ಕೂಡಿಗೆ, ನ. ೧೭ : ಕೂಡಿಗೆಯ ಕೃಷಿ ಕ್ಷೇತ್ರದ ೪೭ ಎಕರೆಗಳಷ್ಟು ಪ್ರದೇಶದಲ್ಲಿ ಈಗಾಗಲೇ ಕಾಯ್ದಿರಿಸಲಾಗಿರುವ ಜಾಗದಲ್ಲಿ ಹೆಲಿಪೋರ್ಟ್ ನಿರ್ಮಾಣ ಮಾಡುವ ಜಾಗವನ್ನು ವಿಮಾನಯಾನ ನಿಯಮಕ್ಕೆ ಸಂಬAಧಿಸಿದ ದೆಹಲಿ ತಂಡ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ಸ್ಥಳದ ಮಾಹಿತಿಯನ್ನು ಪಡೆದುಕೊಂಡರು.

ಮೊದಲ ಹಂತವಾಗಿ ಕೊಡಗು ಜಿಲ್ಲೆಯ ಕೂಡಿಗೆ ಸಮೀಪದ ಕೃಷಿ ಕ್ಷೇತ್ರದ ಜಾಗದಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ಸಂಬAಧಿಸಿದAತೆ ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಒಳಪಡುವ ಪವನ್ ಲಿಮಿಟೆಡ್ ಸಂಸ್ಥೆ ತಂಡದ ಅಧಿಕಾರಿಗಳು ಜಿಲ್ಲೆಯ ವಿವಿಧ ಅಧಿಕಾರಿ ತಂಡದೊAದಿಗೆ ಸ್ಥಳಕ್ಕೆ ಭೇಟಿ ನೀಡಿದರು.

ದೆಹಲಿ ಸಂಸ್ಥೆಯ ವಿಭಾಗೀಯ ನಿರ್ದೇಶಕ ಕ್ಯಾಪ್ಟನ್ ಸಲಿಲ್ ಪಾರಸರ್, ಪಿ.ಕೆ. ಮೋರ್‌ಗರ್ ಮತ್ತು ರಾಜ್ಯ ಸರ್ಕಾರದ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಕ್ರಿಯಾಯೋಜನೆ ಅಭಿಯಂತರ

(ಮೊದಲ ಪುಟದಿಂದ) ಅಕ್ಷಯ ಹೊಂಡಗಾರ್, ಕುಶಾಲನಗರ ತಾಲೂಕು ತಹಶೀಲ್ದಾರ್ ಕೆ.ಪಿ. ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಯ ತಂಡದ ಅಧಿಕಾರಿಗಳು ಕಾಯ್ದಿರಿಸಿದ ಜಾಗದ ಸಮೀಪದಲ್ಲಿ ಹರಿಯುವ ಹಾರಂಗಿ ನದಿ ತಾಂತ್ರಿಕ ಯಂತ್ರದ ಮೂಲಕ ಈಗಾಗಲೇ ಭೂ ಮಾಪನ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಜಾಗದ ಎಲ್ಲಾ ವಿಭಾಗಗಳಲ್ಲಿ ಪರಿಶೀಲನೆ ನಡೆಸಿದರು.

ಮೂರು ಗಂಟೆಗಳ ಕಾಲ ಕೃಷಿ ಕ್ಷೇತ್ರದ ಜಾಗದಲ್ಲಿ ಹೆಲಿಪೋರ್ಟ್ಗೆ ಸಂಬAಧಿಸಿದ ಮಧ್ಯ ಭಾಗದ ಜಾಗದ ಒಳ ಮತ್ತು ಹೊರ ಭಾಗ ಜಾಗ ವಿಸ್ತೀರ್ಣ, ಬರುವ ದಾರಿ ಸಮೀಪದ ಸೈನಿಕ ಶಾಲೆಯ ಅಂತರ ಸೇರಿದಂತೆ, ಹಾರಂಗಿಯಿAದ ವಿದ್ಯುತ್ ಉತ್ಪಾದನೆಯಾಗಿ ಕೃಷಿ ಕ್ಷೇತ್ರದ ಸಮೀಪದ ಗ್ರಾಮಗಳ ಮೂಲಕ ಹೈ ಓಲ್ಟೇಜ್ ತಂತಿಯ ಮೂಲಕ ಕುಶಾಲನಗರ ವಿದ್ಯುತ್ ಸಂಗ್ರಹ ಕೇಂದ್ರಕ್ಕೆ ಬಂದಿರುವ ಮತ್ತು ಮಳೆಗಾಲದ ಸಂದರ್ಭದಲ್ಲಿ ನದಿಯಿಂದ ಕಾಯ್ದಿರಿಸಿದ ಜಾಗಕ್ಕೆ ನೀರು ಬರುವ ವಿಷಯ ಸೇರಿದಂತೆ ಜಾಗದ ಸುತ್ತ ಮುತ್ತಲಿನ ಸಮಗ್ರವಾದ ವರದಿಯನ್ನು ಹಂತ ಹಂತವಾಗಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಈಗಾಗಲೇ ರಾಜ್ಯ ಸರ್ಕಾರ ಈ ಬಾರಿ ಕೊಡಗು ಸೇರಿದಂತೆ ಇತರ ಎರಡು ಜಿಲ್ಲೆಗಳಿಗೆ ರೂ. ೧೦ ಕೋಟಿ ಹಣವನ್ನು ಬಜೆಟ್‌ನಲ್ಲಿ ಕಾಯ್ದಿರಿಸಿದೆ. ಅದರನ್ವಯ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಳೆದ ತಿಂಗಳಲ್ಲಿ ಸಂಬAಧಿಸಿದ ಇಲಾಖೆಯವರಿಗೆ ಕಾರ್ಯಚಟುವಟಿಕೆಗಳನ್ನು ಅರಂಭಿಸಲು ಒತ್ತಾಯ ಮಾಡಿದರು ಅದರಂತೆ ರಾಜ್ಯ ಮತ್ತು ದೆಹಲಿ ತಂಡದವರು ಹೆಲಿಪೋರ್ಟ್ ನಿರ್ಮಾಣಕ್ಕೆ ಸಂಬAಧಿಸಿದAತೆ ಕಾರ್ಯಯೋಜನೆಯನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬAಧಿಸಿದ ಪ್ರಾಧಿಕಾರಕ್ಕೆ ವರದಿ ನೀಡಲಿದ್ದಾರೆ.

ಕೂಡಿಗೆಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ಸಂಬAಧಿಸಿದAತೆ ಅರು ತಿಂಗಳ ಹಿಂದೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ರಾಜ್ಯ ಸರ್ಕಾರದ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಆರ್. ರವಿ ಅವರೊಂದಿಗೆ ಹಾಗೂ ತಾಂತ್ರಿಕ ತಂಡ ಮತ್ತು ನಿಗಮದ ಸಲಹಾ ಸಮಿತಿಯ ಹಿರಿಯ ಅಧಿಕಾರಿಗಳೊಂದಿಗೆ ಕೂಡಿಗೆಯ ಕೃಷಿ ಕ್ಷೇತ್ರದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದರ ಮುಂದಿನ ಭಾಗವಾಗಿ ಅಧಿವೇಶನದಲ್ಲಿ ಚರ್ಚೆಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಕ್ಕೆ ಹೆಲಿಪೋರ್ಟ್ ನಿರ್ಮಾಣಕ್ಕೆ ಕಾಲ ಕೊಡಿ ಬರುವುದು ಹತ್ತಿರವಾಗುತ್ತಿದೆ.

ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ಉಪ ತಹಶೀಲ್ದಾರ್À ಮಧುಸೂದನ್, ತಾಲೂಕು ಭೂಮಾಪನ ಅಧಿಕಾರಿ ವಿರೂಪಾಕ್ಷ, ವಿದ್ಯುತ್ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಅನಿತಾ ಬಾಯ್, ಒಳಚರಂಡಿ ಇಲಾಖೆಯ ಅಧಿಕಾರಿ ಹರ್ಷಿತ್, ಕಂದಾಯ ನಿರೀಕ್ಷಕ ಸಂತೋಷ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್, ಮಾಜಿ ಸದಸ್ಯ ಕುಮಾರ್ ಸ್ವಾಮಿ ಹಾಜರಿದ್ದರು. -ಕೆ.ಕೆ. ನಾಗರಾಜಶೆಟ್ಟಿ.