ಕುಶಾಲನಗರ, ನ.೨೨: ಪದವಿ ಪೂರ್ವ ಶಿಕ್ಷಣ ಇಲಾಖೆಯ ೨೦೨೨- ೨೩ ನೇ ಸಾಲಿನ ರಾಜ್ಯಮಟ್ಟದ ಕಬಡ್ಡಿ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದ ಸದಸ್ಯರಿಗೆ ಕ್ರೀಡಾ ಶೂ ಗಳನ್ನು ಸ್ಥಳೀಯ ಉದ್ಯಮಿ ಎನ್.ಟಿ ಜೋಸೆಫ್ ನೀಡಿದರು. ಕ್ರೀಡಾ ಕೂಟ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ನಡೆಯಲಿದೆ.