ಮಡಿಕೇರಿ, ನ. ೧೬: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿನ ವಿವಿಧ ಕೋರ್ಸ್ಗಳಾದ ಬ್ಯಾಚುಲರ್ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್, ಸ್ನಾತಕ ಪದವಿ, ಮಾಸ್ಟರ್ ಆಫ್ ಪರ್‌ಫಾರ್ಮಿಂಗ್ ಆರ್ಟ್ಸ್, ಸ್ನಾತಕೋತ್ತರ ಪದವಿ, ಡಿಪ್ಲೊಮೋ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಕಾರ್ಯಭಾರಕ್ಕೆ ಅನುಗುಣವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಯುಜಿಸಿ ನಿಯಮಾವಳಿಗಳ ಅನ್ವಯ ಅರ್ಹತೆ ಹೊಂದಿರುವವರು (ನೃತ್ಯ, ಸಂಗೀತ ಮತ್ತು ನಾಟಕ ವಿಷಯಕ್ಕೆ ಸಂಬAಧಿಸಿದAತೆ ನೆಟ್/ಕೆ-ಸೆಟ್ ಉತ್ತೀರ್ಣರಾಗಿರುವವರು ಅಥವಾ ಕೋರ್ಸ್ ವರ್ಕ್ನೊಂದಿಗೆ ಪಿಹೆಚ್‌ಡಿ., ಪದವಿ ಪಡೆದಿರುವವರು) ಅರ್ಹರಾಗಿರುತ್ತಾರೆ. ವಿಶ್ವವಿದ್ಯಾನಿಲಯದ ನಿಯಮಾನುಸಾರ ವೇತನ ನೀಡಲಾಗುವುದು. ಅಧಿಸೂಚನೆಯ ದಿನಾಂಕದಿAದ ೧೦ ದಿನಗಳೊಳಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಈ ಸಂಬAಧ ಹೆಚ್ಚಿನ ವಿವರಗಳನ್ನು ನಮ್ಮ ವಿಶ್ವವಿದ್ಯಾಲಯದ ಅಧೀಕೃತ ಜಾಲತಾಣ hಣಣಠಿs://musiಛಿuಟಿiveಡಿsiಣಥಿ.ಚಿಛಿ.iಟಿ ದಿಂದ ಪಡೆಯಬಹುದು.
ಅರ್ಜಿ ಫಾರಂ ಹಾಗೂ ಇನ್ನಿತರ ವಿವರಗಳನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳೊಂದಿಗೆ ಸಾಮಾನ್ಯ ವರ್ಗ ರೂ.೫೦೦ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-೧(ಪ್ರಮಾಣ ಪತ್ರದೊಂದಿಗೆ) ಅಭ್ಯರ್ಥಿಗಳು ರೂ.೨೫೦ ಗಳನ್ನು ವಿಶ್ವವಿದ್ಯಾಲಯವು ಮೈಸೂರಿನ ಕೃಷ್ಣಮೂರ್ತಿಪುರಂ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಣಕಾಸು ಅಧಿಕಾರಿ ಇವರ ಪದನಾಮವನ್ನು ಹೊಂದಿರುವ ಉಳಿತಾಯ ಖಾತೆ ಸಂಖ್ಯೆ: ೬೪೦೯೭೮೯೧೩೧೬ (ಐಎಫ್‌ಎಸ್‌ಸಿ ಕೋಡ್: SಃIಓ೦೦೪೦೦೫೬) ಕ್ಕೆ ಚಲನ್ ಮೂಲಕ ಅಥವಾ ಯಾವುದೇ ರಾಷ್ಟಿçÃಕೃತ ಬ್ಯಾಂಕ್‌ಗಳಿAದ ಹಣಕಾಸು ಅಧಿಕಾರಿಗಳು, ಕೆಎಸ್‌ಜಿಎಚ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇವರ ಹೆಸರಿನಲ್ಲಿ ಮೇಲಿನ ಬ್ಯಾಂಕ್‌ಗೆ ಸಂದಾಯವಾಗುವAತೆ ಡಿಡಿಯನ್ನು ಪಡೆದು ಲಗತ್ತಿಸಬಹುದು. ತಮ್ಮ ಎಲ್ಲಾ ಶೈಕ್ಷಣಿಕ ಅರ್ಹತೆ, ಅನುಭವದ ವಿವರಗಳು ಮತ್ತು ದೃಢೀಕೃತ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಕುಲಸಚಿವರು, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ೫೭೦೦೦೪. ಇವರಿಗೆ ಅರ್ಜಿಗಳನ್ನು ಕಳುಹಿಸುವಂತೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.