ವೀರಾಜಪೇಟೆ, ನ. ೧೭: ಸರಕಾರಿ ಕಾಲೇಜುಗಳು ಖಾಸಗಿ ಕಾಲೇಜು ಗಳಿಗಿಂತ ಸರಿ ಸಮನವಾಗಿದ್ದು ಕಡಿಮೆ ಇಲ್ಲ. ಸರಕಾರಿ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೀಳರಿಮೆ ಬೇಡ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪಠ್ಯೇತರ ಚಟುವಟಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದೇಶ ಕಟ್ಟುವ ಜವಾಬ್ದಾರಿ ಇಂದು ನಮ್ಮ ಯುವ ಜನಾಂಗದ್ದಾಗಿದೆ. ೧೮ ರಿಂದ ೨೧ರ ವಯೋಮಿತಿ ಮಹತ್ವದ ಕಾಲವಾಗಿರುತ್ತದೆ. ಪದವಿ ಮುಗಿಸಿದ ಬಳಿಕ ಏನು ಎಂಬ ಬದುಕನ್ನು ಅರಸುವ ಕಾಲದಲ್ಲಿ ಪಠ್ಯೇತರ ಚಟುವಟಿಕೆ ಸಹ ನೆರವಿಗೆ ಬರುತ್ತದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಬದಕು ಕಟ್ಟಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಇಂದು ಹೊಸ ಶಿಕ್ಷಣ ನೀತಿಯೂ ಜಾರಿಗೆ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾ ಗಲಿದ್ದು, ಯಾವ ಆತಂಕವು ಬೇಡ. ಮುಖ್ಯವಾಗಿ ವಿದ್ಯಾರ್ಥಿಗಳು ಯಾವುದೇ ಆಕರ್ಷಣೆಗಳಿಗೆ ಒಳಗಾಗಿ ಉತ್ತಮ ಬದಕನ್ನು ಹಾಳು ಮಾಡಿಕೊಳ್ಳಬೇಡಿ. ಗಾಂಜಾ, ಅಫೀಮ್ ನಂತಹ ಮಾದಕ ನಶೆಗೆ ಬಲಿಯಾಗದೆ ಜಾಗ್ರತೆ ವಹಿಸಿ. ನಿಮ್ಮ ತಂದೆ ತಾಯಿಗಳು ಕಂಡ ಕನಸನ್ನು ನನಸು ಮಾಡುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಅರಿತುಕೊಳ್ಳಬೇಕು. ಪದವಿ ಮಾತ್ರ ಗಳಿಸಿದರೆ ಸಾಲದು ಉತ್ತಮ ಅಂಕ ಪಡೆದು ಕೌಶಲ್ಯವನ್ನು ಹೊಂದಿರಬೇಕು ಎಂದು ಬೋಪಯ್ಯ ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಮಾತನಾಡಿ ಮನುಷ್ಯನ ಜೀವನದಲ್ಲಿ ಶಿಕ್ಷಣ ಎಷ್ಟು ಅಗತ್ಯವೋ ಪಠ್ಯೇತರ ಚಟುವಟಿಕೆ ಸಹ ಅಷ್ಟೇ ಅತ್ಯಗತ್ಯ. ಪಠ್ಯೇತರ ಚಟುವಟಿಕೆಯಲ್ಲಿ ಕ್ರೀಡೆ, ಎನ್.ಸಿ.ಸಿ., ಸ್ಕೌಟ್‌ಗಳೊಂದಿಗೆ, ಸಾಹಿತ್ಯ, ಕಲಾಚಟುವಟಿಕೆಗಳಿಂದ ಉತ್ತಮವಾದ ವಿಚಾರಗಳನ್ನು ಆಯ್ಕೆ ಮಾಡಿಕೊಂಡು ಪ್ರತಿಭೆಯನ್ನು ಹೊರ ತರಬಹುದಾಗಿದೆ. ಇದರಿಂದ ನಿಮ್ಮ ಬದುಕಿನಲ್ಲಿ ಸ್ವ ಉದ್ಯೋಗ ಸಹ ರೂಪಿಸಿಕೊಳ್ಳ ಬಹುದು. ಕೊಡಗಿನಲ್ಲಿ ಹಾಕಿ, ಕ್ರಿಕೆಟ್ ಇತ್ಯಾದಿ ಕ್ರೀಡೆಗಳ ಮೂಲಕ ಅಂತರರಾಷ್ಟಿçÃಯ ಮಟ್ಟದಲ್ಲಿ ಹೆಸರು ಗಳಿಸಿದ ಸಾಧಕರು ಸ್ಫೂರ್ತಿಯಾಗಲಿ. ಕೊಡಗಿನ ಅನೇಕರು ಇತರ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದು ಇತ್ತೀಚಿನ ಯುವ ಪ್ರತಿಭೆ ರಶ್ಮಿಕಾ ಮಂದಣ್ಣ ಸಿನಿಮಾರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಕ್ರೀಡಾ ಚುಟುವಟಿಕೆ ಗಳಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿ.ವಿ.ಯ ಸಿಂಡಿಕೇಟ್ ಸದಸ್ಯ ತಳೂರು ಕಿಶೋರ್‌ಕುಮಾರ್, ಉಪನ್ಯಾಸಕ ಡಾ. ಭೀಮರಾಜು ಈರೇಗೌಡ, ಅಂತರರಾಷ್ಟಿçÃಯ ಹಾಕಿ ಆಟಗಾರ್ತಿ ಕಂಬಿರAಡ ಪೊನ್ನಮ್ಮ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ವೇಣುಗೋಪಾಲ್ ನೂತನ ಸಮಿತಿ ಸದಸ್ಯರಿಗೆ ಪ್ರತಿಜ್ಞಾನ ವಿಧಿ ಬೋಧಿಸಿದರು.