ಸೋಮವಾರಪೇಟೆ, ನ. ೧೬: ಅನುಭವ ಮಂಟಪ ಮಾದರಿ ಯಲ್ಲಿಯೇ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಸೋಮವಾರಪೇಟೆಯಲ್ಲಿ ತರಬೇತಿ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು ಎಂದು ವೇದಿಕೆಯ ರಾಷ್ಟಿçÃಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಹೇಳಿದರು.
ತಾಲೂಕಿನ ಕೊಡ್ಲಿಪೇಟೆ ಮಹಿಳಾ ಸಮಾಜದ ಆವರಣದಲ್ಲಿ ನಡೆದ ಹೋಬಳಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಂದು ವೇದಿಕೆಯ ರಾಷ್ಟಿçÃಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಹೇಳಿದರು.
ತಾಲೂಕಿನ ಕೊಡ್ಲಿಪೇಟೆ ಮಹಿಳಾ ಸಮಾಜದ ಆವರಣದಲ್ಲಿ ನಡೆದ ಹೋಬಳಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಕ್ತಿ ಪ್ರದರ್ಶನದಿಂದ ಎಲ್ಲವನ್ನೂ ಗಳಿಸಲು ಸಾಧ್ಯವಿದೆ ಎಂದರು.
ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಂಘಟನೆಗಳು ಉತ್ಸಾಹದಿಂದ ಕೆಲಸ ಮಾಡಿದರೆ ಸಮುದಾಯದ ಬೆಳವಣಿಗೆ ಸಾಧ್ಯ. ೨೦೦ ವÀರ್ಷಗಳು ಹಾಲೇರಿ ಅರಸರು ಕೊಡಗನ್ನು ಆಳಿದ್ದಾರೆ. ಆದರೆ ರಾಜರ ಅರಮನೆ, ಗದ್ದುಗೆ, ಕೋಟೆ ಆವರಣ ಇವೆಲ್ಲವೂ ನಶಿಸುತ್ತಿವೆ. ಇವುಗಳನ್ನು ಉಳಿಸಬೇಕಾಗಿದೆ ಎಂದರು.
ಕೊಡಗನ್ನು ಆಳಿದ ದೊಡ್ಡವೀರರಾಜರ ಪ್ರತಿಮೆ ನಿರ್ಮಾಣ ಇದುವರೆಗೂ ಸಾಧ್ಯವಾಗಿಲ್ಲ ಎಂದು ವಿಷಾಧಿಸಿದ ಅವರು, ಈ ಬಗ್ಗೆ ಸಂಘಟನೆಯ ಮೂಲಕ ಸಮಾಜ ಬಾಂಧವರು ಸರ್ಕಾರದ ಗಮನ ಸೆಳೆಯಬೇಕೆಂದು ಅಭಿಪ್ರಾಯಿಸಿದರು.
ವೇದಿಕೆಯ ಗೌರವಾಧ್ಯಕ್ಷ ಮನೆಹಳ್ಳಿ
(ಮೊದಲ ಪುಟದಿಂದ) ಮಠಾಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ ಅವರು ಹೋಬಳಿ ಘಟಕವನ್ನು ಉದ್ಘಾಟಿಸಿದರು. ಕಲ್ಲುಮಠದ ಮಹಾಂತ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಅವರುಗಳು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಎ.ಎಸ್.ಮಹೇಶ್, ತಾಲೂಕು ಅಧ್ಯಕ್ಷ ಜಯರಾಜ್, ಹೋಬಳಿ ಘಟಕದ ಗೌರವಾಧ್ಯಕ್ಷ ಕೆ.ಬಿ.ನಾಗರಾಜ್ ಮತ್ತಿತರರು ಇದ್ದರು. ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷರಾದ ಪ್ರಸನ್ನ ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.