ಮುಳ್ಳೂರು, ನ. ೨೦: ಸಮೀಪದ ಬೆಸೂರು ಕ್ಲಸ್ಟರ್ ವ್ಯಾಪ್ತಿಯ ಕೂಡ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬೆಸೂರು ಸರಕಾರಿ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯಕ್ಕೆ ಭೇಟಿ ನೀಡಿ ವಿಜ್ಞಾನ ವಿಸ್ಮಯಗಳನ್ನು ವೀಕ್ಷಿಸಿದರು.
ಬೆಸೂರು ಸರಕಾರಿ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿಜ್ಞಾನ, ತಂತ್ರ ಜ್ಞಾನಕ್ಕೆ ಸಂಬAಧಪಟ್ಟ ಉಪಕರಣಗಳಿದ್ದು ಅಕ್ಕಪಕ್ಕದ ಪ್ರಾಥಮಿಕ ಶಾಲಾ ಮಕ್ಕಳು ಇಲ್ಲಿಗೆ ಬಂದು ಪ್ರಯೋಗಾಲಯವನ್ನು ವೀಕ್ಷಿಸುತ್ತಾರೆ. ಅದೇ ರೀತಿಯಲ್ಲಿ ಕೂಡ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪುಟಾಣಿಗಳು ಪ್ರಯೋಗಾಲಯಕ್ಕೆ ಭೇಟಿ ನೀಡಿ ವಿಜ್ಞಾನ ಉಪಕರಣಗಳ ಪರಿಚಯ, ಕೆಲವು ರಾಸಾಯಿನಿಕ ವಸ್ತುಗಳ ಬಗ್ಗೆ ಅರಿವು, ಸೌರ ಮಂಡಲದಲ್ಲಿ ಗ್ರಹಣಗಳ ಸಂಭವಿಸುವಿಕೆ ಮುಂತಾದ ವಿಜ್ಞಾನ ವಿಸ್ಮಯಗಳನ್ನು ವೀಕ್ಷಣೆ ಮಾಡಿದರು.
ಬೆಸೂರು ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಉಷಾ ಅವರು ಪ್ರಯೋಗಾಲಯದಲ್ಲಿ ಪುಟಾಣಿಗಳಿಗೆ ವಿಜ್ಞಾನ ವಿಷಯಗಳಿಗೆ ಸಂಬAಧಿಸಿದ ಪ್ರತಿಯೊಂದು ವಿಜ್ಞಾನ ಉಪಕರಣಗಳ ಬಗ್ಗೆ ಪರಿಚಯ ಮಾಡಿಕೊಟ್ಟರಲ್ಲದೆ ಅವುಗಳನ್ನು ಪ್ರಯೋಗ ಮಾಡಿ ತೋರಿಸುವ ಮೂಲಕ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಮಾಹಿತಿಯನ್ನು ಆಲಿಸಿ ಪ್ರಯೋಗವನ್ನು ವೀಕ್ಷಿಸಿದರು.