*ಗೋಣಿಕೊಪ್ಪ, ನ. ೧೯: ವಿಶ್ವ ಶೌಚಾಲಯ ದಿನಾಚರಣೆಯ ಅಂಗವಾಗಿ ಸ್ವಚ್ಛತಾ ಓಟವನ್ನು ಗೋಣಿಕೊಪ್ಪ ಗ್ರಾ.ಪಂ. ವತಿಯಿಂದ ನಡೆಸಲಾಯಿತು.

ಉಮಾಮಹೇಶ್ವರಿ ದೇವಸ್ಥಾನ ದಿಂದ ಬಸ್ಸು ನಿಲ್ದಾಣದವರೆಗೆ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸ್ವಚ್ಛತಾ ಓಟ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಗಾ.್ರಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಅಧ್ಯಕ್ಷತೆಯಲ್ಲಿ ಸ್ವಚ್ಛತಾ ಓಟಕ್ಕೆ ಚಾಲನೆ ನೀಡಲಾಯಿತು.

ಸ್ವಚ್ಛತೆಯನ್ನು ಕಾಪಾಡುವುದರ ಬಗ್ಗೆ ಮತ್ತು ಶೌಚಾಲಯದ ಬಳಕೆಯ ಬಗ್ಗೆ ಅರಿವು ಮೂಡಿಸಲಾಯಿತು. ಸದಸ್ಯರುಗಳಾದ ಮಂಜುಳ, ವಿವೇಕ್ ರಾಯ್ಕರ್, ಸಂಜೀವಿನಿ ಒಕ್ಕೂಟದ ವರಲಕ್ಷಿö್ಮ, ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲಾ ಶಿಕ್ಷಕರು, ಆಶಾಕಾರ್ಯ ಕರ್ತೆಯರು ಭಾಗವಹಿಸಿದ್ದರು.