ಸೋಮವಾರಪೇಟೆ, ನ. ೧೮: ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಕುಳ್ಳಾರಿಗುಡಿ ದೇವಾಲಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆಯ ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ದೇವಾಲಯದ ಮುಂಭಾಗವಿದ್ದ ಶಿಥಿಲಾವಸ್ಥೆಯ ಮರದ ಕೊಂಬೆಗಳನ್ನು ಕಡಿದು, ದೇವಾಲಯವನ್ನು ತೊಳೆದು ಶುಚಿಗೊಳಿಸಿದರು. ಯೋಜನಾಧಿಕಾರಿ ರೋಹಿತ್ ಮಾರ್ಗದರ್ಶನದಲ್ಲಿ ರಾಮದಾಸ್, ರಾಜು, ಆನಂದ, ಜೀವನ್, ನಾಗರಾಜು, ಶೇಖರ್ ಹಾಗೂ ಗಣೇಶ್ ಅವರುಗಳು ಶ್ರಮದಾನದಲ್ಲಿ ಭಾಗಿಯಾಗಿದ್ದರು.