ಮಡಿಕೇರಿ, ನ. ೨೦: ಕೊಡಗು ಜಿಲ್ಲೆಯಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿರುವ ರಸ್ತೆಗಳ ದುಸ್ಥಿತಿಯ ಬಗ್ಗೆ ‘ಶಕ್ತಿ’ ಮಾಡಿದ ಸರಣಿ ವರದಿಗಳು ಜನಮನ್ನಣೆಯ ಜೊತೆಗೆ ಆಡಳಿತಕ್ಕೆ ಬಿಸಿ ಮುಟ್ಟಿಸಿದೆ. ಅದಾದ ಬಳಿಕ ಜನವಲಯದಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೆಲವೆಡೆ ರಸ್ತೆಗಳಿಗೆ ತ್ಯಾಪೆ ಹಚ್ಚುವ ಕೆಲಸವು ಶುರುವಾಗಿದೆ. ಇದೀಗ ಸಮರೋಪದಿಯಲ್ಲಿ ರಸ್ತೆ ಕಾಮಗಾರಿ ನಡೆಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಸಂಬAಧಪಟ್ಟವರ ಪ್ರತಿಕ್ರಿಯೆಗಳು ಈ ರೀತಿ ಇವೆ.
ಸರ್ವಋತು ರಸ್ತೆ ಮಾಡುವ ಗುರಿ - ರಂಜನ್
ಕೊಡಗಿನ ಎಲ್ಲಾ ರಸ್ತೆಗಳನ್ನು ಸರ್ವಋತು ರಸ್ತೆ ಮಾಡುವ ಗುರಿ ಇದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಂಡಿದ್ದೇವೆ. ಮಳೆ ಇದ್ದ ಕಾರಣ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ಇದೀಗ ಮಳೆ ನಿಂತಿರುವುದರಿAದ ತ್ವರಿತಗತಿಯಲ್ಲಿ ಗುಣಮಟ್ಟದ ಕೆಲಸ ಮಾಡಲಾಗುತ್ತದೆ. ರಸ್ತೆಯ ಅಭಿವೃದ್ಧಿಗೆ ಹೆಚ್ಚುವರಿ ರೂ. ೫ ಕೋಟಿ ಅನುದಾನಕ್ಕೆ ಸರಕಾರದ ಮುಂದೆ ಬೇಡಿಕೆ ಇಡಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಹಲವು ಕಾಮಗಾರಿಗಳಿಗೆ ಟೆಂಡರ್ ಆಗಿದೆ. ರಾಜ್ಯ ಹೆದ್ದಾರಿ ಕಾಮಗಾರಿಗೂ ರೂ. ೨೦ ಕೋಟಿ ಅನುದಾನದ ಲಭ್ಯತೆ ಇದೆ. ಮಳೆಗಾಲಕ್ಕೆ ಮುನ್ನ ಕೆಲಸ ಮುಗಿಸುವ ಗುರಿ ಇದೆ ಎಂದರು.
ಅನುದಾನದ ಕೊರತೆ ಇಲ್ಲ - ಬೋಪಯ್ಯ
ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸಗಳು ಆರಂಭಗೊAಡಿವೆ. ಮಳೆ ಬಂದರೆ ನಷ್ಟವಾಗುತ್ತದೆ ಎಂಬ ದೃಷ್ಟಿಯಲ್ಲಿ ‘ಮಿಕ್ಸಿಂಗ್ ಪ್ಲಾಂಟ್’ ತೆರೆದಿಲ್ಲ ಅದು ಕೂಡ ವಿಳಂಬಕ್ಕೆ ಕಾರಣವಾಯಿತು. ರಸ್ತೆಗಳ ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ. ಮಳೆ ನಿಂತಿರುವ ಕಾರಣ ಎಲ್ಲಾ ರಸ್ತೆಗಳು ಗುಣಮಟ್ಟದಲ್ಲಿ ಅಭಿವೃದ್ಧಿಯಾಗಲಿದೆ. ಗ್ರಾಮೀಣ ರಸ್ತೆಗಳಿಗೆ ಕೊಂಚ ಅನುದಾನ ಕಡಿಮೆ ಇದೆ. ಆದರೆ, ವಿವಿಧ ಮೂಲಗಳನ್ನು ಬಳಸಿಕೊಂಡು ಅವುಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ. ಜನರ ಸಮಸ್ಯೆಗಳಿಗೆ ಸ್ಪಂದನ ನೀಡುವ ಕೆಲಸ ನಮ್ಮಿಂದಾಗುತ್ತದೆ ಎಂದು ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಮಳೆ, ಕೊರೊನಾ ಪರಿಸ್ಥಿತಿಯಿಂದ ತಡ - ಸುಜಾ
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಾಗೂ ಜಾಗತಿಕವಾಗಿ ಪರಿಣಾಮ ಬೀರಿದ ಕೊರೊನಾ ಪರಿಸ್ಥಿತಿಯಿಂದ ಕೆಲಸ ತಡವಾಗಿದೆ. ರಸ್ತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮರೋಪಾದಿ ಕೆಲಸ ಆರಂಭಿಸಲಾಗಿದೆ. ಟೆಂಡರ್ ಮುಗಿದಿರುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆಯಲ್ಲಿ ಕೆಲಸ ಮಾಡಿದರೆ ರಸ್ತೆಯ ಗುಣಮಟ್ಟ ಹಾಳಾಗುತ್ತದೆ. ಈ ಹಿನ್ನೆಲೆ ತಡವಾಗುತ್ತಿದೆ. ಮಳೆಗಾಲದ ಮುನ್ನ ಉತ್ತಮ ರಸ್ತೆಗಳು ಸಂಚಾರಕ್ಕೆ ಲಭ್ಯವಾಗಲಿದೆ. ಜೊತೆಗೆ ತನಗೆ ಲಭ್ಯವಾಗುವ ವಾರ್ಷಿಕ ರೂ. ೨ ಕೋಟಿ ಹಣವನ್ನು ಆದ್ಯತೆ ಮೇರೆಗೆ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಕಾಮಗಾರಿಗಳಿಗೆ ನೀಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಭರವಸೆ ನೀಡಿದ್ದಾರೆ.
ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ - ಅನಿತಾ
ಮಡಿಕೇರಿಯ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳ ಲಭ್ಯತೆ ಇದ್ದು, ಕೆಲವೇ ದಿನಗಳಲ್ಲಿ ಕೆಲಸವನ್ನು ಆರಂಭಿಸಲಾಗುತ್ತದೆ ಎಂದು ನಗರಸಭಾ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಮಳೆ, ಕೊರೊನಾ ಪರಿಸ್ಥಿತಿಯಿಂದ ತಡ - ಸುಜಾ
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಾಗೂ ಜಾಗತಿಕವಾಗಿ ಪರಿಣಾಮ ಬೀರಿದ ಕೊರೊನಾ ಪರಿಸ್ಥಿತಿಯಿಂದ ಕೆಲಸ ತಡವಾಗಿದೆ. ರಸ್ತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮರೋಪಾದಿ ಕೆಲಸ ಆರಂಭಿಸಲಾಗಿದೆ. ಟೆಂಡರ್ ಮುಗಿದಿರುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆಯಲ್ಲಿ ಕೆಲಸ ಮಾಡಿದರೆ ರಸ್ತೆಯ ಗುಣಮಟ್ಟ ಹಾಳಾಗುತ್ತದೆ. ಈ ಹಿನ್ನೆಲೆ ತಡವಾಗುತ್ತಿದೆ. ಮಳೆಗಾಲದ ಮುನ್ನ ಉತ್ತಮ ರಸ್ತೆಗಳು ಸಂಚಾರಕ್ಕೆ ಲಭ್ಯವಾಗಲಿದೆ. ಜೊತೆಗೆ ತನಗೆ ಲಭ್ಯವಾಗುವ ವಾರ್ಷಿಕ ರೂ. ೨ ಕೋಟಿ ಹಣವನ್ನು ಆದ್ಯತೆ ಮೇರೆಗೆ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಕಾಮಗಾರಿಗಳಿಗೆ ನೀಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಭರವಸೆ ನೀಡಿದ್ದಾರೆ.
ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ - ಅನಿತಾ
ಮಡಿಕೇರಿಯ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳ ಲಭ್ಯತೆ ಇದ್ದು, ಕೆಲವೇ ದಿನಗಳಲ್ಲಿ ಕೆಲಸವನ್ನು ಆರಂಭಿಸಲಾಗುತ್ತದೆ ಎಂದು ನಗರಸಭಾ (ಮೊದಲ ಪುಟದಿಂದ) ಸಂಪರ್ಕ ಸಾಧಿಸುವ ಸೇತುವೆ, ಕಲ್ವರ್ಟ್, ತೂಗುಸೇತುವೆಯ ಅಭಿವೃದ್ಧಿಗೂ ಹಣ ಇದೆ. ಮಳೆಹಾನಿ ಕಾಮಗಾರಿ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಅಡಿ ನಡೆಯುತ್ತದೆ. ತೀರ ಹಾಳಾಗಿರುವ ರಸ್ತೆ ಆದ್ಯತೆ ಮೇಲೆ ಸರಿಪಡಿಸಲಾಗುತ್ತದೆ. ಜಿಲ್ಲಾಡಳಿತ ರಸ್ತೆಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಹೇಳಿದ್ದಾರೆ.
ಸಮಸ್ಯೆ ಅರಿವಾಗಿದೆ - ಡಾ. ಆಕಾಶ್
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವ ಹಾಗೂ ಮಳೆಯಿಂದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ರಸ್ತೆಗಳು ಹದಗೆಟ್ಟಿವೆ. ಇದು ತನ್ನ ಅರಿವಿಗೆ ಬಂದಿದೆ ಎಂದು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿ ಕಾರಿ ಡಾ.ಆಕಾಶ್ ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ತಾನು ಅಧಿಕಾರ ವಹಿಸಿಕೊಂಡಿದ್ದು, ‘ಶಕ್ತಿ'ಯಲ್ಲಿ ಬಂದ ವರದಿಯನ್ನು ಗಮನಿಸಿದ್ದೇನೆ. ಇದಾದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಸ್ತಾರ ಮಾಹಿತಿ ಸಂಗ್ರಹಿಸಿದ್ದೇನೆ. ಕೆಲವೊಂದು ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಕೆಲವು ಟೆಂಡರ್ ಹಂತದಲ್ಲಿವೆ ಹಾಗೂ ಉಳಿದವು ಆರಂಭಗೊಳ್ಳಬೇಕಾಗಿವೆ. ಮಳೆಗಾಲಕ್ಕೆ ಮುನ್ನ ಎಲ್ಲಾ ರಸ್ತೆಯನ್ನು ಸರಿಪಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ನರೇಗಾ ಸೇರಿದಂತೆ ವಿವಿಧ ಅನುದಾನಗಳ ಲಭ್ಯತೆ ಇದೆ. ಜನರ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದು ಭರವಸೆಯ ಮಾತುಗಳನ್ನು ಹಂಚಿಕೊAಡರು.
‘ಟಾರ್ ಪ್ಲಾಂಟ್', ಕಾರ್ಮಿಕರ ಕೊರತೆ - ನಾಗರಾಜ್
ಮೂರು ಉಪವಿಭಾಗಗಳ ವ್ಯಾಪ್ತಿಯಲ್ಲಿನ ಗುಂಡಿಬಿದ್ದ ರಸ್ತೆಗಳ ‘ಪ್ಯಾಚ್' ಕೆಲಸ ಇನ್ನೂ ಒಂದು ವಾರದಲ್ಲಿ ಆರಂಭವಾಗಲಿದೆ. ಆದರೆ, ಜಿಲ್ಲೆಯಲ್ಲಿ ‘ಟಾರ್ ಪ್ಲಾಂಟ್’ ಇಲ್ಲದಿರುವುದು, ಅದರೊಂದಿಗೆ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದಿಂದ ಈ ಕೆಲಸಕ್ಕಾಗಿಯೇ ಬರುವ ಕಾರ್ಮಿಕರು ಬಾರದ ಕಾರಣ ಕಾಮಗಾರಿ ತಡವಾಗಲು ಕಾರಣವಾಗುತ್ತಿದೆ. ಒಟ್ಟು ೧೮೦೦ ಕಿ.ಮೀ ರಸ್ತೆ ಇಲಾಖೆ ವ್ಯಾಪ್ತಿಯಲ್ಲಿದ್ದು, ಹದಗೆಟ್ಟ ರಸ್ತೆ ಸರಿಪಡಿಸಲು ಟೆಂಡರ್‌ಗಳು ನಡೆದಿವೆ. ವೀರಾಜಪೇಟೆ ಕ್ಷೇತ್ರಕ್ಕೆ ರೂ. ೨೦ ಕೋಟಿ, ಮಡಿಕೇರಿ ಹಾಗೂ ಸೋಮವಾರಪೇಟೆ ಕ್ಷೇತ್ರಕ್ಕೆ ತಲಾ ೨೫ ಕೋಟಿಯ ಕಾಮಗಾರಿಗೆ ಟೆಂಡರ್ ನಡೆದಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗರಾಜು ಮಾಹಿತಿ ನೀಡಿದ್ದಾರೆ.
ಜನರ ಸಮಸ್ಯೆಗೆ ಸ್ಪಂದಿಸುತ್ತೇವೆ - ವಿಜಯ
ಮಳೆ ಇದ್ದ ಕಾರಣ ಕಾಮಗಾರಿ ನಡೆಸಿಲ್ಲ. ಕಳಪೆ ಎಂಬ ಆರೋಪ ತಪ್ಪಿಸಲು ಕಾಮಗಾರಿ ತಡಮಾಡಿದ್ದೇವೆ. ರಸ್ತೆ ಹಾಗೂ ಚರಂಡಿ ಅನುದಾನಕ್ಕೆ ಅಗತ್ಯ ಅನುದಾನವಿದೆ. ರಸ್ತೆ ಹಾಳಾಗಿರುವ ಕುರಿತು ಜನರ ಅಸಮಾಧಾನವಿದೆ. ಇದನ್ನು ಸರಿಪಡಿಸುವುದು ನಮ್ಮ ಜವಾಬ್ದಾರಿ. ಎಲ್ಲಾ ಸಿದ್ಧತೆ ಕೈಗೊಂಡಿದ್ದೇವೆ. ೧೫ ದಿನಗಳಲ್ಲಿ ಕೆಲಸ ಆರಂಭಿಸಿ ಮಳೆಗಾಲದ ಆರಂಭದ ತನಕವೂ ನಿರಂತರವಾಗಿ ಕೆಲಸ ಮಾಡಲಾಗುತ್ತದೆ. ಉತ್ತಮ ರಸ್ತೆಗಳು ಜನರ ಬಳಕೆಗೆ ಲಭ್ಯವಾಗಲಿದೆ.
- ಹೆಚ್. ಜೆ. ರಾಕೇಶ್