ಭಾರ ಎತ್ತುವುದು, ಎಸೆತದ ಸ್ಪರ್ಧೆಗಳು ಮಾನವನ ದೇಹಕ್ಕೆ ವ್ಯಾಯಾಮಗಳನ್ನು ನೀಡಿ ದೇಹವನ್ನು ಸದೃಢವನ್ನಾಗಿಸುವುದು. ಆದಿ ಕಾಲದಲ್ಲಿ ಮಾನವನು ತನ್ನ ಹೊಟ್ಟೆಪಾಡಿಗಾಗಿ ದೊಡ್ಡ-ದೊಡ್ಡ ಕಲ್ಲು ಇತರೆ ಆಯುಧಗಳನ್ನು ಉಪಯೋಗಿಸಿ ಭಾರ ಎತ್ತುವ, ಎಸೆಯುವ ಕ್ರಿಯೆಗಳಲ್ಲಿ ತೊಡಗುತ್ತಿದ್ದ. ಆಗ ಆತನಿಗೆ ಅರಿವಾಗದೇ ದೇಹಕ್ಕೆ ವ್ಯಾಯಮ ಗಳು ದೊರೆತು, ಆರೋಗ್ಯವಂತ ಸದೃಢ ದೇಹಿಯಾಗುತ್ತಿದ್ದ. ಆದರೆ ಇಂದು ಆಧುನಿಕ ಯುಗದಲ್ಲಿ ಇಂತಹ ಕ್ರಿಯೆಗಳಿಲ್ಲದೇ ಮಾನವ ಯಂತ್ರಾವಲAಭಿ ಯಾಗಿ ಇಲ್ಲ, ದೈಹಿಕ ಶ್ರಮವಿಲ್ಲದೆ ಬೆಳೆದು ಜೀವನ ಸಾಗಿಸುವುದರಿಂದ ಅನಾರೋಗ್ಯ ಕಾಡುತ್ತಿರುವುದು, ಆತನ ಆಯುಷ್ಯವು ಕಡಿಮೆಯಾಗುತ್ತಿರುವುದು. ಈ ಕೊರತೆಯನ್ನು ನೀಗಿಸಲು ಆಟ, ಓಟ, ಎಸೆತಗಳನ್ನು ಇಂದು ಸ್ಪರ್ಧಾತ್ಮಕ ರೂಪದಲ್ಲಿ ಉಳಿಸಿಕೊಂಡು ದೈಹಿಕ ಆರೋಗ್ಯ ಪಡೆಯಲು ಕ್ರೀಡೆ, ಅಥ್ಲೆಟಿಕ್ಸ್ ಕೂಟಗಳನ್ನು ಏರ್ಪಡಿಸಿ ಮಾನವನ ಆರೋಗ್ಯಕ್ಕೆ ಗಮನ ನೀಡಲಾಗಿದೆ. ದೈಹಿಕ ಚಟುವಟಿಕೆಗಳು ನಮಗೆ ಆರೋಗ್ಯವನ್ನು ತಂದು ಕೊಡುವುದು.

೧೯೫೬ರಲ್ಲಿ ೧೬ ಪೌಂಡ್ ತೂಕದ ಗುಂಡನ್ನು ೬೦ ಫೂಟ್ ದೂರ ಎಸೆಯುವುದು, ಮಾನವನಿಗೆ ಅಸಾಧ್ಯವಾದುದು ಎಂಬ ಕಲ್ಪನೆ ಇದ್ದ ಕಾಲದಲ್ಲೇ ಅಮೇರಿಕಾದ ‘‘ಪ್ಯಾರಿ ಓಬ್ರೆöÊನ್’’ ಮೇಲ್ಬೋರ್ನ್ ಒಲಂಪಿಕ್ಸ್ನಲ್ಲಿ ೬೦ ಫೂಟ್‌ಗಿಂತ ಹೆಚ್ಚು ದೂರ ಎಸೆದು ಎಲ್ಲರ ಕಲ್ಪನೆಯನ್ನು ಸುಳ್ಳು ಮಾಡಿದ. ಈ ವಿಧಾನಕ್ಕೆ ಓಬ್ರೆöÊನ್ ವಿಧಾನವೆನ್ನುತ್ತಾರೆ. ಈ ವಿಧಾನ ಬಳಸಿಕೊಂಡು ಟೋಕಿಯೋ ಒಲಂಪಿಕ್ಸ್ನಲ್ಲಿ ಶಾಲಾ ಬಾಲಕ ಡಲಾಸಲಿಂಗ್ ೬೦ ಅಡಿ ೨೨ ಇಂಚು ದೂರ ಎಸೆದು ಚಿನ್ನದ ಪದಕವನ್ನು ಗಳಿಸಿದ. ಈ ಸ್ಪರ್ಧಾತ್ಮಕ ಯುಗದಲ್ಲಿ ಎಸೆಯುವ ದೂರ ಹೆಚ್ಚುತ್ತಲೇ ಇದೆ. ಭಾರÀ ಎತ್ತುವುದರಲ್ಲೂ, ಸಾಧನೆಗಳು; ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಬೆಳೆಯುತ್ತಲೇ ಇದೆ. ಗುಂಡು ಎಸೆತ, ಚಕ್ರ ಎಸೆತ, ಭಾರ ಎತ್ತುವ ಸ್ಪರ್ಧೆಗಳಲ್ಲಿ ನಮ್ಮ ಕೊಡಗಿನ ಯುವಕ ಮಣಿಕಂಠ ಪಿ. ಎಂ. ಉತ್ತಮ ಸಾಧನೆಗಳನ್ನೇ ಮಾಡಿ ಸಾಧನೆಗಳ ಸಾಹಸಿಯಾಗಿದ್ದಾರೆ.

ಬಾಲ್ಯ ಹಾಗೂ ಕೌಟುಂಬಿಕ ಹಿನ್ನಲೆ: ಪ್ರಾಥಮಿಕ ಶಾಲಾ ಅವಧಿಯಲ್ಲೇ ಕ್ರೀಡಾಸಕ್ತಿಯನ್ನೂ ಬೆಳೆಸಿಕೊಂಡ ಮಣಿಕಂಠ ಅವರು ಒಂದರಿAದ ನಾಲ್ಕನೇ ತರಗತಿಯ ಶಿಕ್ಷಣವನ್ನು ಎಂ.ಕೆ.ಎಸ್.ಎಲ್.ವಿ. ಶಾಲೆ ಕೊಣನೂರು ಇಲ್ಲಿ ಪಡೆದರು, ಐದರಿಂದ ಏಳನೇ ತರಗತಿಯ ಶಿಕ್ಷಣವನ್ನು ಜ್ಞಾನ ವಿಕಾಸ ಹೈಯರ್ ಪ್ರೆöÊಮರಿ ಶಾಲೆ ಸೋಮವಾರಪೇಟೆಯಲ್ಲಿ ಪಡೆದರು, ಪ್ರೌಢ ಶಾಲಾ ಶಿಕ್ಷಣವನ್ನು ಸೆಂಟ್ ಜೋಸೆಫ್ಸ್ ಶಾಲೆಯಲ್ಲಿ ಪಡೆದರು. ಇಲ್ಲಿ ಅವರಿಗೆ ಜಯರಾಮ ಎಂಬ ದೈಹಿಕ ಶಿಕ್ಷಕ, ಕ್ರೀಡಾಸಕ್ತಿಗೆ ಪ್ರೋತ್ಸಾಹಿಸಿ ತರಬೇತಿಯನ್ನು ನೀಡಿದರು. ಮಣಿಕಂಠ ಅವರು ೨೮.೧೦.೨೦೦೦ ರಂದು ಜನಿಸಿ ದರು. ಇವರ ತಂದೆ ಮಂಜುನಾಥ ಪಿ.ಎಲ್., ತಾಯಿ ಸುನಿತಾ ಕೆ. ಜೆ., ತಂದೆ-ತಾಯಿ, ಗೆಳೆಯರ ಪ್ರೋತ್ಸಾಹ ಇವರ ಕ್ರೀಡಾ ಸಾಧನೆ ಗಳಿಗೆ ಪ್ರೋತ್ಸಾಹ ನೀಡಿತು.

ಕ್ರೀಡಾ ಸಾಧನಾ ಮೈಲಿಗಲ್ಲುಗಳು : ೨೦೧೫ರಲ್ಲಿ ಜಿಲ್ಲಾ ಮಟ್ಟದ ಕ್ರೀಡಾ ಕೂಟವು ಕೊಡಗಿನ ನಾಪೋಕ್ಲಿನಲ್ಲಿ ನಡೆದಾಗ ಗುಂಡು ಎಸೆತದಲ್ಲಿ ಬೆಳ್ಳಿಪದಕ, ಚಕ್ರ ಎಸೆತದಲ್ಲಿ ಕಂಚಿನ ಪದಕ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಅನಿವಾರ್ಯ ಕಾರಣಗಳಿಂದ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಆಗಿರಲಿಲ್ಲ. ಪ್ರೌಢಶಾಲಾ ಶಿಕ್ಷಣದ ನಂತರದಲ್ಲಿ ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟಿçಕಲ್ ಡಿಪ್ಲೊಮಾಕ್ಕೆ ಸೇರಿಕೊಂಡ ಮಣಿಕಂಠ ಅವರಿಗೆ ಮನು ಕೆ.ಪಿ. ಹಾಗೂ ಪ್ರಸಾದ್ ಸಾಲಿಯಾನ್ ಎಂಬ ತರಬೇತುದಾರರು ಹಾಗೂ ಉದಯ ಕೆ.ವಿ. ಎಂಬವರು ಗುಂಡು ಎಸೆತ, ಬಾರ ಎತ್ತುವುದು ಹಾಗೂ ಚಕ್ರ ಎಸೆತದ ಸ್ಪರ್ಧೆಗಳಿಗೆ ತರಬೇತಿಯನ್ನು ಸಬಲ ರೀತಿಯಲ್ಲಿ ನೀಡಿ ತಯಾರು ಗೊಳಿಸಿದರು.

ಬೆಂಗಳೂರಿನಲ್ಲಿ ೨೦೧೮ರಲ್ಲಿ ನಡೆದ ಆಚಾರ್ಯ ಇನ್‌ಸ್ಟೂö್ಯಟ್ ಆಫ್ ಟೆಕ್ನಾಲಜಿ ಅವರು ನಡೆಸಿದ ಕ್ರೀಡಾಕೂಟದಲ್ಲಿ (ರಾಜ್ಯಮಟ್ಟದ) ಚಕ್ರ ಎಸೆತದಲ್ಲಿ ಕಂಚಿನ ಪದಕ ಗಳಿಸಿದರು. ಹಾಗೇ ಮೂರನೇ ವರ್ಷದ ಡಿಪ್ಲೊಮಾದಲ್ಲಿ ಕುಶಾಲನಗರ ಪಾಲಿಟೆಕ್ನಿಕ್ ಕಾಲೇಜ್‌ನ್ನು ಪ್ರತಿನಿಧಿಸಿ, ಅಂತರ ಪಾಲಿಟೆಕ್ನಿಕ್ ಕಾಲೇಜು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾರದ ಗುಂಡು ಎಸೆತದಲ್ಲಿ ಚಿನ್ನದ ಪದಕ ಹಾಗೂ ಚಕ್ರ ಎಸೆತದಲ್ಲಿ ಕಂಚಿನ ಪದಕ ಗಳಿಸಿದರು. ಇದು ಶ್ರೀಮತಿ ಎಲ್. ವಿ. ಪಾಲಿಟೆಕ್ನಿಕ್ ಹಾಸನದಲ್ಲಿ ನಡೆದ ಸ್ಪೋರ್ಟ್ಸ್ ಮೀಟ್ ಆಗಿತ್ತು.

ಆಲ್ ಇಂಡಿಯಾ ಸೌಥ್‌ಝೋನ್ ಪಾಲಿಟೆಕ್ನಿಕ್ ಕಾಲೇಜ್ ಅಥ್ಲೆಟಿಕ್‌ಮಿಟ್ ೨೦೧೯ರಲ್ಲಿ ನಡೆದಾಗ ಹೊಸ ದಾಖಲೆಯೊಂದನ್ನು ಗುಂಡು ಎಸೆತದಲ್ಲಿ (೧೨.೩೩ ಮೀಟರ್) ನಿರ್ಮಿಸಿ ಚಿನ್ನದ ಪದಕ ಗಳಿಸಿದರು.

ನಂತರದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಸೇರಿ (೨೦೧೯ ರಲ್ಲಿ) ಅಲ್ಲಿ ಭಾರ ಎತ್ತುವುದರ ಸ್ಪರ್ಧೆಯಲ್ಲಿ ತರಬೇತಿ ಪಡೆದು, ಅಂತರಕಾಲೇಜು ವಿಟಿಯು ವೈಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನಗಳಿಸಿ ಚಿನ್ನದ ಪದಕ ಗಳಿಸಿದರು. ಹಾಗೇ ಎರಡು ಬೆಳ್ಳಿ ಪದಕಗಳನ್ನು ಭಾರದ ಗುಂಡು ಎಸೆÀತದಲ್ಲಿ ಹಾಗೂ ಚಕ್ರ ಎಸೆತದಲ್ಲಿ ೨೨ನೇ ವಿಟಿಯು ಕಾಲೇಜು ಅಥ್ಲೆಟಿಕ್ ಮೀಟ್ ಸ್ಪರ್ಧೆ-೨೦೧೯ರಲ್ಲಿ ನಡೆದಾಗ, ಪವರ್ ಲಿಫ್ಟಿಂಗ್‌ನಲ್ಲಿ ವಿಟಿಯು ಸ್ಟೇಟ್‌ಲೆವೆಲ್ ಸ್ಪೋರ್ಟ್ಸ್ ಮೀಟ್‌ನಲ್ಲಿ ಗಳಿಸಿದರು. ಇಲ್ಲಿ ತರಬೇತಿ ನೀಡಿದ ತರಬೇತುದಾರರು ಗಂಗಾಧರ ಜಿ. ಎಸ್. ಅವರು.

೨೦೨೦ರಲ್ಲಿ ಕೊವಿಡ್-೧೯ ಕಾರಣದಿಂದ ಎಎಫ್‌ಐ ಕರೆದಂತಹ ರಾಜ್ಯ ಮಟ್ಟದ ಅಥ್ಲೆಟಿಕ್ ಮೀಟ್‌ನಲ್ಲಿ (ಅಂಡರ್-೧೯) ಭಾಗವಹಿಸಲು ಆಗಲಿಲ್ಲ.

೨೦೨೨ರಲ್ಲಿ ವಿಟಿಯು ಇಂಟರ್ ಕಾಲೇಜ್ ಸ್ಟೇಟ್‌ಲೆವೆಲ್ ಮೀಟ್‌ನಲ್ಲಿ ಕಂಚಿನ ಪದಕ ಗಳಿಸಿದರು.

೨೦೨೨ರ ವೀಟಿಯು ಮೀಟ್‌ನಲ್ಲಿ ೨೨ ವರ್ಷದ ಹಳೇ ದಾಖಲೆಯನ್ನು ಭಾರದ ಗುಂಡು ಎಸೆತದಲ್ಲಿ ೧೩-೨೮ನ್ನು ೧೩.೫೧ ಮೀಟರ್ ದೂರ ಎಸೆದು ದಾಖಲೆ ನಿರ್ಮಿಸಿದರು. ಇದು ವಿಟಿಯು ಅಂತರ ಕಾಲೇಜು ೨೩ರ ಅಥ್ಲೆಟಿಕ್ ಮೀಟ್ ಆಗಿತ್ತು. ಇದೀಗ ಪೋಸ್ಟ್ ಗ್ರಾಜುಯೇಷನ್‌ಗೆ ಸೇರುವ ತಯಾರಿ ನಡೆಸುತ್ತಿದ್ದಾರೆ. ಇಲೆಕ್ಟಿçಕ್ ಇಂಜಿನಿಯರಿAಗ್‌ನಲ್ಲಿ ಗ್ರಾಜುಯೇಶನ್ ಮುಗಿಸಿದ್ದಾರೆ. ದಸರಾ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ, ತಾಲೂಕು ಮಟ್ಟದಲ್ಲಿ ಅನೇಕ ಪದಕಗಳನ್ನು ಗಳಿಸಿ, ಮೈಸೂರು ಡಿವಿಷನ್ ಕ್ರೀಡಾಕೂಟದಲ್ಲಿ ಚಕ್ರ ಎಸೆತದಲ್ಲಿ ಪದಕಗಳನ್ನು ಗಳಿಸಿದ್ದಾರೆ. ದಸರಾ ಸಿ. ಎಂ. ಕಪ್‌ಗೆ, ಮೈಸೂರು ಡಿವಿಷನ್‌ನಿಂದ ವೈಟ್‌ಲಿಫ್ಟಿಂಗ್‌ನಲ್ಲಿ ಆಯ್ಕೆಯಾಗಿದ್ದಾರೆ.

೧೦೯ ಕೆ. ಜಿ. ವೈಟಲಿಫ್ಟಿಂಗ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ದಸರಾ ಸಿ. ಎಂ. ಕಪ್ ಸ್ಪೋಟ್ಸ್ ಮೀಟ್‌ನಲ್ಲಿ ಕಂಚಿನ ಪದಕವನ್ನು ಗಳಿಸಿಕೊಂಡಿ ದ್ದಾರೆ. ಕಬಡ್ಡಿ ಹ್ಯಾಂಡ್‌ಬಾಲ್, ವಾಲಿಬಾಲ್, ಬಾಸ್ಕೇಟ್‌ಬಾಲ್ ಆಟಗಳಲ್ಲೂ ಪ್ರಾವೀಣ್ಯತೆಗಳಿಸಿ, ಉತ್ತಮ ಕ್ರೀಡಾಪಟುವಾದ ಇವರಿಗೆ ರೈಲ್ವೇಸ್‌ಗೆ ಸೇರಿ ತರಬೇತಿ ಪಡೆದು ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಸ್ಪರ್ಧಿಸಬೇಕೆನ್ನುವ ಗುರಿ, ಸಾಧನೆಯ ಛಲವಿದೆ. ಇವರ ಕ್ರೀಡಾಸಾಧನೆ ಉಜ್ವಲವಾಗಿ, ಬೆಳಗಲಿ ಎಂದು ಹಾರೈಸೋಣ.

-ಹರೀಶ್ ಸರಳಾಯ,

ಮಡಿಕೇರಿ.

ಮೊ:೯೭೩೧೮೧೦೨೫೦