ಮಡಿಕೇರಿ, ನ. ೧೬: ಕರ್ನಾಟಕ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ೨ ಚಿನ್ನ ಹಾಗೂ ಒಂದು ಕಂಚು ಪದಕ ಗಳಿಸುವ ಮೂಲಕ ಕಡಗದಾಳು ನಿವಾಸಿ ಕೆಚ್ಚೆಟ್ಟಿರ ರಶ್ಮಿ ದೇವಯ್ಯ (ತಾಮನೆ ಬೊಳ್ಳಂಡ) ಅವರು ಸಾಧನೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಓವಲ್ ಮೈದಾನದಲ್ಲಿ ತಾ. ೧೨ ಹಾಗೂ ತಾ. ೧೩ ರಂದು ನಡೆದ ಕ್ರೀಡಾಕೂಟದಲ್ಲಿ ಡಿಸ್‌ಕಸ್ ಥ್ರೋನಲ್ಲಿ ಹಾಗೂ ಶಾಟ್‌ಪುಟ್‌ನಲ್ಲಿ ಚಿನ್ನ ಹಾಗೂ ಜಾವಲಿನ್ ಥ್ರೋನಲ್ಲಿ ಕಂಚಿನ ಪದಕ ಪಡೆದುಕೊಂಡರು. ಮುಂದಿನ ಫೆಬ್ರವರಿಯಲ್ಲಿ ಕೋಲ್ಕತ್ತಾದಲ್ಲಿ ನಡೆಯಲಿರುವ ರಾಷ್ಟಿçÃಯ ಮಟ್ಟದ ಕ್ರೀಡಾಕೂಟಕ್ಕೆ ಈ ಮೂಲಕ ಆಯ್ಕೆಯಾಗಿದ್ದಾರೆ. ಇವರು ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಅಥ್ಲೆಟಿಕ್ಸ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.