ಮಡಿಕೇರಿ, ನ.೨೦ : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನ.೨೬ ರಂದು ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆಯುವ ೩೨ನೇ ವರ್ಷದ ಕೊಡವ ನ್ಯಾಷನಲ್ ಡೇ ಗೆ ಪೂರ್ವಭಾವಿಯಾಗಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ದೇವಟ್ ಪರಂಬುವಿನಲ್ಲಿ ಪುಷ್ಪ ನಮನದ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿ ಹಿರಿಯರನ್ನು ಸ್ಮರಿಸಿದರು.

ಕೊಡವ ಲ್ಯಾಂಡ್ ಮತ್ತು ಕೊಡವರ ಹಕ್ಕುಗಳ ಪರವಾಗಿ ನಿರಂತರವಾಗಿ ಶಾಂತಿಯುತ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವ ಸಿಎನ್‌ಸಿ ಯ ಅಭಿಲಾಷೆ ಶೀಘ್ರ ಈಡೇರಲಿ ಎಂದು ನಾಚಪ್ಪ ಪ್ರಾರ್ಥಿಸಿದರು.

ನಂತರ ಮಾತನಾಡಿದ ಅವರು ಭಾರತೀಯ ಸಂವಿಧಾನದ ದಿನವಾದ ತಾ.೨೬ ರಂದು ಕೊಡವ ನ್ಯಾಷನಲ್ ಡೇ ನಡೆಯುತ್ತಿದ್ದು, ವಿಶ್ವಪ್ರಸಿದ್ಧ ಅರ್ಥಶಾಸ್ತçಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಿಎನ್‌ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್, ಮಂದಪAಡ ಮನೋಜ್, ಚೀಯಬೇರ ಸತೀಶ್ ಈ ಸಂದರ್ಭ ಹಾಜರಿದ್ದರು.