ಮುಳ್ಳೂರು: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಭಿನ್ನವಾಗಿ ಮಕ್ಕಳ ದಿನವನ್ನು ಆಚರಣೆ ಮಾಡಿದರು. ಶಾಲೆಯಲ್ಲಿ ಹಿಂದಿನAತೆ ವೇದಿಕೆ ಕಾರ್ಯಕ್ರಮದಲ್ಲಿ ಸ್ವಾಗತ, ನಿರೂಪಣೆ, ಭಾಷಣ, ವಂದ ನಾರ್ಪಣೆ, ವೇದಿಕೆ ಕಾರ್ಯಕ್ರಮ ದಿಂದ ಹೊರಬಂದ ಚಿಣ್ಣರು ಪರಿಸರ ಸಂಚಾರ ಕೈಗೊಂಡರು. ಗ್ರಾಮದ ಪರಿಸರ ದಲ್ಲಿರುವ ನದಿ, ಕೊಳ, ಬೆಟ್ಟಗುಡ್ಡ, ಕಾಡು, ಗದ್ದೆ, ತೋಟಗಳಿಗೆ ಸಂಚರಿಸಿ ಪರಿಸರ ಸೌಂದರ್ಯ ಸವಿದರು. ಇದರ ನಡುವೆ ವಿದ್ಯಾರ್ಥಿಗಳು ಚಿಕ್ಕಪುಟ್ಟ ಮರಗಳಿಗೆ ಹತ್ತಿ ಮರಕೋತಿ ಆಟ ಆಡಿದರು. ನಂತರ ಕುಂಟೆಬಿಲ್ಲೆ, ಚಿನ್ನಿದಾಂಡು, ಗೋಲಿ ಆಟ ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಬಾಲ್ಯದ ಆಟಗಳನ್ನು ಆಡಿ ಸಂಭ್ರಮಪಟ್ಟರು. ತದನಂತರ ಮಕ್ಕಳ ಛಾವಡಿಯಲ್ಲಿ ಕುಳಿತು ನೆಹರು ಅವರ ಬಾಲ್ಯದ ಜೀವನ, ವಿದ್ಯಾಭ್ಯಾಸ, ಸಾತಂತ್ರö್ಯದ ಹೋರಾಟದ ಹಾದಿ, ಆಡಳಿತ ವೈಖರಿ ಮೊದಲಾದವು ಗಳನ್ನು ಶಾಲೆಯ ಶಿಕ್ಷಕರೊಂದಿಗೆ ಚರ್ಚೆಗೋಷ್ಠಿ ರೂಪದಲ್ಲಿ ಅರಿತುಕೊಂಡರು. ಇದಾದ ನಂತರ ವಿದ್ಯಾರ್ಥಿ ಗಳು ಮನರಂಜನಾ ಚಟುವಟಿಕೆ ಯಲ್ಲಿ ತೊಡಗಿಸಿ ಕೊಂಡರು. ನೃತ್ಯ, ಹಾಡು ಮುಂತಾದ ಸಾಂಸ್ಕೃತಿಕ ಕಾರ್ಯ ಕ್ರಮಗಳ ಮೂಲಕ ಬೆಳಿಗ್ಗೆಯಿಂದ ಸಂಜೆವರೆಗೂ ಸಂಭ್ರಮದಿAದ ಆಚರಿಸಿದರು. ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಅವರ ಪರಿಕಲ್ಪನೆಯಲ್ಲಿ ಆಯೋಜಿಸಿದ ಹೊರ ಸಂಚಾರ ಮಕ್ಕಳ ದಿನಾಚರಣೆಯಲ್ಲಿ ಶಾಲೆಯ ಅತಿಥಿ ಶಿಕ್ಷಕಿ ಎಂ.ಆರ್. ನವ್ಯ ಮಕ್ಕಳ ಕಾರ್ಯಕ್ರಮ ನಡೆಸಿಕೊಟ್ಟರು.ಸಿದ್ದಾಪುರ: ನೆಲ್ಲಿಹುದಿಕೇರಿಯ ಗ್ರಾ.ಪಂ. ಕಚೇರಿ ಸಮೀಪದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸ ಲಾಯಿತು. ಕಾರ್ಯಕ್ರಮವನ್ನು ಗ್ರಾ.ಪಂ. ಸದಸ್ಯರುಗಳಾದ ಅಪ್ಸಲ್ ಹಾಗೂ ಹಮೀದ್ ಉದ್ಘಾಟಿಸಿದರು.
ನಂತರ ಮಕ್ಕಳಿಗೆ ಶಿಕ್ಷಣದ ಕುರಿತು ಪ್ರಶ್ನೆ-ಉತ್ತರ ಕಾರ್ಯಕ್ರಮ ಏರ್ಪಡಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆದವು. ಪೋಷಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಎ.ಕೆ ಹಕೀಂ, ಗ್ರಾ.ಪಂ. ಸದಸ್ಯರುಗಳಾದ ಕೋಯ, ಸಿಂದೂ, ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಇನ್ನಿತರರು ಹಾಜರಿದ್ದರು. ಅಂಗನವಾಡಿ ಕೇಂದ್ರದ ಸಹಾಯಕಿ ಫಾತಿಮಾ ಸೂರ ಪ್ರಾರ್ಥಿಸಿದರು. ಆಶಾ ಕಾರ್ಯಕರ್ತೆ ಬೇಬಿ ಸ್ವಾಗತಿಸಿ, ಫಿಲೋಮಿನ ವಂದಿಸಿದರು.ಶನಿವಾರಸAತೆ: ಪಟ್ಟಣದ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ನೇತೃತ್ವದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಾಂಶುಪಾಲ ಸಬಾಸ್ಟಿನ್ ಮೈಕಲ್ ಕಾರ್ಯಕ್ರಮ ಉದ್ಘಾಟಿಸಿದರು. ಫಾದರ್ ಥೋಮಸ್ ಮಾತನಾಡಿ, ಮಾಜಿ ಪ್ರಧಾನಿ ನೆಹರು ದೃಷ್ಟಿಯಲ್ಲಿ ಶಿಕ್ಷಣದ ಮಹತ್ವ ಎಂಬ ವಿಚಾರವಾಗಿ ತಿಳಿಸಿದರು.
ವಿದ್ಯಾರ್ಥಿ ಕಾಲೇಜು ನಾಯಕ ಆಕಾಶ್ ಹಾಗೂ ಶಾಲಾ ನಾಯಕಿ ತೇಜಸ್ವಿನಿ ಭಾಷಣ ಮಾಡಿದರು. ವಿದ್ಯಾರ್ಥಿಗಳು ಸಾಮೂಹಿಕ ನೃತ್ಯ, ಭರತನಾಟ್ಯ, ಹಾಡು, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ವಿಜ್ಞಾನ, ರಂಗೋಲಿ, ಧ್ಯಾನ ಗಳಲ್ಲಿ ಚಿತ್ರಕಲೆ, ಎಲೆ ಕಲೆ ಜೊತೆಗೆ ಆಟೋಟಗಳ ಸ್ಪರ್ಧೆ ಯನ್ನೂ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿಯರಾದ ಭೂಮಿಕ, ಕವಿತಾ, ನಿರ್ಮಲಾ, ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರು ಹಾಜರಿದ್ದರು.ನಾಪೋಕ್ಲು: ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಶಾಲಾ ನಾಯಕ ಜೀವಿತ್ ಬೆಳ್ಳಿಯಪ್ಪ ಹಾಗೂ ನಾಯಕಿ ದೇಚಮ್ಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ರತ್ನ ಚರ್ಮಣ್ಣ ದಿನದ ಮಹತ್ವದ ಬಗ್ಗೆ ಮಾತನಾಡಿ, ಜವಾಹರ್ ಲಾಲ್ ನೆಹರು ಅವರ ಆದರ್ಶ, ಗುಣ ನಡತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವಂತೆ ಮಕ್ಕಳಿಗೆ ಹಿತವಚನ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ರಾಜಾ ಚರ್ಮಣ್ಣ, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಜರಿದ್ದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು, ಆಟೋಟಗಳನ್ನು ಹಮ್ಮಿಕೊಂಡಿದ್ದು, ಈ ಸಂದರ್ಭ ಸಂಗೀತ, ನೃತ್ಯ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.ಮಡಿಕೇರಿ: ಇಲ್ಲಿಗೆ ಸಮೀಪದ ಒಕ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಸಿ.ಹೆಚ್.ಓ.ಗಳಾದ ಬ್ರಿಜೇಶ್ ಮತ್ತು ತೇಜ ಅವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾಮದ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಸಿ.ಹೆಚ್.ಓ.ಗಳಾದ ಬ್ರಿಜೇಶ್ ಮತ್ತು ತೇಜ ಅವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾಮದ ಪ್ರಮುಖ ಗೋಪಾಲ್, ಅಂಗನವಾಡಿ ಕಾರ್ಯಕರ್ತೆ ದೇವಕ್ಕಿ, ರೋಹಿಣಿ, ಸ್ವರೂಪ, ಶೈಲಜಾ ಮತ್ತು ಶೈಲಾ ಇನ್ನಿತರರು ಹಾಜರಿದ್ದರು.