ಮಡಿಕೇರಿ, ನ. ೨೨: ಮೇಕೇರಿ -ಮೂರ್ನಾಡ್ ರಸ್ತೆಯ ಶಾಂತಿ ಎಸ್ಟೇಟ್ ಬಳಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಜಿ ಬೋಪಯ್ಯ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು. ೫೨ ಲಕ್ಷ ರೂಪಾಯಿ ವೆಚ್ಚದ ೮೦೦ ಮೀಟರ್ ರಸ್ತೆ ಇದಾಗಿದ್ದು ಕಾಮಗಾರಿ ಉತ್ತಮ ಗುಣಮಟ್ಟದಿಂದ ಇರಬೇಕು ಎಂದು ಕೆ.ಜಿ.ಬೋಪಯ್ಯ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ದಿನೇಶ್ ಬಿ.ಬಿ, ಉಪಾಧ್ಯಕ್ಷÀ ರಕ್ಷಿತ್, ಸದಸ್ಯರಾದ ಪುಷ್ಪಾ ನಾಣಯ್ಯ, ಎಂ.ಯು.ಹನೀಫ್, ಮುತ್ತಮ್ಮ, ಸುಶೀಲ ಮಧು, ಶುಭ, ಕೀರ್ತನ್, ಶಕ್ತಿ ಕೇಂದ್ರದ ಪ್ರಮುಖರಾದ ಕಿರಣ, ಕಾಂತ ಕಾವೇರಪ್ಪ, ಅಪ್ಪಣ್ಣ, ಮಡಿಕೇರಿ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷÀ ರಾಜೀವಲೋಚನ, ಇಂಜಿನಿಯರ್ ಚನ್ನಕೇಶವ, ಪಿಡಿಓ ಶ್ರೀಧರ್ ಮತ್ತಿತರರು ಹಾಜರಿದ್ದರು.