ವೀರಾಜಪೇಟೆ, ನ. ೧೭: ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಿಂದ ಮರದ ವ್ಯಾಪಾರಿ ಮತ್ತು ಪತ್ರಕರ್ತರನ್ನು ವೀರಾಜಪೇಟೆ ನ್ಯಾಯಾಲಯ ದೋಷ ಮುಕ್ತಗೊಳಿಸಿದೆ.

ಸಿದ್ದಾಪುರ ಟಿಂಬರ್ ವ್ಯಾಪಾರಿ ಯಾಹ್ಯ, ಪತ್ರಕರ್ತರಾದ ಶಾಹಿನುಲ್ಲಾ ಹಾಗೂ ಆಬುಟ್ಟಿ ಎಂಬವರೇ ಆರೋಪ ಮುಕ್ತರಾದವರು.

೨೦೧೭, ನ. ೨೦ ರಂದು ಮೇಕೂರು-ಹೊಸ್ಕೇರಿ ಗ್ರಾಮದ ಕುಟ್ಟಂಡ ಜಗನ್ ಅವರ ಕಾಫಿ ತೋಟದಿಂದ ಬೆಲೆ ಬಾಳುವ ಮರಗಳನ್ನು ಕಡಿದ ಹಿನ್ನೆಲೆಯಲ್ಲಿ ತಿತಿಮತಿ ಅರಣ್ಯಾಧಿಕಾರಿ ಅಶೊಕ್ ಹನಗುಂದ್, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಸಿದ್ದಾಪುರದ ಟಿಂಬರ್ ವ್ಯಾಪಾರಿ ಯಾಹ್ಯ ಹಾಗೂ ಪತ್ರಕರ್ತರಾದ ಶಾಹಿನುಲ್ಲಾ ಹಾಗೂ ಆಬುಟ್ಟಿ ಅವರುಗಳು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದರು ಎಂದು ದೂರು ನೀಡಲಾಗಿತ್ತು.

ಈ ಸಂಬAಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಠಾಣಾಧಿಕಾರಿಗಳು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ವೀರಾಜಪೇಟೆ ನ್ಯಾಯಾಲಯ ಆರೋಪಿಗಳ ಮೇಲಿನ ಆರೋಪಕ್ಕೆ ಸಂಬAಧಿಸಿದAತೆ ಸೂಕ್ತ ಸಾಕ್ಷಾö್ಯಧಾರ ಗಳಿಲ್ಲವೆಂದು ಪರಿಗಣಿಸಿ ದೋಷ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಆರೋಪಿಗಳ ಪರವಾಗಿ ವಕೀಲ ಡಿ.ಸಿ. ಧ್ರುವ ವಕಾಲತ್ತು ವಹಿಸಿದ್ದರು.