ಸೋಮವಾರಪೇಟೆ,ನ.೨೨: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ತಾ. ೨೪ರಂದು (ನಾಳೆ) ತಾಲೂಕು ಕಂದಾಯ ಪರಿವೀಕ್ಷಕರ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ ೧೦.೩೦ರಿಂದ ೧.೩೦ರವರೆಗೆ ಐಗೂರು ಸಮುದಾಯ ಭವನದಲ್ಲಿ ನಡೆಯಲಿದೆ.

ನೇರುಗಳಲೆ: ತಾ. ೨೫ರಂದು ಪೂರ್ವಾಹ್ನ ೧೦.೩೦ರಿಂದ ಮಧ್ಯಾಹ್ನ ೧.೩೦ರವರೆಗೆ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಪೌತಿ ಖಾತೆ ಆಂದೋಲನ ನೇರುಗಳಲೆ ಸಮುದಾಯ ಭವನದಲ್ಲಿ ನಡೆಯಲಿದ್ದು, ನಿಗದಿತ ನಮೂನೆಯಲ್ಲಿ ಅರ್ಜಿ, ಪಹಣಿ, ಮೃತರ ಮರಣ ಸಮರ್ಥನಾ ಪತ್ರ, ವಂಶವೃಕ್ಷ, ಪಡಿತರ ಚೀಟಿ, ಆಧಾರ್ ಕಾರ್ಡ್ನೊಂದಿಗೆ ಆಂದೋಲನದಲ್ಲಿ ಭಾಗವಹಿಸಬೇಕೆಂದು ಗ್ರಾಮ ಲೆಕ್ಕಿಗರಾದ ಹೆಚ್.ಕೆ. ಶ್ವೇತಾ ತಿಳಿಸಿದ್ದಾರೆ.