ಮಡಿಕೇರಿ, ನ. ೧೮: ತಾ. ೧೯ ರಂದು (ಇಂದು) ಸ್ವಾತಂತ್ರö್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆಯನ್ನು ಮಂಗಳೂರು ನಗರದ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪಿಸಲಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕ.ರಾ.ರ.ಸಾ.ನಿಗಮದ ಪುತ್ತೂರು ವಿಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳನ್ನು ನಿಯೋಜನೆ ಮಾಡಲು ಕಾರ್ಯಕ್ರಮದ ಸಂಯೋಜಕರಿAದ ಬೇಡಿಕೆ ಬಂದಿರುತ್ತದೆ. ಅದರಂತೆ ಪುತ್ತೂರು ವಿಭಾಗದಿಂದ ಕಾರ್ಯಕ್ರಮದ ಪ್ರಯುಕ್ತ ಗರಿಷ್ಠ ಸಂಖ್ಯೆಯಲ್ಲಿ ಬಸ್ಗಳನ್ನು ನಿಯೋಜನೆ ಮಾಡಲಾಗಿದೆ.
ತಾ. ೧೯ ರಂದು (ಇಂದು) ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ ಹಾಗೂ ಮಡಿಕೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯಾಗುತ್ತಿರುವ ನಿಗಮದ ಸಾರಿಗೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಸಾರ್ವಜನಿಕ ಪ್ರಯಾಣಿಕರು ಹಾಗೂ ಶಾಲಾ - ಕಾಲೇಜು ವಿದ್ಯಾರ್ಥಿಗಳು ಕ.ರಾ.ಸ.ಸಾ. ನಿಗಮದೊಂದಿಗೆ ಸಹಕರಿಸಬೇಕಾಗಿ ವಿಭಾಗೀಯ ನಿಯಂತ್ರಣಾಧಿಕಾರಿ ಕೋರಿದ್ದಾರೆ.