ಮಡಿಕೇರಿ, ನ. ೧೭: ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ರಾಜಕೀಯ ವೈಷಮ್ಯ ಸಾಧಿಸುವ ನಿಟ್ಟಿನಲ್ಲಿ ನಗರಸಭೆಯ ಎಸ್.ಡಿ.ಪಿ.ಐ. ಸದಸ್ಯರು ಆಡಳಿತ ರೂಢ ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪವೆಸಗಿ ಜನರ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಹಾಗೂ ನಗರಸಭಾ ಸದಸ್ಯರಾಗಿರುವ ಮಹೇಶ್ ಜೈನಿ ಮಡಿಕೇರಿ, ನ. ೧೭: ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ರಾಜಕೀಯ ವೈಷಮ್ಯ ಸಾಧಿಸುವ ನಿಟ್ಟಿನಲ್ಲಿ ನಗರಸಭೆಯ ಎಸ್.ಡಿ.ಪಿ.ಐ. ಸದಸ್ಯರು ಆಡಳಿತ ರೂಢ ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪವೆಸಗಿ ಜನರ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಹಾಗೂ ನಗರಸಭಾ ಸದಸ್ಯರಾಗಿರುವ ಮಹೇಶ್ ಜೈನಿ ಬಿದ್ದಿದ್ದ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಒತ್ತು ನೀಡಿದ ಪರಿಣಾಮ ಇಂದು ಯೋಜನೆಗೆ ಮರುಜೀವ ದೊರೆತು ಮೊಣ್ಣಂಗೇರಿಯಲ್ಲಿ ನೂತನ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಘಟಕ ಸ್ಥಾಪನೆಗೆ ರೂ. ೭.೭ ಕೋಟಿ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ಪೌರಾಡಳಿತ ನಿರ್ದೇಶನಾಲಯಕ್ಕೆ ಅನುಮೋದನೆಗೆ ಕಳುಹಿಸಲಾಗಿದೆ.

(ಮೊದಲ ಪುಟದಿಂದ) ಗುಡ್ಡದ ಮೇಲೆ ತುಂಬಿದ್ದ ಕಸವಿಲೇವಾರಿಗೆ ಟೆಂಡರ್ ಕರೆಯಲಾಗಿದೆ. ಜೊತೆಗೆ ಉದ್ಯಾನವನ, ಗಾಂಧಿ ಮೈದಾನದಲ್ಲಿ ಗ್ಯಾಲರಿ ನಿರ್ಮಾಣ, ಬೀದಿ ದೀಪ ಅಳವಡಿಕೆ, ನಾಯಿಗಳ ಹಾವಳಿ ನಿಯಂತ್ರಣ, ಗೃಹಭಾಗ್ಯ ಯೋಜನೆಯಡಿ ೧೨ ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

ಬಹುಮಹಡಿ ವಾಹನ ಪಾರ್ಕಿಂಗ್‌ಗೆ ರೂ. ೪ ಕೋಟಿ ಅನುದಾನ ಮೀಸಲಿರಿಸಿದ್ದು, ಅನುಮೋದನೆ ಪಡೆಯಲಾಗಿದೆ. ಶಿಥಿಲಗೊಂಡಿರುವ ಕಾವೇರಿ ಕಲಾಕ್ಷೇತ್ರ ಕೆಡವಿ ರೂ. ೫ ಕೋಟಿ ವೆಚ್ಚದಲ್ಲಿ ಎಲ್ಲಾ ವ್ಯವಸ್ಥೆಯುಳ್ಳ ನೂತನ ಕಲಾಕ್ಷೇತ್ರವನ್ನು ನಿರ್ಮಿಸಲಾಗುತ್ತದೆ. ಈ ಸಂಬAಧ ಟೆಂಡರ್ ಕರೆಯಲಾಗುತ್ತದೆ. ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿವೆ ಎಂದು ವಿವರಿಸಿದರು. ಅಷ್ಟೇ ಅಲ್ಲದೆ ಹೆಚ್ಚಿನ ಅನುದಾನ ಕೋರಿ ಮುಂದಿನ ವಾರದಲ್ಲಿ ನಗರಸಭಾ ನಿಯೋಗ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದ ಅವರು, ಮುಂದಿನ ಮಳೆಗಾಲದ ಹೊತ್ತಿಗೆ ಎಲ್ಲಾ ರಸ್ತೆಗಳು ಸರಿಪಡಿಸುವುದರ ಜೊತೆಗೆ ಆದ್ಯತೆ ಮೇರೆ ಇರುವ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಇವೆಲ್ಲ ವಿಚಾರಗಳು ಎಸ್.ಡಿ.ಪಿ.ಐ. ಸದಸ್ಯರಿಗೆ ತಿಳಿದಿದ್ದರೂ ರಾಜಕೀಯ ಲಾಭಕ್ಕಾಗಿ ಮಾಧ್ಯಮ ಹೇಳಿಕೆಗಳನ್ನು ನೀಡಿ ಜನರ ದಿಕ್ಕುತಪ್ಪಿಸುವ ವಿಫಲ ಯತ್ನ ಮಾಡುತ್ತಿದ್ದಾರೆ ಎಂದರು.

ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಮುಂದಿನ ತಿಂಗಳಿನಿAದ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ. ಪ್ರತಿ ಸದಸ್ಯರಿಗೆ ತಲಾ ರೂ. ೫ ಲಕ್ಷ ಪ್ರತ್ಯೇಕ ಅನುದಾನ ದೊರೆಯಲಿದೆ. ಸಿಬ್ಬಂದಿಗಳಿಗೆ ವೇತನ ದೊರೆಯದ ವಿಚಾರದಲ್ಲಿ ಅಧಿಕಾರಿಗಳಿಂದ ತಪ್ಪಾಗಿದೆ. ಅದನ್ನು ಬಗೆಹರಿಸುವ ಕೆಲಸವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಸಂಬಳ ಪಾವತಿಯಾಗಲಿದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಸತೀಶ್, ನಗರ ಕಾರ್ಯದರ್ಶಿ ಕಾಳಚಂಡ ಅಪ್ಪಣ್ಣ ಹಾಗೂ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಹಾಜರಿದ್ದರು.