ಮಡಿಕೇರಿ, ನ. ೧೭: ಕೇಸ್ ಹಿಂದೆ ಬಿದ್ದು ಆರೋಪಿಗಳ ಜಾಡು ಹಿಡಿಯುತ್ತಿದ್ದ ಪೊಲೀಸರು ಇಂದು ಮೈದಾನದಲ್ಲಿ ಬೆವರಿಳಿಸುತ್ತಿದ್ದರು. ಒತ್ತಡದ ನಡುವಿದ್ದ ಖಾಕಿ ಪಡೆಯಲ್ಲಿ ಉತ್ಸಾಹ, ಸಂಭ್ರಮ ಚಿಗುರೊಡೆದಿತ್ತು. ನಾವ್ಯರಿಗೂ ಕಮ್ಮಿ ಇಲ್ಲ ಎಂದು ಒಂದೆಡೆ ಕಬಡ್ಡಿ ಆಡಿದರೆ, ಮತ್ತೊಂದೆಡೆ ವಾಲಿಬಾಲ್ ಪಂದ್ಯಾಟದಲ್ಲಿ ಗೆಲುವಿಗಾಗಿ ಕಾದಾಡುತ್ತಿದ್ದರು. ಬಿಸಿಲಿಗೂ ‘ಡೋಂಟ್ ಕೇರ್' ಎನ್ನುತ್ತ ಮೈದಾನದಲ್ಲಿ ಓಟ ಕಿತ್ತರು.
ಹೌದು.. ಈ ದೃಶ್ಯಗಳು ಕಂಡುಬAದಿದ್ದು ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ. ಪೊಲೀಸರ ವಾರ್ಷಿಕ ಕ್ರೀಡಾಕೂಟವನ್ನು ಅಂತರರಾಷ್ಟಿçÃಯ ಸ್ಕಾ÷್ವö್ಯಷ್ ಆಟಗಾರ್ತಿ ಜೋಶ್ನಾ ಚಿಣ್ಣಪ್ಪ ಅವರು ಪಾರಿವಾಳ ಹಾಗೂ ಬಲೂನ್ ಅನ್ನು ಹಾರಿಸಿ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾ. ೧೯ರ ತನಕ ನಡೆಯಲಿರುವ ಪಂದ್ಯಾಟದಲ್ಲಿ ಕೊಡಗು ವಿಶೇಷ ಘಟಕ, ಡಿ.ಎ.ಆರ್. ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ಉಪವಿಭಾಗ, ಮಹಿಳಾ ಪೊಲೀಸ್ ಘಟಕದ ಸಿಬ್ಬಂದಿಗಳು ಭಾಗವಹಿಸಿದ್ದಾರೆ.
ಕ್ರೀಡಾಕೂಟದ ಮೊದಲ ದಿನ ಮಹಿಳೆ ಮತ್ತು ಪುರುಷರ ವಿಭಾಗದಲ್ಲಿ ೮೦೦ ಹಾಗೂ ೨೦೦ ಮೀಟರ್ ಓಟ, ಪುರುಷರಿಗೆ ಲಾಂಗ್ ಜಂಪ್, ಶಾಟ್ ಪೂಟ್, ಡಿಸ್ಕಸ್ ಥ್ರೋ, ಜಾವಲಿನ್ ಥ್ರೋ, ಮಹಿಳೆಯರಿಗೆ ವೇಗದ ನಡಿಗೆ ಸೇರಿದಂತೆ ಇನ್ನಿತರ ಅಥ್ಲೆಟಿಕ್ಸ್, ಹೊನಲು ಬೆಳಕಿನಲ್ಲಿ ಥ್ರೋಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿಗಳು ನಡೆದವು.
ಸಂಭ್ರಮಿಸಿದ ಖಾಕಿಪಡೆ
ಕಾನೂನು ಸುವ್ಯವಸ್ಥೆ ಪಾಲನೆ, ಅಪರಾಧ ತಡೆ, ಆರೋಪಿಗಳಿಗಾಗಿ ಶೋಧ ಸೇರಿದಂತೆ ತಮ್ಮ ವೈಯಕ್ತಿಕ ಬದುಕನ್ನು ಮರೆತು ಕೆಲಸ ಮಾಡುತ್ತಿದ್ದ ಖಾಕಿಪಡೆ ಇಂದು ‘ರಿಲ್ಯಾಕ್ಸ್ ಮೂಡ್’ಗೆ ಜಾರಿತ್ತು.
ವಿವಿಧ ಪೊಲೀಸ್ ಠಾಣೆಯ ನೂರಾರು ಪೊಲೀಸರು ತಮ್ಮ ಉಪವಿಭಾಗವನ್ನು ಪ್ರತಿನಿಧಿಸಿ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಖುಷಿಯ ಅನುಭವ ಪಡೆದರು.
ಹಿರಿಕಿರಿಯರೆನ್ನದೇ ಎನ್ನದೇ ಒಟ್ಟಾಗಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ವಿಶೇಷ ಎನಿಸಿತು. ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ತಮ್ಮ ಸಹುದ್ಯೋಗಿಗಳಿಗೆ ಆರಕ್ಷಕರು ಚಪ್ಪಾಳೆ ತಟ್ಟುತ್ತ ಹುರಿದುಂಬಿಸುತ್ತಿದ್ದ ದೃಶ್ಯಗಳು ಕಂಡುಬAದವು. ಇದರೊಂದಿಗೆ ಡಿ.ವೈ.ಎಸ್.ಪಿ., ಸಿಪಿಐ, ಎಸ್.ಐ. ಹಂತದ ಅಧಿಕಾರಿಗಳು ಕೂಡ ನಮ್ಮ ವೃತ್ತಿ ಪ್ರತಿಷ್ಠೆ, ಉನ್ನತ ಹುದ್ದೆ ಎಂಬುದನ್ನೆಲ್ಲ ಮರೆತು ಕಿರಿಯ ಹಂತದ ಸಿಬ್ಬಂದಿಗಳೊAದಿಗೆ ಬೆರೆತಿದ್ದು ವಾರ್ಷಿಕ
(ಮೊದಲ ಪುಟದಿಂದ) ಕ್ರೀಡಾಕೂಟದ ‘ಹೈಲೈಟ್’ಆಗಿತ್ತು.
೩ ದಿನ ಕ್ರೀಡಾ ಕಲರವ
೩ ದಿನಗಳು ನಡೆಯಲಿರುವ ಕ್ರೀಡಾಕೂಟದಿಂದ ಪೊಲೀಸರಲ್ಲಿ ಸಂಭ್ರಮ ಮನೆ ಮಾಡಿದೆ. ತಾ. ೧೮ ರಂದು(ಇAದು) ಶೂಟಿಂಗ್, ಅಥ್ಲೆಟಿಕ್ಸ್, ಹಗ್ಗಜಗ್ಗಾಟ, ಕ್ರಿಕೆಟ್ ನಡೆಯಲಿದೆ. ತಾ. ೧೯ ರಂದು ಕ್ರೀಡೆಯೊಂದಿಗೆ ಪೊಲೀಸರ ಮಕ್ಕಳಿಗೆ ಮನರಂಜನಾ ಕ್ರೀಡಾ ಸ್ಪರ್ಧೆಗಳು ನಡೆದು ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
-ವರದಿ : ಹೆಚ್.ಜೆ.ರಾಕೇಶ್, ಚಿತ್ರಗಳು : ಲಕ್ಷಿö್ಮÃಶ್