ಮಡಿಕೇರಿ: ಮಕ್ಕಳ ದಿನಾಚರ ಣೆಯ ಅಂಗವಾಗಿ ಮಡಿಕೇರಿ ರೋಟರಿ ವುಡ್ಸ್ ವಿನೂತನವಾಗಿ, ಮಕ್ಕಳ ಅಧ್ಯಕ್ಷತೆಯಲ್ಲೇ ಸಭೆ ನಡೆಸಿ ಅವರ ಪ್ರತಿಭೆ ಹೊರಬರಲು ಅವಕಾಶ ನೀಡಿತು.
ಮೂರ್ನಾಡು ವಿದ್ಯಾಸಂಸ್ಥೆಯ ೫ನೇ ತರಗತಿಯಲ್ಲಿ ಓದುತ್ತಿರುವ ಭವಿಷ್ ಕಿಗ್ಗಾಲು ಅಧ್ಯಕ್ಷತೆ ಹಾಗೂ ಸಂತ ಜೋಸೆಫರ ಶಾಲೆಯ ೧೦ನೇ ತರಗತಿಯಲ್ಲಿ ಓದುತ್ತಿರುವ ಕೃಪಾಲ್ ಕಾರ್ಯದರ್ಶಿ ಸ್ಥಾನ ನಿರ್ವಹಿಸಿದರು.
ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಮಕ್ಕಳಲ್ಲಿ ಹುರುಪು ತುಂಬಲು, ನಾಯಕತ್ವ ಬೆಳೆಯುವಂತೆ ಮಾಡಲು ರೋಟರಿ ಕಟಿಬದ್ಧವಾಗಿದೆ ಎಂದರು. ವುಡ್ಸ್ ಸದಸ್ಯ ಕಿಗ್ಗಾಲು ಹರೀಶ್ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ, ಸಮಾಜ ಸೇವೆಗೆ ರೋಟರಿ ಸಂಸ್ಥೆ ನೀಡುವ ಕೊಡುಗೆ ಅಪಾರ ಎಂದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವುಡ್ಸ್ ಕುಟುಂಬದ ವಿದ್ಯಾರ್ಥಿಗಳಾದ ಗ್ಯಾಲಿನ್ ದೇವಯ್ಯ, ಪರ್ಲಿನ್ ಪೊನ್ನಮ್ಮ, ಮುಕ್ತ ಕಿಗ್ಗಾಲ್ ಮತ್ತು ಮನಸ್ವಿ ಬಾಲಕೃಷ್ಣ ಅವರಿಗೆ ಸನ್ಮಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭವಿಷ್ಯ, ಮಕ್ಕಳ ಹಕ್ಕಿನ ಅರಿವು ಮೂಡಿಸುವುದು ಅವಶ್ಯ ಎಂದರು. ಕಾರ್ಯದರ್ಶಿ ಕೃಪಾಲ್ ವಂದನಾರ್ಪಣೆ ಮಾಡಿದರು. ಈ ಸಂದರ್ಭ ಹೊಸ ಬಡಾವಣೆಯ ಅಂಗನವಾಡಿಯ ಪುಟ್ಟ ಮಕ್ಕಳಿಂದ, ಅಧ್ಯಾಪಕಿ ಮುತ್ತಮ್ಮ ಅವರ ಮಾರ್ಗದರ್ಶನದಲ್ಲಿ ನೃತ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಸಂತ್ಕುಮಾರ್, ಉಪಾಧ್ಯಕ್ಷೆ ಪದ್ಮ ಗಿರಿ, ಸದಸ್ಯರಾದ ಕೆ.ಕೆ. ಬೋಪಣ್ಣ, ಅದಿತಿ ಪುರುಷೋತ್ತಮ್, ರಂಜಿತ್ ಕಿಗ್ಗಾಲ್, ಧನಂಜಯ ಶಾಸ್ತಿçÃ, ಬಾಲಸುಬ್ರಮಣ್ಯ, ಕ್ಲಬ್ ಕೋ-ಆರ್ಡಿನೇಟರ್ ಬಿ.ಜಿ. ಅನಂತ ಶಯನ ಹಾಜರಿದ್ದರು.ಶನಿವಾರಸಂತೆ: ಇಲ್ಲಿನ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಗೋಡೆಯಲ್ಲಿ ಚಿತ್ರಕಲೆ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನದೊಂದಿಗೆ ದೃಢೀಕರಣ ಪತ್ರ ನೀಡಿ ಗೌರವಿಸಲಾಯಿತು. ಪ್ರಮುಖ ಉಪನ್ಯಾಸಕ ಚಂದ್ರಕಾAತ್, ಮುಖ್ಯ ಶಿಕ್ಷಕಿ ಚೈತ್ರಾ, ಶಿಕ್ಷಕಿಯರಾದ ಮಾನಸಾ, ಮನಸ್ವಿ, ಅಶ್ವಿನಿ, ತೇಜಾವತಿ, ತಾರಾ, ಶ್ವೇತಾ, ಶಿಲ್ಪಾ, ರೂಪಾವತಿ ಇದ್ದರು.ವೀರಾಜಪೇಟೆ: ಮಕ್ಕಳ ದಿನಾ ಚರಣೆಯ ಅಂಗವಾಗಿ ವೀರಾಜಪೇಟೆ ಜೈ ಭಾರತ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಮಾಲ್ದಾರೆ ದಿಡ್ಡಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ೮೧ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಕ್ರೀಡಾ ಸಮವಸ್ತç ನೀಡಲಾಯಿತು. ೭ನೇ ತರಗತಿ ವಿದ್ಯಾರ್ಥಿನಿ ಹಿಂಪನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಜೈ ಭಾರತ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಅರ್ಜುನ್ ತಿಮ್ಮಯ್ಯ, ಗೌರವ ಅಧ್ಯಕ್ಷ ತೋರೆರ ಪ್ರಭು ಕುಟ್ಟಪ್ಪ, ಕಾರ್ಯದರ್ಶಿ ಪ್ರದೀಪ್, ಖಜಾಂಚಿ ಸೋಮಶೇಖರ್, ನಿರ್ದೇಶಕರಾದ ಜೀವನ್, ಕಿರಣ್, ಗಿರೀಶ್ ಅಟ್ಟಾ, ಹೆಂಡ್ರಿ ರೋನಾ, ಹ್ಯಾರಿಸ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ, ಶ್ರೀ ಮೂರ್ತಿ, ಪವಿತ್ರ, ಪೂರ್ಣಿಮಾ, ಲೋಹಿತ್ ಮತ್ತಿತರರು ಹಾಜರಿದ್ದರು. ಮುಳ್ಳೂರು: ಸಮೀಪದ ದುಂಡಳ್ಳಿ ಗ್ರಾ.ಪಂ. ಡಿಜಿಟಲ್ ಗ್ರಂಥಾಲಯ ಮತ್ತು ಕಾಜೂರು ಅಂಗನವಾಡಿ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಗ್ರಂಥಾಲಯ ಸಪ್ತಾಹ ಮತ್ತು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್ ಉದ್ಘಾಟಿಸಿ ಶುಭ ಹಾರೈಸಿದರು.
ದಿನದ ಮಹತ್ವದ ಕುರಿತು ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ. ದಿವ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತ್ಯಾಗರಾಜ ಕಾಲೋನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಅಂಗನವಾಡಿ ಶಿಕ್ಷಕಿ ಅಶ್ವಿನಿ, ಪ್ರಮುಖರಾದ ತಮ್ಮಯ್ಯ, ಪೂರ್ಣಿಮಾ, ವೀಣಾ, ಶ್ರೀದೇವಿ, ಭಾರತಿ ಮುಂತಾದ ವರಿದ್ದರು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.ಮಡಿಕೇರಿ: ಚೇರಂಬಾಣೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಮೇಲ್ವಿಚಾರಕಿ ಶೀಲಾ ಅವರು ಹಿತವಚನಗಳನ್ನು ಮಾಡಿದರು. ಆರೋಗ್ಯ ಇಲಾಖೆ ಸಿ.ಹೆಚ್.ಓ. ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆ ಜಯಲಕ್ಷಿö್ಮ ವಂದಿಸಿದರು.