ಮಡಿಕೇರಿ, ನ. ೧೬: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಡಿಕೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ತಾ. ೧೮ ರಿಂದ ೨೫ ರವರೆಗೆ ನಗರದ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ೨೦೨೨-೨೩ನೇ ಸಾಲಿನ ಮೈಸೂರು ವಿಭಾಗ ಮತ್ತು ರಾಜ್ಯಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಬಾಲಕ - ಬಾಲಕಿಯರ ಹಾಕಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಪಿ.ಕೆ. ನಳಿನಿ ಹಾಗೂ ಮಡಿಕೇರಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀನಿವಾಸ್ ಇವರುಗಳು ಪಂದ್ಯಾವಳಿ ಬಗ್ಗೆ ಮಾಹಿತಿ ನೀಡಿದರು. ತಾ. ೧೮ ಮತ್ತು ೧೯ ರಂದು ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಗಳು ನಾಕೌಟ್ ಮಾದರಿಯಲ್ಲಿ ನಡೆಯಲಿವೆ. ಮೈಸೂರು ವಿಭಾಗದ ೮ ಜಿಲ್ಲೆಗಳಿಂದ ತಲಾ ೪ ವಿಭಾಗಗಳಲ್ಲಿ ಪ್ರಾಥಮಿಕ, ಪ್ರೌಢ ಬಾಲಕ ಬಾಲಕಿಯರನ್ನು ಒಳಗೊಂಡ ೩೨ ತಂಡಗಳು ಭಾಗವಹಿಸಲಿವೆ.
(ಮೊದಲ ಪುಟದಿಂದ) ೩೨ ತಂಡಗಳ ೫೧೨ ಕ್ರೀಡಾಪಟುಗಳು, ಪ್ರತಿ ತಂಡಕ್ಕೆ ಓರ್ವ ತರಬೇತುದಾರ, ಓರ್ವ ವ್ಯವಸ್ಥಾಪಕರಂತೆ ೬೪ ಶಿಕ್ಷಕರು ಭಾಗವಹಿಸಲಿದ್ದಾರೆ. ವಿಜೇತ ೪ ವಿಭಾಗದ ತಂಡಗಳಿಗೆ ಉಪ ವಿಜೇತ ೪ ವಿಭಾಗದ ತಂಡಗಳಿಗೆ ಟ್ರೋಫಿ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ತಾ. ೨೧ ರಿಂದ ೨೫ರವರೆಗೆ ರಾಜ್ಯಮಟ್ಟದ ಪಂದ್ಯಾಟಗಳು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಪ್ರಾಥಮಿಕ ಶಾಲಾ ಬಾಲಕರ ೪ ತಂಡಕ್ಕೆ ೬ ಪಂದ್ಯ, ಪ್ರಾಥಮಿಕ ಶಾಲಾ ಬಾಲಕಿಯರ ೪ ತಂಡಕ್ಕೆ ೬ ಪಂದ್ಯ, ಪ್ರೌಢಶಾಲಾ ಬಾಲಕರ ೬ ತಂಡಕ್ಕೆ ೧೫ ಪಂದ್ಯ, ಪ್ರೌಢಶಾಲಾ ಬಾಲಕಿಯರ ೫ ತಂಡಕ್ಕೆ ೧೦ ಪಂದ್ಯ ಸೇರಿ ಒಟ್ಟು ೩೭ ಪಂದ್ಯಗಳು ನಡೆಯಲಿವೆ.
ರಾಜ್ಯದ ೪ ವಿಭಾಗದಿಂದ ಪ್ರಾಥಮಿಕ, ಪ್ರೌಢ ಬಾಲಕ - ಬಾಲಕಿಯರ ತಲಾ ೪ ವಿಭಾಗದಂತೆ ಒಟ್ಟು ೧೬ ತಂಡಗಳು ಹಾಗೂ ಕೂಡಿಗೆ ಕ್ರೀಡಾಶಾಲೆಯ ಎರಡು ಮತ್ತು ಇಂಡಿಯನ್ ಹೈಸ್ಕೂಲ್ ಬೆಂಗಳೂರಿನ ೧ ತಂಡ ಸೇರಿ ಒಟ್ಟು ೧೯ ತಂಡಗಳು ಭಾಗವಹಿಸಲಿವೆ. ೧೯ ತಂಡಗಳ ತಲಾ ೧೬ ಕ್ರೀಡಾಪಟುಗಳಂತೆ ೩೦೪ ಕ್ರೀಡಾಪಟುಗಳು ಮತ್ತು ೧೯ ತಂಡಗಳಿಗೆ ೧ ತರಬೇತಿದಾರರು ಮತ್ತು ೧ ವ್ಯವಸ್ಥಾಪಕರಂತೆ ೩೮ ಶಿಕ್ಷಕರು ಭಾಗವಹಿಸಲಿದ್ದಾರೆ.
ವಿಜೇತ ೪ ವಿಭಾಗದ ತಂಡಗಳಿಗೆ ಮತ್ತು ಉಪ ವಿಜೇತ ೪ ವಿಭಾಗದ ತಂಡಗಳಿಗೆ ಟ್ರೋಫಿ ಮತ್ತು ವೈಯಕ್ತಿಕ ಪ್ರಶಸ್ತಿ ನೀಡುವುದು, ತಾ. ೧೮ ರಂದು ಮಧ್ಯಾಹ್ನ ೩.೩೦ ಕ್ಕೆ ಮೈಸೂರು ವಿಭಾಗ ಮಟ್ಟದ ಹಾಗೂ ತಾ. ೨೧ ರಂದು ಮಧ್ಯಾಹ್ನ ೩.೩೦ಕ್ಕೆ ರಾಜ್ಯ ಮಟ್ಟದ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಲಂಪಿಯನ್ ಹಾಗೂ ಅಂರ್ರಾಷ್ಟಿçÃಯ ಹಾಕಿ ಕ್ರೀಡಾಪಟು ಎಸ್.ವಿ. ಸುನಿಲ್ ಹಾಗೂ ಅಂರ್ರಾಷ್ಟಿçÃಯ ಹಾಕಿ ಕ್ರೀಡಾಪಟು ವಿ.ಎಸ್. ವಿನಯ್ ಅವರುಗಳು ಅತಿಥಿಗಳಾಗಿ ಆಗಮಿಸಲಿದ್ದಾರೆ. ಆಗಮಿಸುವ ಕ್ರೀಡಾಪಟುಗಳಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಬಾಲಕರಿಗೂ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮಡಿಕೇರಿಯಲ್ಲಿ ಬಾಲಕಿಯರಿಗೂ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ.
ಪಂದ್ಯಾಟದ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಅಪ್ಪಚ್ಚುರಂಜನ್ ವಹಿಸಲಿದ್ದಾರೆ. ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಬಿ.ಸಿ. ಸತೀಶ, ಮತ್ತಿತರರು ಭಾಗವಹಿಸಲಿದ್ದು, ಧ್ವಜಾರೋಹಣವನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದಾರೆ ಎಂದು ಅವರುಗಳು ತಿಳಿಸಿದರು. ಗೋಷ್ಠಿಯಲ್ಲಿ ಸ.ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.