ಮಡಿಕೇರಿ, ನ. ೧೮: ಕೊಡವ ಜನಾಂಗ ಹಾಗೂ ಜಮ್ಮಾ ಆಧಾರದಲ್ಲಿನ ಕೋವಿ ವಿನಾಯಿತಿ ಹಕ್ಕು ರದ್ದತಿ ಕುರಿತಾಗಿ ಸುಪ್ರೀಂಕೋರ್ಟ್ನಲ್ಲಿ ನಿವೃತ್ತ ಕ್ಯಾಪ್ಟನ್ ವೈ.ಕೆ. ಚೇತನ್ ಸಲ್ಲಿಸಿರುವ ಅರ್ಜಿಗೆ ಸಂಬAಧಿಸಿದ ವಿಚಾರಣೆಯನ್ನು ನ್ಯಾಯಾಲಯ ೨೦೨೩ ಜನವರಿ ೫ಕ್ಕೆ ಮುಂದೂಡಿದೆ.

ಚೇತನ್ ಸಲ್ಲಿಸಿರುವ ಅರ್ಜಿ ತಿರಸ್ಕೃತಿಗೆ ಒಟ್ಟು ೨೭ ವಿವಿಧ ಸಂಘ ಸಂಸ್ಥೆಗಳು ಎದುರುದಾರರಾಗಿದ್ದಾರೆ. ತಾ. ೧೭ ರಂದು ಅರ್ಜಿ ಸಂಬAಧ ಸುಪ್ರೀಂ ಕೋರ್ಟ್ ರೆಜಿಸ್ಟಾçರ್ ಅವರಿಂದ ವಿಚಾರಣೆ ನಡೆದಿದ್ದು, ಎದುರುದಾರರ ಪೈಕಿ ಕೇಂದ್ರ ಸರಕಾರ ಸೇರಿದಂತೆ ಇತರರೂ ಅರ್ಜಿ ಸಂಬAಧ ಆಕ್ಷೇಪಣೆ ಸಲ್ಲಿಸಿದ್ದು, ಮುಂದಿನ ವಿಚಾರಣೆಯನ್ನು ಜನವರಿ ೫ಕ್ಕೆ ನಿಗದಿಪಡಿಸಲಾಗಿದೆ.