ಶನಿವಾರಸAತೆ, ನ. ೨೨: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಭಾಗ ಕಿರಿಬಿಳಾಹ ಮತ್ತು ಚೆನ್ನಾಪುರ ಗ್ರಾಮಗಳ ಗದ್ದೆಗಳಲ್ಲಿ ಮರಿಯಾನೆ ಸೇರಿ ೬ ಕಾಡಾನೆಗಳ ಹಿಂಡು ಫಸಲಿಗೆ ಬಂದ ಭತ್ತದ ಬೆಳೆಯನ್ನು ತುಳಿದು, ತಿಂದು ನಾಶಪಡಿಸುತ್ತಿದ್ದು, ಕೃಷಿಕರಾದ ಬಿ.ಬಿ. ಸುನೀಲ್, ರಂಗಯ್ಯ, ಶಂಕರಪ್ಪ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ೧ ತಿಂಗಳಿನಿAದ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕಾಫಿತೋಟ, ಗದ್ದೆಗಳಲ್ಲಿ ಸಂಚರಿಸುತ್ತಾ, ಬೆಳೆ ನಾಶಪಡಿಸುತ್ತಿರುವ ಕಾಡಾನೆಗಳ ಹಿಂಡು ೧೫ ದಿನಗಳಿಂದ ಚೆನ್ನಾಪುರ ಊರುಡುವೆಯಲ್ಲಿ ಬೀಡುಬಿಟ್ಟಿವೆ. ರಾತ್ರಿ ವೇಳೆ ಕಾಫಿ, ಅಡಿಕೆ, ಭತ್ತದ ಬೆಳೆಯನ್ನು ನಾಶಪಡಿಸುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಬಿ.ಬಿ. ಸುನೀಲ್ ಅವರ ಗದ್ದೆಯಲ್ಲಿ ಮುಕ್ಕಾಲು ಭಾಗ ಬೆಳೆಯನ್ನು ಆನೆಗಳು ತುಳಿದು ಹಾಕಿದ್ದು, ೨೫ ಕ್ವಿಂಟಾಲ್ ಭತ್ತ ನಾಶವಾಗಿದೆ ಎಂದು ತಿಳಿಸಿದ ಅವರು. ಇತರ ಕೃಷಿಕರ ಗದ್ದೆಗಳು ಸೇರಿದಂತೆ ಒಟ್ಟು ೧೦.೧೫ ಎಕರೆ ಗದ್ದೆಗಳಲ್ಲಿ ಬೆಳೆ ಹಾನಿಯಾಗಿರುವುದಾಗಿ ತಿಳಿಸಿದರು. ಸೂಕ್ತ ಪರಿಹಾರ ಕೋರಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.

ಪಕ್ಕದ ಹಾಸನ ಜಿಲ್ಲೆಯಿಂದ ಗಡಿ ದಾಟಿ ಬರುವ ಆನೆಗಳಿಗೆ ಕೊಡಗು ಗಡಿಭಾಗದಲ್ಲಿ ಕಂದಕಗಳು ಮುಚ್ಚಿಹೋಗಿರುವ ಕಾರಣ, ವಾಪಾಸ್ಸು ಹೋಗಲು ತಿಳಿಯದೆ ಇಲ್ಲಿಯೇ ಗಿರಕಿ ಹೊಡೆಯುತ್ತಿವೆ ಎನ್ನುತ್ತಾರೆ ರೈತರು.