ಗೋಣಿಕೊಪ್ಪ ವರದಿ, ನ. ೧೮: ಹುದಿಕೇರಿ ಹೋಬಳಿಯ ಬೇಗೂರು ವೃತ್ತದ ಗ್ರಾಮಗಳ ಪೌತಿಖಾತೆ ಆಂದೋಲನ ನಡೆಯಿತು. ಗ್ರಾಮದ ಕಾಫಿ ಬೆಳೆಗಾರರು ಹೆಚ್ಚಾಗಿ ಪಾಲ್ಗೊಂಡರು. ದಾಖಲಾತಿ ನೀಡುವ ಮೂಲಕ ಆಂದೋಲನದ ಪ್ರಯೋಜನ ಪಡೆದುಕೊಂಡರು. ಉಪ ತಹಶೀಲ್ದಾರ್ ಎಂ.ಎಸ್. ಸ್ವಾತಿ, ಕಂದಾಯ ನಿರೀಕ್ಷಕ ರವಿಚಂದ್ರ, ಗ್ರಾಮ ಲೆಕ್ಕಿಗ ನಿತಿನ್ ಪಾಲ್ಗೊಂಡಿದ್ದರು.