ಅನಿಲ್ ಎಚ್.ಟಿ. ಮಡಿಕೇರಿ, ನ. ೧೮: ಅನ್ನ ದಾನ ಮಹಾದಾನ ಎಂಬ ಮಾತಿಗೆ ಮಾದರಿ ಎಂಬAತೆ ಕಾವೇರಿ ಉಗಮತಾಣ ನಾಡಿನ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಕಾವೇರಿ ಜಾತ್ರೆ ಅಂಗವಾಗಿ ಈ ವರ್ಷವೂ ಕೊಡಗು ಏಕೀಕರಣ ರಂಗದಿAದ ಯಶಸ್ವಿಯಾಗಿ ಅನ್ನ ದಾಸೋಹ ಸಂಪೂರ್ಣಗೊAಡಿದೆ. ೩೦ ದಿನಗಳಲ್ಲಿ ೭೫ ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳಿಗೆ ಅನ್ನಸಂತರ್ಪಣೆಯನ್ನು ಏಕೀಕರಣ ರಂಗದ ಕಾರ್ಯಕರ್ತರು ನೀಡಿದ ತೃಪ್ತಿಯನ್ನು ಹೊಂದಿದ್ದಾರೆ.
ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿರುವ ತಲಕಾವೇರಿಗೆ ಕಾವೇರಿ ಪವಿತ್ರ ತೀರ್ಥೋದ್ಭವ ಸಂದರ್ಭ ಬರುವ ಸಾವಿರಾರು ಭಕ್ತರಿಗೆ ಸೂಕ್ತ ರೀತಿಯಲ್ಲಿ ಅನ್ನಪ್ರಸಾದ ದೊರಕದೇ ಇರುವುದನ್ನು ಮತ್ತು ಮಹಿಳೆಯರು, ಮಕ್ಕಳು, ಅಸ್ವಸ್ಥರಿಗೆ ಬೆಟ್ಟದ ತಪ್ಪಲಿನಲ್ಲಿ ಕಾವೇರಿ ಜಾತ್ರೆಯ ದಿನಗಳಲ್ಲಿ ಸೂಕ್ತ ಅನ್ನಾಹಾರದ ಅಗತ್ಯತೆಗೆ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ೩೨ ವರ್ಷಗಳ ಹಿಂದೆ ಕೊಡಗು ಏಕೀಕರಣ ರಂಗ ಎಂಬ ಸಾಮಾಜಿಕ ಸಂಘಟನೆ ತಲಕಾವೇರಿಯಲ್ಲಿ ಅನ್ನಪ್ರಸಾದವನ್ನು ಭಕ್ತರಿಗೆ ನೀಡುವ ಕೈಂಕರ್ಯಕ್ಕೆ ಮುಂದಾಯಿತು. ಪ್ರಾರಂಭಿಕ ವರ್ಷದಲ್ಲಿಯೇ ದಾನಿಗಳಿಂದ ಅತ್ಯುತ್ತಮ ಸ್ಪಂದನ ದೊರಕಿತ್ತು.
ಇದೀಗ ೨೭ನೇ ವರ್ಷದ ಅನ್ನದಾಸೋಹವನ್ನು ಕೊಡಗು ಏಕೀಕರಣ ರಂಗ ಯಶಸ್ವಿಯಾಗಿ ೩೦ ದಿನಗಳ ಕಾಲ ತಲಕಾವೇರಿಯ ಅನ್ನಸಂತರ್ಪಣಾ ಅನಿಲ್ ಎಚ್.ಟಿ.
ಮಡಿಕೇರಿ, ನ. ೧೮: ಅನ್ನ ದಾನ ಮಹಾದಾನ ಎಂಬ ಮಾತಿಗೆ ಮಾದರಿ ಎಂಬAತೆ ಕಾವೇರಿ ಉಗಮತಾಣ ನಾಡಿನ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಕಾವೇರಿ ಜಾತ್ರೆ ಅಂಗವಾಗಿ ಈ ವರ್ಷವೂ ಕೊಡಗು ಏಕೀಕರಣ ರಂಗದಿAದ ಯಶಸ್ವಿಯಾಗಿ ಅನ್ನ ದಾಸೋಹ ಸಂಪೂರ್ಣಗೊAಡಿದೆ. ೩೦ ದಿನಗಳಲ್ಲಿ ೭೫ ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳಿಗೆ ಅನ್ನಸಂತರ್ಪಣೆಯನ್ನು ಏಕೀಕರಣ ರಂಗದ ಕಾರ್ಯಕರ್ತರು ನೀಡಿದ ತೃಪ್ತಿಯನ್ನು ಹೊಂದಿದ್ದಾರೆ.
ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿರುವ ತಲಕಾವೇರಿಗೆ ಕಾವೇರಿ ಪವಿತ್ರ ತೀರ್ಥೋದ್ಭವ ಸಂದರ್ಭ ಬರುವ ಸಾವಿರಾರು ಭಕ್ತರಿಗೆ ಸೂಕ್ತ ರೀತಿಯಲ್ಲಿ ಅನ್ನಪ್ರಸಾದ ದೊರಕದೇ ಇರುವುದನ್ನು ಮತ್ತು ಮಹಿಳೆಯರು, ಮಕ್ಕಳು, ಅಸ್ವಸ್ಥರಿಗೆ ಬೆಟ್ಟದ ತಪ್ಪಲಿನಲ್ಲಿ ಕಾವೇರಿ ಜಾತ್ರೆಯ ದಿನಗಳಲ್ಲಿ ಸೂಕ್ತ ಅನ್ನಾಹಾರದ ಅಗತ್ಯತೆಗೆ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ೩೨ ವರ್ಷಗಳ ಹಿಂದೆ ಕೊಡಗು ಏಕೀಕರಣ ರಂಗ ಎಂಬ ಸಾಮಾಜಿಕ ಸಂಘಟನೆ ತಲಕಾವೇರಿಯಲ್ಲಿ ಅನ್ನಪ್ರಸಾದವನ್ನು ಭಕ್ತರಿಗೆ ನೀಡುವ ಕೈಂಕರ್ಯಕ್ಕೆ ಮುಂದಾಯಿತು. ಪ್ರಾರಂಭಿಕ ವರ್ಷದಲ್ಲಿಯೇ ದಾನಿಗಳಿಂದ ಅತ್ಯುತ್ತಮ ಸ್ಪಂದನ ದೊರಕಿತ್ತು.
ಇದೀಗ ೨೭ನೇ ವರ್ಷದ ಅನ್ನದಾಸೋಹವನ್ನು ಕೊಡಗು ಏಕೀಕರಣ ರಂಗ ಯಶಸ್ವಿಯಾಗಿ ೩೦ ದಿನಗಳ ಕಾಲ ತಲಕಾವೇರಿಯ ಅನ್ನಸಂತರ್ಪಣಾ ತಲಕಾವೇರಿ ಕ್ಷೇತ್ರಕ್ಕೆ ಕಾವೇರಿ ಜಾತ್ರೆಯ ೩೦ ದಿನಗಳಲ್ಲಿ ತೆರಳಿದ ಸಾವಿರಾರು ಭಕ್ತರಿಗೆ ಈ ವರ್ಷ ಕೊಡಗು ಏಕೀಕರಣ ರಂಗದಿAದ ಮಾತ್ರ ಅನ್ನ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅತ್ಯಂತ ಅಚ್ಚುಕಟ್ಟಾಗಿ ಸ್ವಾದಿಷ್ಟ ಆಹಾರವನ್ನು ಕಾವೇರಿ ಮಾತೆಯ ಭಕ್ತರಿಗೆ ರಂಗದ ವತಿಯಿಂದ ವಿತರಿಸಲಾಗಿದೆ.
೨೦೨೦ ರಲ್ಲಿ ಕೋವಿಡ್ ಹಿನೆÀ್ನಲೆಯಲ್ಲಿ ಅನ್ನಸಂತರ್ಪಣೆ ಮಾಡಲಾಗಲಿಲ್ಲ. ಉಳಿದಂತೆ ಪ್ರತಿ ವರ್ಷವೂ ವರ್ಷದಿಂದ ವರ್ಷಕ್ಕೆ ಅತ್ಯಧಿಕ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಿಕೊಂಡು ಬರುತ್ತಿರುವ ತೃಪ್ತಿ ನಮ್ಮದು ಎಂದು ಕೊಡಗು ಏಕೀಕರಣ ರಂಗದ ಸಂಚಾಲಕ ತಮ್ಮು ಪೂವಯ್ಯ ಹೇಳಿದರು.
ಅನ್ನಸಂತರ್ಪಣೆ ಕಾರ್ಯದಲ್ಲಿ ಶ್ರಮಿಸಿದ ಏಕೀಕರಣ ರಂಗದ ಪ್ರಮುಖರಾದ ಮಂದಪAಡ ಸತೀಶ್, ತೇಲಪಂಡ ಪ್ರಮೋದ್ ಸೋಮಯ್ಯ, ಬಿದ್ದಾಟಂಡ ತಮ್ಮಯ್ಯ, ಪಾಂಡೀರ ಮುತ್ತಣ್ಣ, ತಾತಪಂಡ ನಯನ, ಕಾವೇರಿ, ಮದನ್, ಅಪ್ಪಂಡೇರAಡ ಡಾಲಿ, ಸುಬ್ಬಯ್ಯ, ಕೇಟೋಳಿರ ಶಮ್ಮಿ, ಪುದಿಯೊಕ್ಕಡ ರಾಜಮೇದಪ್ಪ, ನಂದೇಟಿರ ರಾಜಮಾದಪ್ಪ ಮತ್ತು ಸ್ಥಳೀಯರನ್ನು ಸ್ಮರಿಸುವುದಾಗಿಯೂ ರಂಗದ ಪ್ರಮುಖರು ಹೇಳಿದರು.