ವೀರಾಜಪೇಟೆ, ನ. ೧೬: ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿರುವ ಶ್ರೀ ಅಯ್ಯಪ್ಪ ಭಗವತಿ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ‘ಮುಪ್ಪಟ್ಟು ಶನಿವಾರ’ದ ವಿಶೇಷ ಪೂಜಾ ಕಾರ್ಯಕ್ರಮವು ತಾ. ೧೯ ರಂದು ನಡೆಯಲಿದೆ.

ಅಂದು ಬೆಳಿಗ್ಗೆ ೯.೩೦ ಗಂಟೆಗೆ ದೇವರಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆದ ಬಳಿಕ ೧೨ ಗಂಟೆಗೆ ಮಹಾಪೂಜೆ ಪ್ರಸಾದ ವಿನಿಯೋಗ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅಮ್ಮಣಕುಟ್ಟಂಡ ಜಿ. ಬೋಪಣ್ಣ ತಿಳಿಸಿದ್ದಾರೆ.