ಮಡಿಕೇರಿ, ನ. ೧೬: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ೬೯ನೇ ಅಖಿಲ ಭಾರತ ಸಪ್ತಾಹ ಅಂಗವಾಗಿ ಜಿಲ್ಲೆಯ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ನಗರದ ರಾಜ್‌ದರ್ಶನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿ, ಹಿರಿಯರ ಚಿಂತನೆಯಲ್ಲಿ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದೂರದೃಷ್ಟಿಯನ್ನಿಟ್ಟು ಸಹಕಾರ ಸಂಘಗಳನ್ನು ಸ್ವಾತಂತ್ರö್ಯ ಪೂರ್ವದಲ್ಲಿಯೇ ಸ್ಥಾಪಿಸಲಾಯಿತು. ಯಾವುದೇ ವ್ಯವಸ್ಥೆ ಇಲ್ಲದೇ, ಆರ್ಥಿಕ ಸಮಸ್ಯೆಯ ನಡುವೆ ಆರಂಭಗೊAಡ ಸಹಕಾರ ಸಂಘಗಳು ಇಂದು ಲಾಭದಾಯಕ ಹಾಗೂ ರೈತರಿಗೆ ಸೇರಿದಂತೆ ಎಲ್ಲಾ ವರ್ಗಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಹಕಾರ ಸಂಘಗಳಲ್ಲಿ ರಾಜಕೀಯ, ಜಾತಿ, ಮತ ಎಂಬ ಭೇದಭಾವಗಳು ನುಸುಳದೆ ಜನಪರವಾಗಿ ಕೆಲಸ ಮಾಡಬೇಕು. ಸಾಲ ಪಡೆದವರು ಕೂಡ ಪ್ರಾಮಾಣಿಕವಾಗಿ ಸಕಾಲದಲ್ಲಿ ಹಣ ಪಾವತಿಸಿ ಬ್ಯಾಂಕ್‌ನ ಅಭ್ಯುದಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಡಿ.ಮಂಜುನಾಥ್ ಮಾತನಾಡಿ, ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಹಿರಿಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ. ಗ್ರಾಮದಿಂದ ರಾಜ್ಯ ಮಟ್ಟದ

ತನಕ ಕೆಲಸ ಮಾಡುತ್ತಿರುವ

ಸಹಕಾರ ಸಂಘಗಳು ಇನ್ನೂ ಪರಿಣಾಮಕಾರಿಯಾಗಿ ಜನರಿಗೆ ತಲುಪಿಲ್ಲ. ಯುವಜನತೆ ಸಹಕಾರ ರಂಗಕ್ಕೆ ಬರುವ ನಿಟ್ಟಿನಲ್ಲಿ ಕೆಲಸವಾಗಬೇಕಾಗಿದೆ ಎಂದು ಸಲಹೆ ನೀಡಿದ ಅವರು,

(ಮೊದಲ ಪುಟದಿಂದ) ವೃತ್ತಿಪರತೆ ಮೈಗೂಡಿಸಿಕೊಂಡರೆ ಯಶಸ್ಸು ಖಚಿತ. ಬೇಜವಾಬ್ದಾರಿ ತೋರಿದರೆ ಸಂಸ್ಥೆ ಆರ್ಥಿಕವಾಗಿ ಹಿನ್ನಡೆ ಅನುಭವಿಸಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಲಾಭದಾಯಕ ಸಂಸ್ಥೆ ಕಟ್ಟುವ ಜೊತೆಗೆ ನಮ್ಮ ಜೊತೆಗಾರರನ್ನು ಬೆಳೆಸುವುದು ನಮ್ಮ ಗುರಿಯಾಗಿರಬೇಕು. ‘ಕ್ಯಾಂಪ್ಕೊ’, ‘ಅಮುಲ್’ ನಂತಹ ಸಂಸ್ಥೆಗಳು ಸಹಕಾರಿ ಸಂಘಗಳ ಮೂಲಕ ನಿರ್ಮಾಣವಾಗಿ ಇಂದು ಸಾಮೂಹಿಕವಾಗಿ ಬೆಳವಣಿಗೆ ಸಾಧಿಸಿರುವುದು ಎಲ್ಲರಿಗೂ ಮಾದರಿ. ಅದರೊಂದಿಗೆ ಸಹಕಾರಿ ಸಂಘಗಳು ಹಲವು ಉದ್ಯಮವನ್ನು ಯಶಸ್ವಿಯಾಗಿ ನಡೆಸಲು ವೃತ್ತಿಪರತೆ ಕಾರಣವಾಗಿದೆ ಎಂದು ವಿವರಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಶಿಫಾರಸ್ಸು ಬೇಕಾಗಿದೆ. ಇದರಿಂದ ನಿಸ್ವಾರ್ಥ ಸೇವೆ ಸಲ್ಲಿಸಿದವರು ಕಡೆಗಣನೆಗೆ ಒಳಗಾಗುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಹಕಾರಿಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಇದು ಕೊಡಗು ಜಿಲ್ಲೆಯಲ್ಲಿ ಮಾತ್ರ ನಡೆಯುತ್ತಿದೆ ಎಂಬುದು ಹೆಮ್ಮೆಯ ವಿಚಾರ. ಹಲವರ ಪರಿಶ್ರಮದ ಪರಿಣಾಮ ಇಂದು ಸಹಕಾರ ರಂಗ ಯಾರು ಮುಟ್ಟಲಾಗದ ಎತ್ತರಕ್ಕೆ ಬೆಳೆದಿದೆ. ಈ ಹಿನ್ನೆಲೆ ಪ್ರಶಸ್ತಿ ನೀಡುವ ಮೂಲಕ ಅವರಿಗೆ ಸಿಗಬೇಕಾದ ಗೌರವ ಸೂಚಿಸುತ್ತಿದ್ದೇವೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ

ಸಹಕಾರ ಸಪ್ತಾಹ ಅಂಗವಾಗಿ ಕೊಡಮಾಡುವ ೩ ವಿಭಾಗದ ವಾರ್ಷಿಕ ಪ್ರಶಸ್ತಿಯನ್ನು ೫ ಸಹಕಾರಿಗಳಿಗೆ ಪ್ರದಾನ ಮಾಡಲಾಯಿತು. ಬಲ್ಲಮಾವಟಿಯ ನಿವಾಸಿ ಪ್ರಸ್ತುತ ಸಹಕಾರ ಯೂನಿಯನ್‌ನ ಅಧ್ಯಕ್ಷರಾಗಿರುವ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರಿಗೆ ‘ಕೊಡಗು ಸಹಕಾರ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಶ್ರೇಷ್ಠ ಸಹಕಾರಿಗಳು' ಪ್ರಶಸ್ತಿಯನ್ನು ನಾಪೋಕ್ಲಿನ ಬೊಟ್ಟೋಳಂಡ ಡಿ. ಬಿದ್ದಯ್ಯ, ಮಾಯಮುಡಿಯ ಕೊಂಗAಡ ಎಂ. ಗಣಪತಿ, ಹಂಡ್ಲಿಯ ಕೆ.ವಿ.ಮಂಜುನಾಥ್, ‘ಶ್ರೇಷ್ಠ ಮಹಿಳಾ ಸಹಕಾರಿ' ಪ್ರಶಸ್ತಿಯನ್ನು ಕುಶಾಲನಗರದ ಕಮಲ ಕರಿಯಪ್ಪ ಅವರುಗಳಿಗೆ ನೀಡಲಾಯಿತು. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ೩ನೇ ರ‍್ಯಾಂಕ್ ಪಡೆದ ಭವ್ಯ, ೪ನೇ ರ‍್ಯಾಂಕ್ ಪಡೆದ ನಯನ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಟ್ಟಡ ಸಿ. ಮನುರಾಮಚಂದ್ರ, ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳ ನಿರ್ದೇಶಕ ಬಿ.ಎ. ರಮೇಶ್ ಚಂಗಪ್ಪ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರುಗಳಾದ ಬಿ.ಡಿ. ಮಂಜುನಾಥ್, ಕನ್ನಂಡ ಎ. ಸಂಪತ್, ಹೆಚ್.ಎಂ. ರಮೇಶ್, ಜಲಜಾ ಶೇಖರ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರುಗಳಾದ ಎಂ. ಪ್ರೇಮಾ ಸೋಮಯ್ಯ, ಪಿ.ಸಿ. ಅಚ್ಚಯ್ಯ, ಕೊಡಪಾಲು ಎಸ್. ಗಣಪತಿ, ಕೊಡೀರ ಎಂ. ತಮ್ಮಯ್ಯ, ಪೆಮ್ಮಂಡ ವಿ. ಭರತ್, ಕೊಂಗAಡ ಪಿ. ವಾಸು ಮುದ್ದಯ್ಯ, ವಾಂಚೀರ ಅಜಯ್ ಕುಮಾರ್, ನಾಪಂಡ ಎಂ. ಉಮೇಶ್ ಉತ್ತಪ್ಪ, ಪಿ.ಬಿ.ಯತೀಶ್, ಸಿ.ಎಸ್. ಕೃಷ್ಣ ಗಣಪತಿ, ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್. ರಮೇಶ್, ಮಡಿಕೇರಿ ವಿಭಾಗದ ನಿಬಂಧಕ ಎಂ.ಇ. ಮೋಹನ್, ಮಡಿಕೇರಿಯ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ನಿವೃತ್ತ ಪ್ರಾಂಶುಪಾಲೆ ಎಂ.ಎA. ಶ್ಯಾಮಲಾ ಸೇರಿದಂತೆ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

ವ್ಯವಸ್ಥಾಪಕಿ ಆರ್. ಮಂಜುಳಾ ಪ್ರಾರ್ಥಿಸಿ, ನಿರ್ದೇಶಕ ನಂದಿನೆರವAಡ ರವಿ ಬಸಪ್ಪ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು.