ಸುಂಟಿಕೊಪ್ಪ, ನ. ೧೮: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಸೆಸ್ಕ್ ಅಧಿಕಾರಿಗಳು ಕಡಿತ ಗೊಳಿಸಿರುವುದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಡಕಾಗಿದ್ದು, ಗತ್ಯಂತರವಿಲ್ಲದೆ ಜನರೇಟರ್ ಬಳಸಿ ಕಚೇರಿ ಕಾರ್ಯಗಳನ್ನು ನಡೆಸುತ್ತಿರುವುದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ.

ಗ್ರಾಮದ ಪ್ರಥಮ ಗ್ರಾಮ ಪಂಚಾಯಿತಿಯಿAದ ಶ್ರೀಸಾಮಾನ್ಯನಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸೂರು, ಗ್ರಾಮೀಣ ರಸ್ತೆ ಅಭಿವೃದ್ಧಿ ಲಭಿಸುತ್ತಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಸೆಸ್ಕ್ಗೆ ರೂ. ೨೮ ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದರಿAದ ಕಚೇರಿಯ ವಿದ್ಯುತ್ ಕಡಿತಗೊಳಿಸಲಾಗಿದೆ. ಪಂಚಾಯಿತಿ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಹಿನ್ನಡೆಯಾಗಿರುವುದು ಜಗಜ್ಜಾಹೀರಾಗಿದೆ. ಜಿಲ್ಲಾಡಳಿತ, ಜಿ.ಪಂ. ಹಾಗೂ ತಾ.ಪಂ. ಅಧಿಕಾರಿಗಳು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಸಹಾಯಕತೆಗೆ ಇದುವರೆಗೆ ಸ್ಪಂದನ ನೀಡಿಲ್ಲ ಎಂದು ಕೆಲ ಗ್ರಾ.ಪಂ. ಸದಸ್ಯರುಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕೊಡಗಿನ ಇನ್ನೂ ಕೆಲವು ಗ್ರಾಮ ಪಂಚಾಯಿತಿ ಕೆಲ ಬೆಳೆಗಾರರು ಲಕ್ಷಾಂತರ ವಿದ್ಯುತ್ ಬಿಲ್ ಸೆಸ್ಕ್ಗೆ ಕಟ್ಟದೆ ಉಳಿಸಿಕೊಂಡಿದ್ದರೂ ‘ಸೆಸ್ಕ್’ನಿಂದ ಯಾವುದೇ ಕ್ರಮಕೈಗೊಳ್ಳದೆ ಕೇವಲ ಸುಂಟಿಕೊಪ್ಪ ಗ್ರಾ.ಪಂ.ನ ಮೇಲೆ ಯಾಕೆ ಈ ರೀತಿ ಗದಾಪ್ರಹಾರ ನಡೆಸಿದ್ದಾರೆ ಎಂದು ಸುಂಟಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಸೆಸ್ಕ್ ಕಾರ್ಯಪಾಲಕ ಅಭಿಯಂತರರಿಗೆ ಗ್ರಾ.ಪಂ. ಅಧ್ಯಕ್ಷ್ಷೆÀ ಶಿವಮ್ಮ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅವರುಗಳು ದೂರವಾಣಿ ಕರೆ ಮಾಡಿ ವಿದ್ಯುತ್ ಬಿಲ್ ಪಾವತಿಗೆ ಕಾಲಾವಕಾಶಕ್ಕೆ ಮನವಿ ಸಲ್ಲಿಸಲು ಪ್ರಯತ್ನಿಸಿದರೂ ಅವರು ಕರೆಗಳನ್ನು ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.

ಒಟ್ಟಾರೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ವಿದ್ಯುತ್ ಬಿಲ್‌ಬಾಕಿ ಪ್ರಹಸನ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಕಂಟಕಪ್ರಾಯ ವಾಗಿರುವುದು ಮೇಲ್ನೋಟಕ್ಕೆ ವೇದ್ಯವಾಗಿದೆ.