ಗೋಣಿಕೊಪ್ಪಲು, ನ.೨೦: ಗೋಣಿಕೊಪ್ಪಲುವಿನ ಪ್ರತಿಷ್ಠಿತ ಬಡಾವಣೆಯ ಸಮೀಪದಲ್ಲಿ ಹಾದುಹೋಗುತ್ತಿರುವ ಕೀರೆಹೊಳೆಗೆ ರಾತೋರಾತ್ರಿ ಅಕ್ರಮವಾಗಿ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಸುದ್ದಿ ತಿಳಿದ ಬಡಾವಣೆ ನಿವಾಸಿಗಳು ಪೊನ್ನಂಪೇಟೆ ತಹಶೀಲ್ದಾರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದರು.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಕೀರೆಹೊಳೆಗೆ ತಡೆಗೋಡೆ ನಿರ್ಮಾಣ ಮಾಡುವ ಸಂದರ್ಭ ಕೆಲವು ನಿಯಮಗಳನ್ನು ಪಾಲಿಸದೇ ಇರುವ ಹಿನ್ನೆಲೆಯಲ್ಲಿ ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಕಟ್ಟಡ ಮಾಲೀಕರಿಗೆ ಸೂಚನೆ ನೀಡಿದರು.

ಸರ್ವೆ ಕಾರ್ಯ ನಡೆಸಿದ ನಂತರ ಮುಂದಿನ ನಿರ್ದೇಶನ ನೀಡುವುದಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕುಮಾರ್ ಅವರಿಗೆ ತಹಶೀಲ್ದಾರ್ ಪ್ರಶಾಂತ್ ಸ್ಪಷ್ಟ ಸೂಚನೆ ನೀಡಿದರು. ಅಲ್ಲಿಯ ತನಕ ಯಾವುದೇ ಕಾಮಗಾರಿ ಮುಂದುವರಿಸದAತೆ ಸೂಚಿಸಿದರು.

ಈ ಹಿಂದೆ ತಾಲೂಕು ತಹಶೀಲ್ದಾರ್ ಆಗಿದ್ದ ಯೋಗಾನಂದ್ ಅವರು ಕೈತೋಡು ಅಕ್ರಮದ ಬಗ್ಗೆ ತೆರವು ಕಾರ್ಯ ನಡೆಸಿದ್ದರು. ತೋಡಿಗೆ ಅಕ್ರಮವಾಗಿ ಕಟ್ಟಲಾಗಿದ್ದ ತಡೆಗೋಡೆ ತೆರವುಗೊಳಿಸಲಾಗಿತ್ತು. ಇದೀಗ ಇದೆ ಕೈತೋಡಿಗೆ ತಡೆಗೋಡೆ ನಿರ್ಮಾಣವಾಗುತ್ತಿದೆ. ಭೇಟಿಯ ವೇಳೆ ಪೊನ್ನಂಪೇಟೆ ಕಂದಾಯ ಅಧಿಕಾರಿಗಳಾದ ಸುದೀಂದ್ರ, ಸಿಬ್ಬಂದಿ, ಬಡಾವಣೆಯ ನಿವಾಸಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಇಂದು ಕಾರ್ತಿಕ ಪೂಜೆ

ಮಡಿಕೇರಿ, ನ. ೨೦: ತಾ. ೨೧ ರಂದು (ಇಂದು) ವೀರಾಜಪೇಟೆ ಕೊಟ್ಟೋಳಿ ಶ್ರೀ ದಾರಮಹೇಶ್ವರ ದೇವಸ್ಥಾನದಲ್ಲಿ ಕೊನೆಯ ಕಾರ್ತಿಕ ಪೂಜೆ ನಡೆಸಲಾಗುವುದು. ಚಂಗಚAಡ ಕುಟುಂಬಸ್ಥರಿAದ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.