ಪೊನ್ನಂಪೇಟೆ, ನ.೧೭: ವೃದ್ಧನೊಬ್ಬ ೬ ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಮೂಲಕ ಪೈಶಾಚಿಕ ಕೃತ್ಯ ನಡೆಸಿರುವ ಘಟನೆ ಗೋಣಿಕೊಪ್ಪಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗೋಣಿಕೊಪ್ಪಲು ಮೈಸೂರಮ್ಮ ನಗರದ ನಿವಾಸಿ ಅಪ್ಪುಕುಟ್ಟನ್ (೭೦) ಎಂಬಾತ ಇಂತಹ ಹೀನ ಕೃತ್ಯವನ್ನು ಎಸಗಿದ್ದು, ಈತನ ವಿರುದ್ಧ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಪೋಕ್ಸೋ, ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಪ್ಪುಕುಟ್ಟನ್ ಬಾಲಕಿಯ ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಬಾಲಕಿಯನ್ನು ಚಿಂಟು ಟಿವಿ ತೋರಿಸುತ್ತೇನೆ ಮನೆ ಒಳಗೆ ಬಾ ಎಂದು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ವೀರಾಜಪೇಟೆ ತಾಲೂಕು ಡಿವೈಎಸ್‌ಪಿ ನಿರಂಜನ ರಾಜೇ ಅರಸ್ ಅವರು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.