ಮಡಿಕೇರಿ, ನ. ೧೭ : ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನೆಲೆಯಲ್ಲಿ ಮಡಿಕೇರಿ ಉಪ ವಿಭಾಗದ ಬೆಟ್ಟಗೇರಿ ಕಿರಿಯ ಪ್ರಾಥಮಿಕ ಶಾಲೆ, ಗೋಣಿಕೊಪ್ಪಲು ಉಪ ವಿಭಾಗದ ಹುದಿಕೇರಿ, ಬಿರುನಾಣಿ ಗ್ರಾ.ಪಂ. ಸಭಾಂಗಣ, ವೀರಾಜಪೇಟೆ ಉಪ ವಿಭಾಗದ ಅವರೆಗುಂದ ಬುಡಕಟ್ಟು ಕೃಷಿಕರ ಸಂಘದ ಸಮುದಾಯ ಭವನ, ಕುಶಾಲನಗರ ಉಪ ವಿಭಾಗದ ನಂಜರಾಯಪಟ್ಟಣ ಗ್ರಾ.ಪಂ. ಸಭಾಂಗಣದಲ್ಲಿ ಹಾಗೂ ಸೋಮವಾರಪೇಟೆ ಉಪ ವಿಭಾಗದ ಕಟ್ಟೆಪುರ ಗ್ರಾಮದ ಕಟ್ಟೆಪುರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೧೯ ರಂದು ಬೆಳಿಗ್ಗೆ ೧೧ ಗಂಟೆಯಿAದ ವಿದ್ಯುತ್ ಅದಾಲತ್ ನಡೆಯಲಿದೆ. ಈ ವ್ಯಾಪ್ತಿಯ ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳÀನ್ನು ಸಲ್ಲಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.