ಮಡಿಕೇರಿ, ನ. ೨೦: ಕೊಡಗು ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಡಿ. ೩೦ ರಂದು ಮಧ್ಯಾಹ್ನ ೩ ಗಂಟೆಗೆ ಅಂಚೆ ದೂರುಗಳ ಸಂಬAಧ ಅಂಚೆ ಅದಾಲತ್ ನಡೆಯಲಿದೆ.

ಅಂಚೆಗೆ ಸಂಬAಧಿಸಿದ ದೂರುಗಳು ಇದ್ದಲ್ಲಿ ಡಿ. ೨೮ ರೊಳಗೆ ಅಂಚೆ ಅಧೀಕ್ಷಕರು, ಕೊಡಗು ವಿಭಾಗ, ಮಡಿಕೇರಿ ಇಲ್ಲಿಗೆ ಸಲ್ಲಿಸಬಹುದು ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.