ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಎನ್‌ಜಿಒಗೆ ನೀಡಿದ್ದ ಅನುಮತಿ ರದ್ದು
ಬೆಂಗಳೂರು, ನ. ೧೭: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಆನ್‌ಲೈನ್ ಅಥವಾ ಗಿಊಂ (ಗಿoಣeಡಿ ಊeಟಠಿಟiಟಿe ಂಠಿಠಿ) ಮುಖೇನಾ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಆದರೆ, ಸದರಿ ಸಂಸ್ಥೆಯು ಪತ್ರದಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿರುವ ದೂರಿನ ಹಿನ್ನೆಲೆಯಲ್ಲಿ ಅನುಮತಿಯನ್ನು ರದ್ದುಪಡಿಸಲಾಗಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-೨೦೨೩ರ ಕಾರ್ಯಚಟುವಟಿಕೆಗಳ ಕುರಿತು, ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ.ಎಲ್.ಓ., ಮತದಾರರ ನೋಂದ ಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದ ಣಾಧಿಕಾರಿಗಳ ಸಹಯೋಗದೊಂದಿಗೆ ಸಮನ್ವಯ ಸಾಧಿಸಿ, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಆನ್‌ಲೈನ್/ಗಿಊಂ (ಗಿoಣeಡಿ ಊeಟಠಿಟiಟಿe ಂಠಿಠಿ) ಮುಖೇನಾ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ರವರಿಗೆ ಅನುಮತಿಯನ್ನು ನೀಡಲಾಗಿತ್ತು. ಆದರೆ, ಮಹದೇವಪುರ ವಲಯದಲ್ಲಿ ಬೂತ್‌ಮಟ್ಟದ ಅಧಿಕಾರಿಗಳಂತೆ (ಬಿಎಲ್‌ಓ) ಮತದಾರರ ವಿವರಗಳನ್ನು ಸಂಗ್ರಹಿಸಿದ್ದಕ್ಕಾಗಿ ಓರ್ವ ಪ್ರತಿನಿಧಿಯ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರು, ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಒ) ಅವರು ಅನುಮತಿಯನ್ನು ರದ್ದುಗೊಳಿಸಿದ್ದಾರೆ.
ಶಿವಲಿಂಗದ ಪೂಜೆ ವಿರುದ್ಧ ಮುಸ್ಲಿಂ ಸಂಘಟನೆ ಸಲ್ಲಿಸಿದ್ದ ಅರ್ಜಿ ವಜಾ
ವಾರಣಾಸಿ, ನ. ೧೭: ಜ್ಞಾನವಾಪಿ ಮಸೀದಿಯಲ್ಲಿರುವ ಶಿವಲಿಂಗ ಪೂಜೆಗೆ ಅನುಮತಿ ಸಲ್ಲಿಸಲಾಗಿರುವ ಅರ್ಜಿಯನ್ನು ವಜಾಗೊಳಿಸುವಂತೆ ಮುಸ್ಲಿಂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ವಾರಣಾಸಿ ಕೋರ್ಟ್ ವಜಾಗೊಳಿಸಿದೆ. ವಾರಣಾಸಿಯ ತ್ವರಿತ ನ್ಯಾಯಾಲಯವು ಗುರುವಾರ ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯ ಮನವಿಯನ್ನು ವಜಾಗೊಳಿಸಿದ್ದು, ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬAದಿರುವ ‘ಶಿವಲಿಂಗ'ವನ್ನು ಪೂಜಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಲು ನಿರ್ಧರಿಸಿದೆ. ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬAದಿರುವ ‘ಶಿವಲಿಂಗ'ಕ್ಕೆ ಪೂಜೆಯ ಹಕ್ಕು ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಶಿವಲಿಂಗ ಪತ್ತೆಯಾದ ನಂತರ ವಿಶ್ವ ವೈದಿಕ ಸನಾತನ ಸಂಸ್ಥೆ ವಾರಣಾಸಿಯ ತ್ವರಿತ ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು. ವಿಶ್ವ ವೈದಿಕ ಸನಾತನ ಸಂಸ್ಥೆಯ ಅಧ್ಯಕ್ಷ ಜಿತೇಂದ್ರ ಸಿಂಗ್ ವಿಶೆನ್ ಅವರ ಪತ್ನಿ ಕಿರಣ್ ಸಿಂಗ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದಾರೆ. ಶಿವಲಿಂಗ ಪ್ರಾರ್ಥನೆಯನ್ನು ತಕ್ಷಣವೇ ಪ್ರಾರಂಭಿಸಲು ಅನುಮತಿ ನೀಡುವುದು, ಸಂಪೂರ್ಣ ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಹಸ್ತಾಂತರಿಸುವುದು ಮತ್ತು ಜ್ಞಾನವಾಪಿ ಸಂಕೀರ್ಣದ ಆವರಣದೊಳಗೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸುವುದು ಹಿಂದೂಗಳ ಕಡೆಯ ಬೇಡಿಕೆಗಳಾಗಿವೆ. ಈ ಬೇಡಿಕಗಳನ್ನು ವಿರೋಧಿಸಿ, ಜ್ಞಾನವಾಪಿ ಮಸೀದಿ ಆವರಣವನ್ನು ಹಿಂದೂಗಳ ಪರವಾಗಿ ಹಸ್ತಾಂತರಿಸುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿ ಮೇಲ್ಮನವಿ ಸಲ್ಲಿಸಿತ್ತು. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ ಮನವಿಯನ್ನು ವಾರಣಾಸಿ ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಡಿಸೆಂಬರ್ ೨ಕ್ಕೆ ಮುಂದೂಡಿದೆ. ಪ್ರಕರಣ ನ್ಯಾಯಾಲಯದಲ್ಲಿ ನಡೆಯುವವರೆಗೆ ಮುಸ್ಲಿಮರಿಗೆ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ.
ಶ್ರದ್ಧಾ ಹತ್ಯೆ ಪ್ರಕರಣ: ಆಫ್ತಾಬ್‌ಗೆ ನಾರ್ಕೋ ಪರೀಕ್ಷೆ ನಡೆಸಲು ಅನುಮತಿ
ನವದೆಹಲಿ, ನ. ೧೭: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾಳ ಕೊಲೆ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ದೆಹಲಿಯ ನ್ಯಾಯಾಲಯವೊಂದು ಅನುಮತಿ ನೀಡಿದೆ. ಆರೋಪಿಯನ್ನು ಮಾದಕ ದ್ರವ್ಯ ಸೇವನೆ (ನಾರ್ಕೋ) ಪರೀಕ್ಷೆಗೆ ಒಳಪಡಿಸಲು ಅವಕಾಶ ನೀಡಿದೆ. ಈ ಸಂಬAಧ ಪೊಲೀಸರ ಮನವಿಗೆ ಸಮ್ಮತಿಸಿ ಮೆಟ್ರೋಪಾಲಿಟಿನ್ ಮ್ಯಾಜಿಸ್ಟೆçÃಟ್ ಅವಿರಾಲ್ ಶುಕ್ಲಾ ಈ ಆದೇಶ ಹೊರಡಿಸಿದ್ದಾರೆ. ಇಪ್ಪತ್ತೆಂಟರ ಹರೆಯದ ಪೂನಾವಾಲಾ ಶ್ರದ್ಧಾಳನ್ನು ಕೊಲೆ ಮಾಡಿ ಬಳಿಕ ಆಕೆಯ ದೇಹವನ್ನು ೩೫ ತುಂಡುಗಳನ್ನಾಗಿ ಮಾಡಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದ ಫ್ರಿಡ್ಜ್ನಲ್ಲಿ ಸುಮಾರು ಮೂರು ವಾರಗಳ ಕಾಲ ಇರಿಸಿದ್ದ ಆರೋಪಿ ಮಧ್ಯರಾತ್ರಿಯಲ್ಲಿ ದೇಹದ ತುಂಡುಗಳನ್ನು ಮೆಹ್ರೋಲಿಯ ಅರಣ್ಯದಲ್ಲಿ ಬಿಸಾಡಿದ್ದಾನೆ. ಪ್ರಿಯತಮೆ ಶ್ರದ್ಧಾಳ ನಡುವೆ ಆಗಾಗ್ಗೆ ಜಗಳವಾಗುತಿತ್ತು. ಇದೇ ಕಾರಣದಿಂದ ಪೂನಾವಾಲಾ ಮೇ ೧೮ ರ ಸಂಜೆ ೨೭ ವರ್ಷದ ಶ್ರದ್ಧಾಳನ್ನು ಕೊಂದಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬAಧ ತನಿಖೆ ಮುಂದುವರೆದಿದ್ದು, ಪ್ರತಿದಿನ ಭಯಾನಕ ಸತ್ಯಗಳು ಹೊರಬರುತ್ತಿವೆ.
ಉಗ್ರರಿಗೆ ಹಣ ಸಂಗ್ರಹಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗುತ್ತಿದೆ
ನವದೆಹಲಿ, ನ. ೧೭: ಉಗ್ರರಿಗೆ ಹಣ ಸಂಗ್ರಹಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಲಾಗುತ್ತಿದೆ ಎಂಬುದಕ್ಕೆ ಭಾರತ ಪುರಾವೆಗಳನ್ನು ಹೊಂದಿದೆ ಎಂದು ಎನ್‌ಐಎ ಮಹಾನಿರ್ದೇಶಕ ದಿನಕರ್ ಗುಪ್ತಾ ಅವರು ಹೇಳಿದ್ದಾರೆ. ಭಯೋತ್ಪಾದಕರಿಗೆ ಹಣಕಾಸು ನೆರವು ನಿಗ್ರಹದ ಬಗ್ಗೆ ಎರಡು ದಿನಗಳ ಅಂರ‍್ರಾಷ್ಟಿçÃಯ ಸಚಿವರ ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಗುಪ್ತಾ ತಿಳಿಸಿದ್ದಾರೆ. ಶುಕ್ರವಾರದಿಂದ ಪ್ರಾರಂಭವಾಗುವ ಸಮ್ಮೇಳನಕ್ಕೂ ಮೊದಲು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುಪ್ತಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ. ಆದರೆ ಚೀನಾ ಇನ್ನೂ ತನ್ನ ಉಪಸ್ಥಿತಿಯನ್ನು ಖಚಿತಪಡಿಸಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಆಯೋಜಿಸಿರುವ ಭಯೋತ್ಪಾದನೆಗೆ ಹಣಕಾಸು ನಿಗ್ರಹ ಕುರಿತು ಉಗ್ರರಿಗೆ ಹಣವಿಲ್ಲ ಸಚಿವರ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟಿಸಲಿದ್ದಾರೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಬ್ರಿಟನ್-ಭಾರತ ಹೊಸ ವೀಸಾ ಯೋಜನೆಗೆ ಉದ್ಯಮ, ವಿದ್ಯಾರ್ಥಿ ವಲಯದ ಸ್ವಾಗತ
ಲಂಡನ್, ನ. ೧೭: ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರು ಪ್ರಾರಂಭಿಸಿರುವ ಹೊಸ ಬ್ರಿಟನ್-ಭಾರತ ಯುವ ವೃತ್ತಿಪರರ ವೀಸಾ ಯೋಜನೆಯನ್ನು ಉದ್ಯಮ ವಲಯ ಮತ್ತು ವಿದ್ಯಾರ್ಥಿ ವಲಯ ಸ್ವಾಗತಿಸಿದ್ದು, ಮಾರುಕಟ್ಟೆಗಳ ನಡುವೆ ಉನ್ನತ ಪ್ರತಿಭೆಗಳ ಸುಗಮ ಚಲನೆಯನ್ನು ಖಾತ್ರಿಪಡಿಸುವಲ್ಲಿ ಇದು ಉತ್ತಮ ಹೆಜ್ಜೆ ಎಂದು ಪ್ರಶಂಸಿಸಿದ್ದಾರೆ. ಬುಧವಾರದಂದು ಘೋಷಣೆ ಮಾಡಲಾದ ಈ ವೀಸಾ ಯೋಜನೆಯು ಮುಂದಿನ ವರ್ಷದ ಆರಂಭದಿAದ ಚಾಲನೆಗೆ ಬರಲಿದೆ. ಈ ಯೋಜನೆ ಅನ್ವಯ ೧೮ ರಿಂದ ೩೦ ರ ನಡುವಿನ ವಯಸ್ಸಿನ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ೨೪ ತಿಂಗಳುಗಳ ಕಾಲ ಬ್ರಿಟನ್‌ನಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ವಾರ್ಷಿಕವಾಗಿ ೩,೦೦೦ ವೀಸಾಗಳನ್ನು ನೀಡಲು ಪ್ರಾರಂಭಿಸಲಾಗುತ್ತದೆ. ಜಾಗತಿಕವಾಗಿ ಲಂಡನ್ ನಗರದ ಆರ್ಥಿಕ ಕೇಂದ್ರವನ್ನು ಪ್ರತಿನಿಧಿಸುವ ಲಂಡನ್ ಲಾರ್ಡ್ ಮೇಯರ್ ನಿಕೋಲಸ್ ಲಿಯಾನ್ಸ್, ಬಾಲಿಯಲ್ಲಿ ನಡೆದ ಜಿ೨೦ ಶೃಂಗಸಭೆಯ ಪ್ರಕಟಣೆಯನ್ನು ಸ್ವಾಗತಿಸಿದರು.