ಮಡಿಕೇರಿ, ನ. ೧೮: ಕೊಡಗು ಜಿಲ್ಲೆಯ ಹೊಟೇಲ್, ರೆಸಾರ್ಟ್ಗಳಲ್ಲಿ ಡಿಸೆಂಬರ್ ೩೧ ರಂದು ಹೊಸ ವರ್ಷದ ಆಚರಣೆ ನಡೆಸಲು ರಾತ್ರಿ ಸಮಯ ೨ ಗಂಟೆಯವರೆಗೆ ಅವಕಾಶ ಮಾಡಿಕೊಡಬೇಕು ಎಂದು ಕೊಡಗು ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದಿAದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರಿಗೆ ಮನವಿ ಸಲ್ಲಿಸಲಾಗಿದೆ.

ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಪ್ರವಾಸೋದ್ಯಮ ಕುಗ್ಗಿಹೋಗಿದೆ. ವ್ಯಾಪಾರ ವಹಿವಾಟುಗಳು ಕಡಿಮೆಯಾಗಿದೆ. ಈ ವರ್ಷ ಕೊಡಗು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದ್ದು, ಹೊಸ ವರ್ಷ ಆಚರಣೆಗೆ ಜಿಲ್ಲೆಯಲ್ಲಿ ರಾತ್ರಿ ೨ ಗಂಟೆಯವರೆಗೆ ಅವಕಾಶ ಕಲ್ಪಿಸಿಕೊಡಬೇಕಾಗಿ ವಿನಂತಿ ಮಾಡಲಾಯಿತು.

ಕಾವೇರಿ ನಿಸರ್ಗಧಾಮ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಈಗಾಗಲೇ ೧ ವಾರದಿಂದ ತೂಗುಸೇತುವೆ ದುರಸ್ತಿಗೋಸ್ಕರ ಬಂದ್ ಮಾಡಲಾಗಿದೆ. ಇಲ್ಲಿ ಹಲವಾರು ಅಂಗಡಿಗಳು ಇದ್ದು, ಅದನ್ನೇ ನಂಬಿಕೊAಡಿದ್ದಾರೆ. ಆದಷ್ಟು ಬೇಗ ತೂಗು ಸೇತುವೆ ದುರಸ್ತಿ ಕಾರ್ಯವನ್ನು ಮುಗಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕಾಗಿ ಮನವಿ ಸಲ್ಲಿಸಲಾಯಿತು.

ತೂಗು ಸೇತುವೆ ಅಳವಡಿಸಿ ೨೭ ವರ್ಷಗಳಾಗಿವೆ. ಅದು ಶಿಥಿಲಗೊಂಡಿದೆ. ಅದನ್ನು ಗಂಟೆಯವರೆಗೆ ಅವಕಾಶ ಕಲ್ಪಿಸಿಕೊಡಬೇಕಾಗಿ ವಿನಂತಿ ಮಾಡಲಾಯಿತು.

ಕಾವೇರಿ ನಿಸರ್ಗಧಾಮ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಈಗಾಗಲೇ ೧ ವಾರದಿಂದ ತೂಗುಸೇತುವೆ ದುರಸ್ತಿಗೋಸ್ಕರ ಬಂದ್ ಮಾಡಲಾಗಿದೆ. ಇಲ್ಲಿ ಹಲವಾರು ಅಂಗಡಿಗಳು ಇದ್ದು, ಅದನ್ನೇ ನಂಬಿಕೊAಡಿದ್ದಾರೆ. ಆದಷ್ಟು ಬೇಗ ತೂಗು ಸೇತುವೆ ದುರಸ್ತಿ ಕಾರ್ಯವನ್ನು ಮುಗಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕಾಗಿ ಮನವಿ ಸಲ್ಲಿಸಲಾಯಿತು.

ತೂಗು ಸೇತುವೆ ಅಳವಡಿಸಿ ೨೭ ವರ್ಷಗಳಾಗಿವೆ. ಅದು ಶಿಥಿಲಗೊಂಡಿದೆ. ಅದನ್ನು ದುರಸ್ತಿಗೊಳಿಸಿ ಹಾಗೂ ಒಂದು ಹೊಸ ತೂಗುಸೇತುವೆಯನ್ನು ನಿರ್ಮಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕಾಗಿ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದಿAದ ಕೋರಲಾಯಿತು. ಸಂಸ್ಥೆಯ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನಾಜೀರ್, ಖಚಾಂಜಿ ಭಾಸ್ಕರ್, ಸಲಾಂ ಇದ್ದರು.