ವೀರಾಜಪೇಟೆ, ನ. ೨೧: ತೂಕ್‌ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ, ವೀರಾಜಪೇಟೆ ಕೊಡವ ಸಮಾಜದ ಸಹಕಾರದೊಂದಿಗೆ ಇದೇ ಮೊದಲ ಬಾರಿಗೆ ‘‘ಕೊಡವ ವಾಲಗತ್ತಾಟ್ ನಮ್ಮೆ - ೨೦೨೨’’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಡಿ. ೬ ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರೆಗೆ ಕುಣಿಯಲು ಕಾಲು ತೆಗೆಯುವಂತಹ ಒಂದು ವಿಶೇಷತೆ ಕೊಡವ ವಾಲಗಕ್ಕೆ ಇದೆ. ಇದನ್ನು ಒಂದು ಹಬ್ಬದ ರೂಪದಲ್ಲಿ ತಂದು ಎಲ್ಲಾ ಜನರು ಸೇರಿ ಕೊಡವ ವಾಲಗವನ್ನು ಸಂಭ್ರಮಿಸಬೇಕೆAಬುದು ಈ ಹಬ್ಬದ ಉದ್ದೇಶ. ಅಲ್ಲದೆ ಕೊಡವ ಸಂಪ್ರದಾಯಕ್ಕೆ ವಾಲಗ ಕುಣಿತವನ್ನು ಎಲ್ಲಾ ವಯಸ್ಸಿನ ಜನರಿಗೆ ಅರಿವಿಕೆ ಕೊಟ್ಟು ವಾಲಗ ಕುಣಿತದ ಮಹತ್ವವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯುವುದೇ ಕೊಡವ ವಾಲಗತ್ತಾಟ್ ನಮ್ಮೆ - ೨೦೨೨. ಈ ಸ್ಪರ್ಧೆಯಲ್ಲಿ ೫ ವಿಭಾಗಳಲ್ಲಿ ಗಂಡಸರಿಗೆ ಹಾಗೂ ಹೆಂಗಸರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯುತ್ತದೆ.

ಚಿಕ್ಕ ಮಕ್ಕಳ ವಿಭಾಗ (೧ನೇ ತರಗತಿಯಿಂದ ೭ನೇ ತರಗತಿಯವರೆಗೆ), ಪ್ರೌಢಶಾಲಾ ವಿಭಾಗ (೮ನೇ ತರಗತಿಯಿಂದ ೧೦ನೇ ತರಗತಿಯವರೆಗೆ), ಕಾಲೇಜು ವಿಭಾಗ (ಪ್ರಥಮ ಪಿಯುಸಿಯಿಂದ ಪದವಿಯವರೆಗೆ), ಸಾರ್ವಜನಿಕ ವಿಭಾಗ (೬೦ ವರ್ಷದೊಳಗೆ ಯಾರು ಬೇಕಾದರು ಭಾಗವಹಿಸಬಹುದು), ಹಿರಿಯ ನಾಗರಿಕರು (೬೦ ವರ್ಷ ಮೇಲ್ಪಟ್ಟವರು, ಅಲ್ಲದೆ ಕೊಡವ ವಾಲಗ ಕುಣಿತದಲ್ಲಿ ಆಸಕ್ತಿ ಇರುವ ಕೊಡವ ವಾಲಗ ಕುಣಿತವನ್ನು ಇಷ್ಟ ಪಡುವವರು, ಕುಣಿಯುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಭಾಗವಹಿಸುವವರು ಡಿ. ೨ ರೊಳಗೆ ತೂಕ್‌ಬೊಳಕ್ ಪತ್ರಿಕೆ ಕಾರ್ಯಾಲಯ, ಮೂರ್ನಾಡು ರಸ್ತೆ, ವೀರಾಜಪೇಟೆ ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ : ೯೪೮೦೫೫೬೬೬೭ ಮತ್ತು ೯೪೮೩೮೧೫೪೭೮ ನ್ನು ಸಂಪರ್ಕಿಸಬಹುದು.