ಮಡಿಕೇರಿ, ನ. ೧೭: ಮಡಿಕೇರಿ ಸಮೀಪದ ಜವಾಹರ ನವೋದಯ ವಿದ್ಯಾಲಯ ಗಾಳಿಬೀಡಿನಲ್ಲಿ ಇಂದು ಶಿಕ್ಷಣದಲ್ಲಿ ಕಲೆ ಎಂಬ ನವೀನ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ನಡೆಯಿತು. ನವೋದಯ ವಿದ್ಯಾಲಯ ಸಮಿತಿಯು ೨೦೨೨-೨೩ ಶೈಕ್ಷಣಿಕ ಸಾಲಿಗಾಗಿ ಈ ಕಾರ್ಯಾಗಾರವನ್ನು ಆಯೋಜಿಸಿದೆ. ಇದು ದೇಶದ ಆಯ್ದ ಕೆಲವು ವಿದ್ಯಾಲಯಗಳಲ್ಲಿ ನಡೆಯಲಿದ್ದು ಕೊನೆಯಲ್ಲಿ ವಿವಿಧ ಕಲಾಪ್ರಕಾರಗಳ ಪ್ರದರ್ಶನ ಮತ್ತು ಸ್ಪರ್ಧೆಯು ವಲಯ ಮತ್ತು ರಾಷ್ಟಿçÃಯ ಮಟ್ಟದಲ್ಲಿ ಆಯೋಜನೆಗೊಳ್ಳಲಿದೆ.
ಕೊಡಗು ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಆಯ್ದ ೧೨ ವಿದ್ಯಾರ್ಥಿಗಳಿಗಾಗಿ ಜಿಲ್ಲೆಯ ಜಾನಪದ ಕಲಾಪ್ರಕಾರದ ನೃತ್ಯ ಕಾರ್ಯಾಗಾರವು ಪ್ರಾರಂಭವಾಗಲಿದೆ. ಒಂದು ತಿಂಗಳ ಕಾಲ ನಡೆಯುವ ಈ ಕಾರ್ಯಾಗಾರವನ್ನು ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ಜನಪದ ವಾದ್ಯವಾದ ದುಡಿಯನ್ನು ನುಡಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣ ಮತ್ತು ಕಲೆಯ ಮಹತ್ವವನ್ನು ವಿವರಿಸಿದರು. ಬದಲಾವಣೆಗಳು ನಮ್ಮಿಂದ ಪ್ರಾರಂಭವಾಗಬೇಕು, ಕನ್ನಡಿಯ ಉದಾಹರಣೆ ನೀಡಿ ಸಮಾಜವೆಂದರೆ ನಮ್ಮ ಪ್ರತಿಬಿಂಬದAತೆ-ಕನ್ನಡಿಯಿದ್ದAತೆ; ಸಮಾಜದಲ್ಲಿ ನಗುಮುಖ ಕಾಣಲು ನಮ್ಮಲ್ಲಿ ಮೊದಲು ನಗುಮುಖ ಬೇಕು. ನಮ್ಮ ನಡೆನುಡಿಯಲ್ಲಿ ಜಾನಪದ ಮೌಲ್ಯವಾದ ಪ್ರೀತಿ, ಬಾಂಧವ್ಯ ಕಾಣಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನಪದ ಕಲಾವಿದ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅವರು ಜನಪದ ಗೀತೆಯೊಂದನ್ನು ದುಡಿಯ ಹಿನ್ನೆಲೆಯಲ್ಲಿ ಹಾಡಿ ರಂಜಿಸಿದರು. ಕಾರ್ಯಾಗಾರವನ್ನು ನಡೆಸಿಕೊಡಲು ಬಂದಿರುವ ಜನಪದ ಕಲಾವಿದೆ ಮತ್ತು ನೃತ್ಯಗುರು ಮಿಲನಾಭರತ್ ಅವರು ವಿವೇಕಾನಂದರ ಉದಾಹರಣೆ ನೀಡಿ, ಶ್ರೀಕೃಷ್ಣ ಶ್ರೇಷ್ಠನಾದ ಸಾರಥಿಯಾದಂತೆ ನಾವು ಯಾವ ಕೆಲಸವನ್ನೇ ಮಾಡಲಿ ಅದರಲ್ಲಿ ಶ್ರೇಷ್ಠತೆಯನ್ನು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಆಗಮಿಸಿದ ಗಣ್ಯರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಪಂಕಜಾಕ್ಷನ್ ಪಿ.ಒ. ಅವರು ಮಾತನಾಡಿ, ಕಾರ್ಯಾಗಾರದ ಮಹತ್ವವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕಾದ ಅವಶ್ಯಕತೆಯನ್ನು ಒತ್ತಿಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಗತಿ ಮತ್ತು ಸಂಗಡಿಗರು ಪ್ರಾರ್ಥನಾಗೀತೆಯನ್ನು ಹಾಡಿದರು. ಕನ್ನಡ ಶಿಕ್ಷಕ ಮಾರುತಿ ದಾಸಣ್ಣ ಅವರು ಕಾರ್ಯಾಗಾರದ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಬಾಬು ಎಂ. ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಗಣೇಶ ಹೆಗಡೆ ನಡೆಸಿಕೊಟ್ಟರು.