶಿ ದೀಪು ಎಸ್.ಆರ್., ಮಿಲನ್ ಕೆ.ಪಿ., ಸಹಕಾರ್ಯದರ್ಶಿ ವಿಕ್ರಂ ಎ.ಯು., ಖಜಾಂಚಿಗಳಾದ ಪ್ರಿಯಾ ಎ.ಎಂ., ಮನು ಎನ್. ಪದಾಧಿಕಾರಿಗಳಾದ ಪುಷ್ಪಾ ವಸಂತ್ ಬಡಿಗೇರ್, ವಿದ್ಯಾ ಬಿ.ಆರ್., ಧರಣೇಶ್ ಜೆ.ಡಿ., ಬ್ರಿಜೇಶ್ ಬಿ.ಎನ್., ಭರತ್ ಎಸ್.ಎಲ್., ಶಶಿಧರ್ ಹೆಚ್.ಆರ್., ಸುನಿಲ್ ಎ.ಎಸ್., ಭವ್ಯಾ ಕೆ.ಕೆ., ದುಶ್ಯಂತ್ ಪಿ.ವಿ., ವನಿತಾ, ಸಂಜಯ್, ಸಿಂಧು ಸೇರಿದಂತೆ ಜಿಲ್ಲೆಯಾದ್ಯಂತ ಸೇವೆ ಸಲ್ಲಿಸುತ್ತಿರುವ ೧೩೦ ಮಂದಿ ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.