ಗೋಣಿಕೊಪ್ಪಲು, ನ. ೧೭: ಸಿಹಿ ಗೆಣಸಿನ ಚೀಲದೊಂದಿಗೆ ಬೀಟೆ ಮರದ ನಾಟ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ನಡುರಾತ್ರಿ ಬಂಧಿಸುವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಪೋಕ್ಲು ಹೊದವಾಡ ಗ್ರಾಮದ ಕೆ.ಯು. ಅಬ್ಬಾಸ್ ಬಂದಿತ ಆರೋಪಿ. ತಲೆಮರೆಸಿಕೊಂಡ ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಯಿಂದ ೫ ಲಕ್ಷ ಮೌಲ್ಯದ ಬೀಟೆ ನಾಟಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಪಿಕ್‌ಅಪ್ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ.
ಪೊನ್ನಂಪೇಟೆ ಸಮೀಪದ ಕಿರುಗೂರು ಗ್ರಾಮದ ತೋಟದಲ್ಲಿದ್ದ ಬೀಟೆ ಮರಗಳನ್ನು ಬುಡ ಸಹಿತ ಬೀಳಿಸಿ ಅದನ್ನು ನಾಟಗಳನ್ನು ಪರಿವರ್ತಿಸಿ ಕೇರಳಕ್ಕೆ ಸಾಗಿಸುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಬ್ರಮಣಿ ಅವರಿಗೆ ಖಚಿತ ಕರೆಯೊಂದು ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಪೊನ್ನಂಪೇಟೆ ಸಮೀಪದ ಜೋಡುಬೀಟಿ ಬಳಿ ತಾತ್ಕಾಲಿಕ ಪೊಲೀಸ್ ತಪಾಸಣಾ ಕೇಂದ್ರದ ಬಳಿ ಬ್ಯಾರಿಕೇಡ್ ಅನ್ನು ಅಳವಡಿಸಿ ವಾಹನಗಳ ತಪಾಸಣೆ ನಡೆಸಲಾಗುತಿತ್ತು.
ಕಿರುಗೂರು ಭಾಗದಿಂದ ಬೀಟೆ ನಾಟಗಳನ್ನು ತುಂಬಿಸಿಕೊAಡು ಪೊನ್ನಂಪೇಟೆ ಮಾರ್ಗವಾಗಿ ಕುಟ್ಟಕ್ಕೆ ತೆರಳಿ ಅಲ್ಲಿಂದ ಕೇರಳಕ್ಕೆ ತೆರಳಬೇಕಿದ್ದ ವಾಹನವನ್ನು ತಡೆದ ಸಂದರ್ಭ ರಸ್ತೆಯಲ್ಲಿದ್ದ ಪೊಲೀಸರ ಜೀಪನ್ನು ಕಂಡು ಪಿಕ್‌ಅಪ್ ವಾಹನದಲ್ಲಿದ್ದ ಚಾಲಕ ತನ್ನ ಮಾರ್ಗವನ್ನು ಬದಲಿಸಿ ಗೋಣಿಕೊಪ್ಪ ಮಾರ್ಗದಲ್ಲಿ ವಾಹನವನ್ನು ಚಲಾಯಿಸಿದ್ದಾನೆ. ಈ ವೇಳೆ ಪೊಲೀಸರು ಪಿಕ್‌ಅಪ್ ವಾಹನವನ್ನು ಹಿಂಬಾಲಿಸಿ ಜೋಡುಬೀಟಿಯಲ್ಲಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ವಾಹನದ ಚಾಲಕ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದನಾದರೂ ಪೊಲೀಸರು ಈತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದ ನಂತರ ಪೊಲೀಸರು ಆರೋಪಿ ಅಬ್ಬಾಸ್‌ನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುತ್ತಿದ್ದ ವೇಳೆ ರೈತರ ಕಾಫಿ ತೋಟದಲ್ಲಿ ಬೀಟೆ ಮರಗಳನ್ನು ಉರುಳಿಸಿ ಇದನ್ನು ನಾಟಗಳನ್ನಾಗಿ ಪರಿವರ್ತಿಸಿ ಬೀಟೆ ನಾಟಗಳನ್ನು ಬೇರೆಡೆಗೆ ಸಾಗಿಸುವ ನಡೆಸಲಾಗುತಿತ್ತು.
ಕಿರುಗೂರು ಭಾಗದಿಂದ ಬೀಟೆ ನಾಟಗಳನ್ನು ತುಂಬಿಸಿಕೊAಡು ಪೊನ್ನಂಪೇಟೆ ಮಾರ್ಗವಾಗಿ ಕುಟ್ಟಕ್ಕೆ ತೆರಳಿ ಅಲ್ಲಿಂದ ಕೇರಳಕ್ಕೆ ತೆರಳಬೇಕಿದ್ದ ವಾಹನವನ್ನು ತಡೆದ ಸಂದರ್ಭ ರಸ್ತೆಯಲ್ಲಿದ್ದ ಪೊಲೀಸರ ಜೀಪನ್ನು ಕಂಡು ಪಿಕ್‌ಅಪ್ ವಾಹನದಲ್ಲಿದ್ದ ಚಾಲಕ ತನ್ನ ಮಾರ್ಗವನ್ನು ಬದಲಿಸಿ ಗೋಣಿಕೊಪ್ಪ ಮಾರ್ಗದಲ್ಲಿ ವಾಹನವನ್ನು ಚಲಾಯಿಸಿದ್ದಾನೆ. ಈ ವೇಳೆ ಪೊಲೀಸರು ಪಿಕ್‌ಅಪ್ ವಾಹನವನ್ನು ಹಿಂಬಾಲಿಸಿ ಜೋಡುಬೀಟಿಯಲ್ಲಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ವಾಹನದ ಚಾಲಕ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದನಾದರೂ ಪೊಲೀಸರು ಈತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದ ನಂತರ ಪೊಲೀಸರು ಆರೋಪಿ ಅಬ್ಬಾಸ್‌ನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುತ್ತಿದ್ದ ವೇಳೆ ರೈತರ ಕಾಫಿ ತೋಟದಲ್ಲಿ ಬೀಟೆ ಮರಗಳನ್ನು ಉರುಳಿಸಿ ಇದನ್ನು ನಾಟಗಳನ್ನಾಗಿ ಪರಿವರ್ತಿಸಿ ಬೀಟೆ ನಾಟಗಳನ್ನು ಬೇರೆಡೆಗೆ ಸಾಗಿಸುವ ಯತ್ನದ ಬಗ್ಗೆ ತಿಳಿದು ಬಂದಿದೆ.
ಬೀಟೆ ನಾಟಗಳನ್ನು ಸಾಗಿಸುವ ವೇಳೆ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಬೀಟೆ ನಾಟಗಳೊಂದಿಗೆ ಸಿಹಿ ಗೆಣಸಿನ ಚೀಲವನ್ನು ಪಿಕ್‌ಅಪ್ ವಾಹನದಲ್ಲಿ ತುಂಬಿಸಲಾಗಿತ್ತು. ವಾಹನವನ್ನು ತಪಾಸಣೆಗೆ ಒಳಪಡಿಸಿದ ನಂತರ ವಾಹನದಲ್ಲಿದ್ದ ಸಿಹಿ ಗೆಣಸಿನ ಚೀಲವನ್ನು ಸಂಪೂರ್ಣವಾಗಿ ತೆರವುಗೊಳಿಸಿದ ನಂತರ ಭಾರೀ ಗಾತ್ರದ ಬೀಟೆ ನಾಟಗಳು ಕಂಡು ಬಂದಿವೆ.
ಡಿವೈಎಸ್ಪಿ ನಿರಂಜನ್ ರಾಜೇ ಅರಸ್ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ಸಿಪಿಐ ಗೋವಿಂದರಾಜ್ ನಿರ್ದೇಶನದ ಮೇರೆ ಕಾರ್ಯಾಚರಣೆ ಗಿಳಿದ ಪೊನ್ನಂಪೇಟೆ ಠಾಣಾಧಿಕಾರಿ ಹೆಚ್.ಸಿ.ಸುಬ್ರಮಣಿ ಹಾಗೂ ತಂಡ ಆರೋಪಿ ಸಹಿತ ಮಾಲನ್ನು ವಶಪಡಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಎಸ್.ಬಿ. ಮಹದೇಶ್ವರ ಸ್ವಾಮಿ, ಜೀವನ್, ಪ್ರಮೋದ್, ಬಸವರಾಜ್ ಕೌಜಲಗಿ, ಸಂತೋಷ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.
-ಹೆಚ್.ಕೆ.ಜಗದೀಶ್