ಮಡಿಕೇರಿ, ನ. ೨೨: ಇಂದಿರಾಗಾAಧಿ ಅವರ ಆದರ್ಶಗಳು ಜಗತ್ತಿನ ಮಹಿಳೆಯರಿಗೆ ಮಾದರಿಯಾಗಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾಂಗ್ರೆಸ್ ಕಛೇರಿಯಲ್ಲಿ ಆಯೋಜಿಸಿದ ಇಂದಿರಾ ಗಾಂಧಿ ಯವರ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ದೇಶದ ಪ್ರಧಾನಿಯಾಗಿ ನೀಡಿದ ಕೊಡುಗೆಗಳು ಅವಿಸ್ಮರಣೀಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಇಪ್ಪತ್ತು ಅಂಶದ ಕಾರ್ಯಕ್ರಮ ಗಳು, ಗರೀಬಿ ಹಟಾವೋ, ಬ್ಯಾಂಕ್ ರಾಷ್ಟಿçÃಕರಣ, ರಾಜಧನ ರದ್ದತಿ ಮುಂತಾದ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಭಾರತವನ್ನು ಬಲಿಷ್ಠಗೊಳಿಸಿ ದರು ಎಂದರು. ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನ ಸ್ವಾತಂತ್ರö್ಯ ಬಂದ ನಂತರದಲ್ಲಿ ಅಮೇರಿಕಾ ,ರಷ್ಯಾ ಇಂಗ್ಲೆAಡ್ ಮುಂತಾದ ದೇಶಗಳನ್ನು ಅವಲಂಬಿತವಾಗಿದ್ದ ಭಾರತ, ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ದಿಟ್ಟತನದಿಂದ ತಂದ ಹಲವು ಕಾರ್ಯಕ್ರಮಗಳಿಂದ ಸ್ವಾವಲಂಬಿ ಭಾರತವನ್ನು ನಿರ್ಮಿಸಿದರು ಎಂದು ಬಣ್ಣಿಸಿದರು.

ಇಂದಿರಾ ಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಇಂದಿರಾ ಗಾಂಧಿಯವರ ಬದುಕನ್ನು ಅನುಸರಿಸಲು ಕರೆ ನೀಡಿದರು. ಡಿ.ಸಿ.ಸಿ ಉಪಾಧ್ಯಕೆÀ್ಷ ಫಿಲೋಮಿನ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ವಕ್ತಾರ ಟಾಟು ಮೊಣ್ಣಪ್ಪ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಬಾನಂಡ ಪ್ರಥ್ಯು, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಉಪಾಧ್ಯಕ್ಷ ಮಂಡಿರ ಸದಾ ಮುದ್ದಪ್ಪ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಡಿ.ಸಿ.ಸಿ ಸದಸ್ಯ ಪ್ರಕಾಶ್ ಆಚಾರ್ಯ, ಪ್ರಮುಖರಾದ ಕೆ.ಜಿ. ಪೀಟರ್, ಫ್ಯಾನ್ಸಿ ಪಾರ್ವತಿ, ಪ್ರೇಮ ಕೃಷ್ಣಪ್ಪ, ಮುಮ್ತಾಜ್ ಬೇಗಂ, ರಿಯಾಸ್ಸುದ್ದೀನ್, ವಿಮಲ, ಸಾವಿತ್ರಿ, ಅಬ್ದುಲ್ಲಾ, ಮೊಯ್ದು, ಪೊನ್ನಮ್ಮ, ರಾಣಿ ಉಷಾ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.