ಶನಿವಾರಸAತೆ, ನ. ೨೧: ಶನಿವಾರಸಂತೆ ಪಟ್ಟಣದ ನಾಡ ಕಚೇರಿಯಲ್ಲಿ ತಾ. ೨೨ ರಂದು (ಇಂದು) ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮ ದಲ್ಲಿ ದುಂಡಳ್ಳಿ ವೃತ್ತದ ಗ್ರಾಮಗಳಾದ ದುಂಡಳ್ಳಿ, ಕಾಜೂರು, ಚಿಕ್ಕ ಕೊಳತ್ತೂರು, ಬಿದರೂರು ಗ್ರಾಮಗಳ ಗ್ರಾಮಸ್ಥರು ಪೌತಿ ಖಾತೆಗೆ ಅಗತ್ಯ ದಾಖಲೆಗಳಾದ ವಂಶವೃಕ್ಷ, ಮರಣ ಪತ್ರ, ಪಹಣಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ನೊಂದಿಗೆ ಅರ್ಜಿ ಸಲ್ಲಿಸ ಬಹುದಾಗಿದೆ ಎಂದು ನಾಡ ಕಚೇರಿ ಗ್ರಾಮಲೆಕ್ಕಾಧಿಕಾರಿ ಸಂತೋಷ್ ತಿಳಿಸಿರುತ್ತಾರೆ.