ಮಡಿಕೇರಿ: ಮಕ್ಕಳ ದಿನಾಚರಣೆ ಪ್ರಯುಕ್ತ ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆ ಶಾಲೆಯಲ್ಲಿ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿ.ಎಸ್.ಎನ್. ಎಲ್. ಉಪವಿಭಾಗದ ಇಂಜಿನಿಯರ್ ಲೀನಾ ದಯಾನಂದ್ ಹಾಗೂ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್ ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ನಂತರ ಮಾತನಾಡಿ, ಪಠ್ಯ ಪುಸ್ತಕದೊಂದಿಗೆ ಬಾಹ್ಯ ಚಟುವಟಿಕೆಗಳನ್ನೂ ಮಕ್ಕಳು ಅವಲಂಬಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ರಾಜ್ಯ ಗಳಿಗೆ ಸಂಬAಧಿಸಿದ ಉಡುಪು ಗಳನ್ನು ಮಕ್ಕಳು ಪ್ರದರ್ಶಿಸಿದರು. ಸಂಗೀತ, ನೃತ್ಯ ಪುಟ್ಟ ಮಕ್ಕಳಿಂದ ಜರುಗಿತು. ವಿದ್ಯಾರ್ಥಿ ಸಂಜಯ್ ಸ್ವಾಗತ ಭಾಷಣ ಮಾಡಿದರು. ವಂದನಾರ್ಪಣೆಯನ್ನು ಕುಲ್ದೀಪ್ ಮಾಡಿದರು.ಶನಿವಾರಸಂತೆ: ಪಟ್ಟಣದ ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಯಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ರಿಕೆಜಿ ವಿದ್ಯಾರ್ಥಿಗಳೊಂದಿಗೆ ೭ನೇ ತರಗತಿ ವಿದ್ಯಾರ್ಥಿನಿ ಬಿ.ಜಿ. ಪೂರ್ವಿ ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಯುಕೆಜಿಯಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೃತ್ಯ, ಗಾಯನ, ನಾಟಕ, ಭಾಷಣ ಮಾಡಿ ಪೋಷಕರನ್ನು, ಸಭಿಕರನ್ನು ರಂಜಿಸಿದರು. ಗಾಯಕ ಜಾನಪದ ಪರಿಷತ್ ಸದಸ್ಯ ಸುರೇಶ್ ಮೊಗೆರ ಹಾಗೂ ಪೂರ್ಣಿಮಾ ಕನ್ನಡಗೀತೆ ಹಾಡಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿ ಗಳಾದ ಹೇಮಾವತಿ ತಂಡದ ಸುಪ್ರಜಾ ಗುರುಕುಲ ವಿದ್ಯಾಸಂಸ್ಥೆಯ ಹೆಚ್.ಎಲ್. ಚಂದನ್, ಸಾಯಿಪೂರ್ವಿ, ಕೆ.ಎಸ್. ಕೀರ್ತನಾ, ಶಿಂಷಾ ತಂಡದ ಎಸ್.ಎಸ್. ನಿಶ್ಮಿತಾ, ಸಾರ್ಥಕ, ಬಿ. ಪ್ರದೀಪ್, ಮೋಕ್ಷಿತ್ ಗೌಡ, ಬಾಪೂಜಿ ವಿದ್ಯಾಸಂಸ್ಥೆಯ ನುಮಾನ್, ಜ್ಞಾನೇಶ್, ಆಬೀದ್, ಆಸಫ್, ಇಮ್ತಿಯಾಜ್, ದಿಶಾಂತ್ ಅವರಿಗೆ ಬಹುಮಾನಗಳನ್ನು ವಿತರಿಸಿದರು.
ಪ್ರಾಂಶುಪಾಲೆ ಡಿ. ಸುಜಲಾದೇವಿ, ಶಿಕ್ಷಕರು, ಅತಿಥಿಗಳಾಗಿ ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಜಾನಪದ ಪರಿಷತ್ ಹೋಬಳಿ ಘಟಕದ ಗೌರವಾಧ್ಯಕ್ಷೆ ನಯನತಾರಾ, ಸದಸ್ಯರಾದ ಪ್ರಕಾಶ್ಚಂದ್ರ, ಒಡೆಯನಪುರ ಸುರೇಶ್ ಹಾಜರಿದ್ದರು. ವಿದ್ಯಾರ್ಥಿಗಳಾದ ಮೃದಲಾ, ಅಧರ್ವಾ, ನಿಶ್ಮಿತಾ, ಧನರಾಜ್ ಕಾರ್ಯಕ್ರಮ ನಿರ್ವಹಿಸಿದರು.ಕಡಂಗ: ವಿಜಯ ವಿದ್ಯಾಸಂಸ್ಥೆ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಅವರ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕಿ ದರ್ಶಿನಿ, ಮಕ್ಕಳೇ ಮನೆಯ ಮಾಣಿಕ್ಯ, ಭವಿಷ್ಯದ ನಂದಾದೀಪ ಮತ್ತು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದರು. ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮದಿAದ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರ ವರ್ಗದವರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.ಗೋಣಿಕೊಪ್ಪಲು: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವೀರಾಜಪೇಟೆ ತಾಲೂಕು ಸ್ತಿçÃಶಕ್ತಿ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು ಪೊನ್ನಂಪೇಟೆಯ ಸ್ತಿçÃಶಕ್ತಿ ಭವನದಲ್ಲಿ ನಡೆಯಿತು.
ಬ್ಲಾಕ್ ಸೊಸೈಟಿ ಅಧ್ಯಕ್ಷೆ ಎಂ.ಎಸ್. ರಜನಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಹೆಚ್.ವಿ. ರತ್ನ, ಶಿಶುಪಾಲನ ಕೇಂದ್ರದ ಶಿಕ್ಷಕಿ ಪ್ರಮೀಳ ಸೇರಿದಂತೆ ವಿವಿಧ ಪದಾಧಿಕಾರಿಗಳು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಹಾಗೂ ಕೇಂದ್ರದ ಸಹಾಯಕಿಯರಾದ ದಿವ್ಯ, ಶ್ರೀಜಾ, ಬ್ಲಾಕ್ ಸೊಸೈಟಿಯ ಸದಸ್ಯೆ ವರಲಕ್ಷಿö್ಮ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು. ಈ ವೇಳೆ ಶಿಶುಪಾಲನ ಕೇಂದ್ರಕ್ಕೆ ವರಲಕ್ಷಿö್ಮ ಅವರು ೬ ಕುರ್ಚಿಗಳನ್ನು ಉಚಿತವಾಗಿ ನೀಡಿದರು.ಮಡಿಕೇರಿ: ಅಶೋಕಪುರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸ ಲಾಯಿತು.
ಉದ್ಘಾಟನೆಯನ್ನು ನಗರಸಭೆ ಸದಸ್ಯೆ ಶಾರದ ನಾಗರಾಜು, ಅನ್ನಪೂರ್ಣೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಜಯರಾಮ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ದಿವಾಕರ ಮತ್ತು ಹಿರಿಯ ನಾಗರಿಕ ರಾದ ಪ್ರೇಮ ನೆರವೇರಿಸಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ಮೀರಾ, ಸಹಾಯಕಿ ರಾಣಿ ಹಾಜರಿದ್ದರು.