ಮಡಿಕೇರಿ, ನ. ೨೦: ಕೊಡಗು ಜಿಲ್ಲಾ ವಿಪ್ರ ಯುವ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಮೋಹನ ನಲ್ಲೂರಾಯರ ಅಧ್ಯಕ್ಷತೆಯಲ್ಲಿ ಕೈಕೇರಿಯ ವಿಪ್ರ ಸಭಾ ಭವನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಸ್ಥಾಪಕ ಅಧ್ಯಕ್ಷ ಶ್ರೀಧರ ನೆಲ್ಲಿತ್ತಾಯ, ಮಾಜಿ ಅಧ್ಯಕ್ಷ ಹರಿ ನಾರಾಯಣ, ಖಜಾಂಚಿ ಅಚ್ಚುತ್ತ, ಕಾರ್ಯದರ್ಶಿ ಪವನ್ ಕಂಡಿಪಾಡಿತ್ತಾಯ ಪಾಲ್ಗೊಂಡಿದ್ದರು. ಅನ್ವಿತ್ ಕುಮಾರ್ ಅವರಿಂದ ಪ್ರಾರ್ಥನೆ, ಸಭೆಯಲ್ಲಿ ಕೊಡಗು ಜಿಲ್ಲಾ ವಿಪ್ರ ಯುವ ಸಂಘವನ್ನು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದೊAದಿಗೆ ವಿಲೀನಗೊಳಿಸುವ ಬಗ್ಗೆ ಚರ್ಚೆ ನಡೆದು ಅಂತಿಮವಾಗಿ ಬಹುಮತದ ಆಧಾರದ ಮೇಲೆ ಕೊಡಗು ಜಿಲ್ಲಾ ವಿಪ್ರ ಯುವ ಸಂಘವನ್ನು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದೊAದಿಗೆ ವಿಲೀನಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು. ಸಂಘದಲ್ಲಿರುವ ಅಂದಾಜು ೫ ಲಕ್ಷಕ್ಕೂ ಹೆಚ್ಚು ಮೊತ್ತ ಹಣವನ್ನು ವಿಪ್ರ ಸಭಾಭವನದ ಕಟ್ಟಡಕ್ಕೆ ವಿನಿಯೋಗಿಸಲು ತೀರ್ಮಾನಿಸಲಾಯಿತು. ಶ್ರೀಧರ್ ನೆಲ್ಲಿತ್ತಾಯ ಮಾತನಾಡಿ, ಕೊಡಗು ಜಿಲ್ಲಾ ವಿಪ್ರ ಯುವ ಸಂಘವನ್ನು ಮುನ್ನಡೆಸಿಕೊಂಡು ಹೋಗಲು ವಿಪ್ರ ಯುವಕರು ಯಾರು ಮುಂದೆ ಬರುತ್ತಿಲ್ಲವಾದ್ದರಿಂದ ವಿಪ್ರರೆಲ್ಲರೂ ಒಗ್ಗಟ್ಟಾಗಿ ಒಂದೇ ಸಂಘದ ಅಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರ ಅಭಿಪ್ರಾಯದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿಯ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ, ವಿಪ್ರ ಮಹಿಳಾ ಸಂಘದ ಅಧ್ಯಕೆÀ್ಷ ವಿಜಯಲಕ್ಷ್ಮಿ ಶಶಿಧರ್, ಅರ್ಚಕರ ಸಂಘದ ಅಧ್ಯಕ್ಷ ಶಿವಪ್ರಸಾದ್, ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ್ ನೆಲ್ಲ್ಲಿತ್ತಾಯ, ಪದಾಧಿಕಾರಿಗಳು, ವಿಪ್ರ ಯುವ ಸಂಘದ ಸದಸ್ಯರು ಹಾಜರಿದ್ದರು.